೨೦೧೬ ಬೇಸಿಗೆ ಒಲಿಂಪಿಕ್ಸ್
A green, gold and blue coloured design, featuring three people joining hands in a circular formation, sits above the words "Rio 2016", written in a stylistic font. The Olympic rings are placed underneath. | |
ಅತಿಥೇಯ ನಗರ | , |
---|---|
ಧ್ಯೇಯ | ಒಂದು ನವೀನ ಜಗತ್ತು (ಪೋರ್ಚುಗೀಸ್:Um mundo novo) |
ಭಾಗವಹಿಸುತ್ತಿರುವ ರಾಷ್ಟ್ರಗಳು | ೨೦೬ |
ಭಾಗವಹಿಸುತ್ತಿರುವ ಕ್ರೀಡಾಪಟುಗಳು | ೧೧,೦೦೦+ |
ಘಟನೆಗಳು | 306 in 28 ಕ್ರೀಡೆಗಳು |
ವಿದ್ಯುಕ್ತವಾಗಿ ಉದ್ಘಾಟಿಸಿದವರು | ಹಂಗಾಮಿ ಅಧ್ಯಕ್ಷ ಮೈಕೆಲ್ ಟೆಮೆರ್ |
ಕ್ರೀಡಾಪಟುವಿನ ಪ್ರಮಾಣ | ರಾಬರ್ಟ್ ಸ್ಕೆಡ್ಟ್ |
ನ್ಯಾಯಾಧಿಕಾರಿಗಳ ಪ್ರಮಾಣ | ಮಾರ್ಟಿನ್ಹೋ ನೊಬ್ರೆ |
ಒಲಂಪಿಕ್ ಜ್ಯೋತಿ | ವಾಂಡೆರ್ಲಿ ಕಾರ್ಡಿರೊ ಡೆ ಲಿಮ (indoor) ಜಾರ್ಜ್ ಗೋಮ್ಸ್(ಹೊರಾಂಗಣ) |
೨೦೧೬ ಬೇಸಿಗೆ ಒಲಿಂಪಿಕ್ಸ್, ಅಧಿಕೃತವಾಗಿ XXXI ಒಲಿಂಪಿಯಾಡ್ ಆಟಗಳು ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ರಿಯೊ ೨೦೧೬ ಎಂದು ಕರೆಯಲಾಗುತ್ತದೆ, ಇದು ಬ್ರೆಜಿಲ್‌ನ ರಿಯೊ ಡಿ ಜನೈರೊನಲ್ಲಿ ೫ ಆಗಸ್ಟ್ ರಿಂದ ಆಗಸ್ಟ್ ೨೧ ೨೦೧೬ರ ವರಗೆ ನಡೆದ ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ.
ಮೊದಲ ಬಾರಿಗೆ ಪ್ರವೇಶಿಸಿದ ಕೊಸೊವೊ, ದಕ್ಷಿಣ ಸೂಡಾನ್ ಮತ್ತು ನಿರಾಶ್ರಿತರ ಒಲಿಂಪಿಕ್ ತಂಡ ಸೇರಿ ೨೦೭ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ ೧೧,೦೦೦ ಕ್ರೀಡಾಪಟುಗಳು ಪಾಲ್ಗೊಂಡಿದ್ದರು, ೩೦೬ಜೊತೆ ಪದಕಗಳೊಂದಿಗೆ, ೨೦೦೯ರಲ್ಲಿ ಸೇರಿಸಿದ ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಆಟಗಳು ಸೇರಿದಂತೆ ೨೯ ಒಲಿಂಪಿಕ್ ಕ್ರೀಡಾಸ್ಪರ್ಧೆಗಳು ನಡೆದವು, ಈ ಸ್ಪರ್ಧೆಗಳು ಹೋಸ್ಟ್ ನಗರದಲ್ಲಿ ೩೩ ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ, ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರೆಸಿಲಿಯಾ ಮಾನಾಸ್ ನಲ್ಲಿ ೫ ಸ್ಥಳಗಳಲ್ಲಿ ನೆಡೆಯಿತು.
ಇದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಧಾಮಸ್ ಬ್ಯಾಚ್ ಅಧ್ಯಕ್ಷತೆಯಲ್ಲಿ ನೆಡೆದ ಮೊದಲ ಬೇಸಿಗೆ ಒಲಿಂಪಿಕ್ಸ್. ೦೨ ಅಕ್ಟೋಬರ್ ೨೦೦೯ ರಲ್ಲಿ, ಕೋಪನ್ ಹ್ಯಾಗ್, ಡೆನ್ಮಾರ್ಕ್‌ನಲ್ಲಿ ನೆಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ , ರಿಯೊ ಡಿ ಜನೈರೊ ಆತಿಥ್ಯ ವಹಿಸುವ ನಗರ ಎಂದು ಘೋಷಿಸಲಾಯಿತು. ರಿಯೊ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿದ ದಕ್ಷಿಣ ಅಮೆರಿಕದ ಮೊದಲ ನಗರವಾಯಿತು. ಇದು ಪೋರ್ಚುಗೀಸ್ ಮಾತನಾಡುವ ದೇಶದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್, ಆತಿಥ್ಯ ದೇಶದ ಚಿಳಿಗಾಲದಲ್ಲಿ ನೆಡೆದ ಮೊದಲ ಆಟಗಳು, ೧೯೬೯ನಂತರ ಲ್ಯಾಟಿನ್ ಅಮೆರಿಕಾದಲ್ಲಿ ನೆಡೆದ ಮೊದಲ ಆಟಗಳು ಮತ್ತು ೨೦೦೦ ನಂತರ ದಕ್ಷಿಣ ಗೋಲಾರ್ಧದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್ ಆಗಿದೆ.
ಈ ಆಟಗಳನ್ನು ದೇಶದ ಒಕ್ಕೂಟ ಸರ್ಕಾರದ ಅಸ್ಥಿರತೆ, ಜೈಕಾ ವೈರಸ್ ಸುತ್ತ ಹುಟ್ಟಿದ ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿಗಳು, ಗಾನಾಬಾರಾ ಕೊಲ್ಲಿ ಗಮನಾರ್ಹ ಮಾಲಿನ್ಯ ಮತ್ತು ರಷ್ಯಾದ ಉದ್ದೀಪನ ಹಗರಣ ವಿವಾದಗಳಿಂದ ಗುರುತಿಸಿಲಾಯಿತು. ಇದು ಕ್ರೀಡಾಪಟುಗಳು ಭಾಗವಹಿಸುವಿಕೆ ಮೇಲೆ ಪರಿಣಾಮ ಬೀರಿದವು.
ಅತ್ಯಂತ ಹೆಚ್ಚು ಚಿನ್ನ ಗೆಲ್ಲುವ ಮೂಲಕ(೪೬) ಮತ್ತು ಅತ್ಯಂತ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ(೧೨೧) ಅಮೇರಿಕ ಸಂಯುಕ್ತ ಸಂಸ್ಥಾನ, ಕಳೆದ ೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೫ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಗ್ರೇಟ್ ಬ್ರಿಟನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು ಮತ್ತು ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಆತಿಥ್ಯ ವಹಿಸಿದ ನಂತರ ಸ್ಪರ್ಧೆಗಳಲ್ಲಿ ಪದಕಗಳ ಸಂಖ್ಯೆ ಹೆಚ್ಚಿಸಿಕೊಂಡ ಮೊದಲ ರಾಷ್ಟ್ರವಾಯಿತು. ಚೀನಾ ಮೂರನೇ ಸ್ಥಾನ ಪಡೆಯಿತು. ಆತಿಥ್ಯ ವಹಿಸಿದ ದೇಶ ಬ್ರೆಜಿಲ್ ೭ ಚಿನ್ನದ ಪದಕ ಗೆಲ್ಲುವ ಮೂಲಕ ೭ನೇ ಸ್ಥಾನ ಪಡೆಯಿತು, ಬ್ರೆಜಿಲ್ ಯಾವುದೇ ಒಂದು ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದಿದ್ದು ಈ ಒಲಿಂಪಿಕ್ಸ್‌ನಲ್ಲಿ. ಫಿಜಿ, ಕೊಸೊವೊ, ಪೋರ್ಟೊ ರಿಕೊ, ಸಿಂಗಾಪುರ, ತಜಾಕಿಸ್ಥಾನ್, ವಿಯೆಟ್ನಾಂ ಮತ್ತು ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುಗಳು (ಕುವೈತ್‌ನಿಂದ), ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕ ತಂಡು ಕೊಟ್ಟರು ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ ೧೦೦೦ ನೇ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಂಡಿತು. ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಅವರು ಬೆಳ್ಳಿಯನ್ನು ಮತ್ತು ಮಹಿಳಾ ಕುಸ್ತಿಯ ೫೮ ಕೆ.ಜಿ. ವಿಭಾಗದ ಸಾಕ್ಷಿ ಮಲಿಕ್ ಅವರು ಕಂಚಿನ ಪದಕ ತಂದು ಕೊಟ್ಟರು. ಭಾರತ ೨ ಪದಕಗಳೊಂದಿಗೆ ೬೭ ಸ್ಥಾನ ಪಡೆಯಿತು. ಕರ್ನಾಟಕದ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಯಾವುದೇ ಪದಕ ಪಡೆಯಲಿಲ್ಲ.
- ಹೆಸರು = 2016 ಬೇಸಿಗೆ ಒಲಿಂಪಿಕ್ಸ್,
- ದ್ಯೇಯ = ಒಂದು ಹೊಸ ವಿಶ್ವ
- (ಧ್ಯೇಯ = ನಿಮ್ಮ ಉತ್ಸಾಹ ಜೀವಂತವಾಗಿರಲಿ,)
- ಭಾಗವಹಿಸುವ ರಾಷ್ಟ್ರಗಳಯ = 170 ಅರ್ಹ (206 ನಿರೀಕ್ಷಿಸಲಾಗಿದೆ)
- ಭಾಗವಹಿಸುವ ಕ್ರೀಡಾಪಟುಗಳು= 7.926 ಕ್ರೀಡಾಪಟುಗಳು (10,500+ ನಿರೀಕ್ಷೆ)
- ಕ್ರೀಡಾಘಟನೆಗಳು = 28 ಕ್ರೀಡೆ - 306 ಆಟೋಟ
- ಹಿಂದಿನದು = 2012 ಬೇಸಿಗೆ ಒಲಿಂಪಿಕ್ಸ್- ಲಂಡನ್ 2012
- ಉದ್ಘಾಟನಾ ಸಮಾರಂಭ = 5 ಆಗಸ್ಟ್
- ಸಮಾರಂಭದ ಮುಕ್ತಾಯ = 21 ಆಗಸ್ಟ್
- ಕ್ರೀಡಾಂಗಣ = ಮರಕಾನ (Maracanã) ಕ್ರೀಡಾಂಗಣದಲ್ಲಿ
- ಅಧಿಕೃತವಾಗಿ = ಆರಂಭವಾಗಲಿದೆ ಮೈಕೆಲ್ ಟೆಮರ್ -ಅಧ್ಯಕ್ಷ ಫೆಡರೇಟೀವ್ ರಿಪಬ್ಲಿಕ್ ಬ್ರೆಜಿಲ್ ಆಫ್
- ಅಧಿಕೃತವಾಗಿ = ಥಾಮಸ್ ಬ್ಯಾಚ್: ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಅಧ್ಯಕ್ಷ
- ಮುಂದಿನ ಕೂಟ = ಜಪಾನ್-2020 ಬೇಸಿಗೆ ಒಲಿಂಪಿಕ್ಸ್.
ಹರಾಜು ಪ್ರಕ್ರಿಯೆ
[ಬದಲಾಯಿಸಿ]೨೦೧೬ ಒಲಿಂಪಿಕ ಆಟಗಳು ಹರಾಜಿನ ಪ್ರಕ್ರಿಯೆಯನ್ನು ಅಧಿಕೃತವಾಗಿ ೧೬ ಮೇ ೨೦೦೭ ರಂದು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಎಲ್ಲಾ ನಗರಗಳು ಅಂತಾರಾಷ್ಟ್ರೀಯ ಒಲಿಂಪಿಕ ಸಮಿತಿಗೆ (ಐಒಸಿ) ೧೩ ಸೆಪ್ಟೆಂಬರ ೨೦೦೭ರ ಒಳಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಹರಜಿನಲ್ಲಿ ಭಾಗವಹಿಸುವ ಉದ್ದೇಶವನ್ನು ದೃಢೀಕರಿಸಿದರು. ಅರ್ಜಿದರ ನಗರಗಳು ೨೫ ಪ್ರಶ್ನೆಗಳು ಇರುವ ಐಒಸಿ ಅರ್ಜಿಯೊಂದಿಗೆ ಪೂರ್ಣಗೊಂಡಿರುವ ಅಧಿಕೃತ ಹರಜಿನ ಕಡತಗಳನ್ನು ೧೪ ಜನವರಿ ೨೦೦೮ರ ಒಳಗೆ ಸಲ್ಲಿಸಬೇಕಿತ್ತು. ೪ ಜೂನ ೨೦೦೮ ರಂದು, ೪ ನಗರಗಳ ಕಿರುಪಟ್ಟಿ ಮಾಡಲಾಯಿತ್ತು:ಚಿಕಾಗೊ, ಮ್ಯಾಡ್ರಿಡ್, ರಿಯೊ ಡಿ ಜನೈರೊ ಮತ್ತು ಟೋಕಿಯೋ, ಟೋಕಿಯೋ ೧೯೬೪ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿತ್ತು ಮತ್ತು ೨೦೨೦ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯ ವಹಿಸಲಿದೆ. ಆಯ್ಕೆ ಅಭ್ಯರ್ಥಿ ರಿಯೊ ಡಿ ಜನೈರೊಗಿಂತ ಹೆಚ್ಚು ಅಂಕಗಳನ್ನು ಪಡೆದರು ದೋಹಾವನ್ನು ಅಭ್ಯರ್ಥಿ ಹಂತಕ್ಕೆ ಆಯ್ಕೆ ಮಾಡಲಿಲ್ಲ, ಏಕೆಂದರೆ ದೋಹಾ ಐಒಸಿ ಕ್ರೀಡಾ ಕ್ಯಾಲೆಂಡರ್‌ಗಿಂತ ಹೊರಗೆ ಅಕ್ಟೋಬರ್ನಲ್ಲಿ ಒಲಿಂಪಿಕ್ಸ್ ಆಟಗಳನ್ನು ನೆಡೆಸಲು ಬಯಸಿತ್ತು. ಪ್ರೇಗ್ ಮತ್ತು ಬಾಕು ಸಹ ಕಿರುಪಟ್ಟಿಯಲ್ಲಿ ಸೇರಲು ವಿಫಲವಾದವು.[5]
೨೦೧೨ ಬೇಸಿಗೆ ಒಲಿಂಪಿಕ್ಸ್‌ನ ಹರಜು ಪ್ರಕ್ರಿಯೆಯ ಅರ್ಹತೆ ನಿರ್ಧಾರ ಆಯೋಗದ ಅಧ್ಯಕ್ಷತೆಯನ್ನು ವಹಿಸಿದ ಮೊರೊಕೊದ ನಾವಲ್ ಅಲ್ ಮುತವಕಿಲ್ ಅವರು ೧೦ ಸದಸ್ಯರ ಮೌಲ್ಯಮಾಪನ ಆಯೋಗದ ನೇತೃತ್ವವನ್ನು ವಹಿಸಿದರು. ಇವರು ಚುನಾವಣೆಗೆ ಒಂದು ತಿಂಗಳು ಇರುವ ಹಾಗೆ, ಸೆಪ್ಟೆಂಬರ್ ೨ರಂದು, ಐಒಸಿ ಸದಸ್ಯರಿಗೆ ಸಮಗ್ರ ತಾಂತ್ರಿಕ ಅಪ್ರೈಸಲ್ ನೀಡಿದರು.[6]
ಹರಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಗರಗಳು, ೧೧೫ ಮತ ಹಾಕುವ ಸದಸ್ಯರನ್ನು ಸಂಪರ್ಕಿಸದಿರಲು ಮತ್ತು ನೇರವಾಗಿ ಪ್ರಭಾವ ಬೀರುವುದನ್ನು ತಡೆಯಲು ಹಲವು ನಿರ್ಬಂಧಗಳನ್ನು ಹುಟ್ಟುಹಾಕಲಾಗಿತ್ತು. ಈ ನಗರಗಳು ಐಒಸಿ ಸದಸ್ಯರನ್ನು ಆಮಂತ್ರಿಸುವ ಹಾಗೆ ಇರಲಿಲ್ಲ ಅಥವಾ ಯಾವುದೇ ಉಡುಗರೆಯನ್ನು ಸಹ ಈ ಸದಸ್ಯರಿಗೆ ಕಳುಹಿಸುವ ಹಾಗೆ ಇರಲಿಲ್ಲ. ಆದಾಗ್ಯೂ ಈ ನಗರಗಳು ದೇಶಿಯ ಬೆಂಬಲ, ಕ್ರೀಡಾ ಮಾಧ್ಯಮ ಬೆಂಬಲ ಮತ್ತು ಸಾಮಾನ್ಯ ಅಂತರರಾಷ್ಟ್ರೀಯ ಮಾಧ್ಯಮ ಬೆಂಬಲ ಪಡೆಯವ ಮೂಲಕ ಸದಸ್ಯರ ಮೇಲೆ ಪ್ರಭಾವ ಪರೋಕ್ಷವಾಗಿ ಪ್ರಭಾವ ಬೀರಲು , ಸಾರ್ವಜನಿಕ ಸಂಬಂಧ ಮತ್ತು ಮಾಧ್ಯಮ ಕಾರ್ಯಕ್ರಮಗಳ ಮೇಲೆ ಹೆಚ್ಚು ಹೊಡಿಕೆ ಮಾಡಿದವು.
ಅಂತಿಮ ಮತದಾನ ಕೋಪೆನ್ಹೇಗನ್ನಲ್ಲಿ, ೨ ಅಕ್ಟೋಬರ್ ೨೦೦೯ ರಂದು ಆಯೋಜಿಸಲಾಗಿತ್ತು, ಮ್ಯಾಡ್ರಿಡ್ ಮತ್ತು ರಿಯೊ ಡಿ ಜನೈರೊ ಆಟಗಳು ನೆಡೆಸಲು ನೆಚ್ಚಿನ ನಗರಗಳಾದವು. ಮೊದಲ ಮತ್ತು ಎರಡನೆ ಹಂತದ ಮತದಾನದ ನಂತರ ಚಿಕಾಗೊ ಮತ್ತು ಟೋಕಿಯೋ ಹೊರಬಿದ್ದಿವು, ಕೊನೆಯ ಸುತ್ತಿಗೆ ಹೋಗುವಾಗ ರಿಯೊ ಮ್ಯಾಡ್ರಿಡ್‌ಗಿಂತ ಗಮನಾರ್ಹ ಮುನ್ನಡೆ ಪಡಿಯಿತ್ತು. ಪಡೆದ ಮುನ್ನಡೆ ಮತ್ತು ರಿಯೊ ಡಿ ಜನೈರೊ ೨೦೧೬ ಬೇಸಿಗೆ ಒಲಿಂಪಿಕ್ಸ್‌ನ ಆತಿಥ್ಯ ವಹಿಸುವ ನಗರ ಎಂದು ಘೋಷಿಸಲಾಯಿತು.
೨೦೧೬ ಬೇಸಿಗೆ ಒಲಿಂಪಿಕ್ಸ್ ಹರಾಜು ಫಲಿತಾಂಶಗಳು[8] | |||||
---|---|---|---|---|---|
ನಗರ | ದೇಶ | ಸುತ್ತು ೧ | ಸುತ್ತು ೨ | ಸುತ್ತು ೩ | |
ರಿಯೊ ಡಿ ಜನೈರೊ | Brazil | ೨೬ | ೪೬ | ೬೬ | |
ಮ್ಯಾಡ್ರಿಡ್ | Spain | ೨೮ | ೨೯ | ೩೨ | |
ಟೋಕಿಯೋ | ಜಪಾನ್ | ೨೨ | ೨೦ | — | |
ಚಿಕಾಗೊ | ಟೆಂಪ್ಲೇಟು:Country data ಯು.ಎಸ್.ಏ | ೧೮ | — | — |
೨೦೧೬ ಬೇಸಿಗೆ ಒಲಿಂಪಿಕ್ಸ್
[ಬದಲಾಯಿಸಿ]- ಅಧಿಕೃತವಾಗಿ (the Games of the XXXI (Olympiad)31 ರ ಒಲಿಂಪಿಯಾಡ್ ಆಟೋಟಗಳು ಮತ್ತು ರಿಯೊ 2016 ಎಂದು ಕರೆಯುವರು. ಈ ಒಲಿಂಪಿಕ್ ಆಟೋಟ ಸ್ಪರ್ಧೆಗಳು ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ. 2016 ಆಗಸ್ಟ್ 5 ರಿಂದ 21 ಆಗಸ್ಟ್ ವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತದೆ. ದಾಖಲೆ ಸಂಖ್ಯೆಯ ದೇಶಗಳ ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿವೆ. 206(256) ರಾಷ್ಟ್ರಗಳ ಒಲಿಂಪಿಕ್ ಕಮಿಟಿಗಳಿಂದ 10500 ಸ್ಪರ್ಧಿಗಳು ಭಾಗವಹಿಸುವರು. ಕೊಸೊವೊ ಮತ್ತು ದಕ್ಷಿಣ ಸುಡಾನ್ ಮೊದಲ ಬಾರಿಗೆ ಪಾಲ್ಗೊಳ್ಳುವರು. ಇದರಲ್ಲಿ 306 ಪದಕಗಳನ್ನು ಪ್ರಧಾನ ಮಾಡುವರು. 28 ಒಲಿಂಪಿಕ್ ಆಟಗಳು; ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಸೇರಿದಂತೆ ಇವುಗಳನ್ನು ಹೊಸದಾಗಿ 2009 ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೇರಿಸಿದೆ. (ಇಲ್ಲಿ ಒಲಿಂಪಿಕ್ ಕ್ರೀಡಾ ಪರಿಸರೀಯ ಸವಾಲು ಹೊಂದಿರುತ್ತದೆ) ಈ ಕ್ರೀಡಾಕೂಟವು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ(ಬ್ರೆಜಿಲ್‍ನ ದೊಡ್ಡ ನಗರ) ನಗರದ ಐದು ಸ್ಥಳಗಳಲ್ಲಿ ನಡೆಯುತ್ತದೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರ್ರೆಜಿಲಾ (ಬ್ರೆಜಿಲ್ ರಾಜಧಾನಿ) ಮತ್ತು ಮನಾಸ್‍ಗಳಲ್ಲಿ ನಡೆಯಲಿದೆ.
- ಇವು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಯ (IOC) ಅಧ್ಯಕ್ಷ ಥಾಮಸ್ ಬಾಚ್ ಅಡಿಯಲ್ಲಿ ನಡೆಯುವ ಮೊದಲ ಬೇಸಿಗೆ ಒಲಿಂಪಿಕ್. ರಿಯೊ ಡಿ ಜನೈರೊ(Rio de Janeiro) ಆತಿಥೇಯ ನಗರವೆಂದು ಅಕ್ಟೋಬರ್ 2009 ರಲ್ಲಿ ಡೆನ್ಮಾರ್ಕ್'ನ ಕೋಪೆನ್ಹೇಗನ್ನಲ್ಲಿ, ನಡೆದ 121 ನೇ ಐಒಸಿ ಸಭೆಯಲ್ಲಿ (ಸೆಷನ್) ಘೋಷಿಸಲಾಯಿತು. ರಿಯೊ ಬೇಸಿಗೆಯ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಮೊದಲೆನೆಯ ದಕ್ಷಿಣ ಅಮೆರಿಕನ್ ಸಿಟಿ ಎನಿಸಿಕೊಂಡಿತು. ಪೋರ್ಚುಗೀಸ್ ಭಾಷೆ ಮಾತನಾಡುವ ದೇಶದಲ್ಲಿ ಮೊದಲು ನಡೆದ ಒಲಿಂಪಿಕ್ ಆಟಗಳು ಇವು. 1968 ರ ನಂತರ ಲ್ಯಾಟಿನ್ ಅಮೆರಿಕಾದಲ್ಲಿ ನಡೆದ ಮೊದಲ ಒಲಿಂಪಿಕ್ ಕ್ರೀಡಾಕೂಟ; 2000 ರ ನಂತರ ದಕ್ಷಿಣ ಗೋಳಾರ್ಧದಲ್ಲಿ ನಡೆದ ಮೊದಲ ಒಲಿಂಪಿಕ್ ಕ್ರೀಡಾಕೂಟ.
ಒಲಂಪಿಕ್ ಕ್ರೀಢಾ ಸೇವೆಗೆ ಸನ್ಮಾನ
[ಬದಲಾಯಿಸಿ]- Kipchoge Keino
- ಕಿಪ್ ಕೈನೊ
- ಸಮಾಜಸೇವೆ ಸಲ್ಲಿಸಿದ ಒಲಿಂಪಿಯನ್ ಒಬ್ಬರನ್ನು ಗುರುತಿಸಿ ಆ ಸಮಾರಂಭದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಒಲಿಂಪಿಕ್ಸ್ ಚರಿತ್ರೆಯಲ್ಲೇ ಇಂತಹದ್ದೊಂದು ಘಟನೆ ನಡೆದಿದ್ದು ಇದೇ ಮೊದಲು. ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಒಲಿಂಪಿಯನ್ ಒಬ್ಬರಿಗೆ ನೀಡಿದ ಅತ್ಯುನ್ನತ ಗೌರವ ಇದು. ಬಿಳಿಯ ಅಂಗಿ ಧರಿಸಿದ್ದ ಸುಮಾರು ಇನ್ನೂರು ಪುಟ್ಟ ಮಕ್ಕಳು ನರ್ತಿಸುತ್ತಾ ಆ ಪ್ರಶಸ್ತಿ ಪುರಸ್ಕೃತ ವ್ಯಕ್ತಿಯನ್ನು ವೇದಿಕೆಯ ಬಳಿ ಕರೆದೊಯ್ದರು. ಆಗ ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಮಾತನಾಡಿ ‘ಜಗತ್ತು ಅಶಾಂತಿಯ ಬೇಗುದಿಯಲ್ಲಿದೆ. ಮನುಷ್ಯರಾದ ನಾವೆಲ್ಲರೂ ಸಮಾನರು. ಎಂದೆಂದೂ ಒಗ್ಗೂಡಿ ನಡೆಯುವ’ ಎಂಬ ಆಶಯ ವ್ಯಕ್ತಪಡಿಸುತ್ತಲೇ, ಆ ಪ್ರಶಸ್ತಿ ವಿಜೇತನನ್ನು ಸ್ವಾಗತಿಸಿದರು. ಅಂತಹ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು ಕೆನ್ಯಾ ದೇಶದ ಕಿಪ್ ಕೈನೊ. ಇಡೀ ಕ್ರೀಡಾಂಗಣದಲ್ಲಿ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಜಗತ್ತಿನಾದ್ಯಂತ ಹಳಬರು ಕಿಪ್ ಅವರನ್ನು ನೋಡಿ ರೋಮಾಂಚನದಿಂದ ಸಂಭ್ರಮಿಸಿದರು.
- ತಮ್ಮ ಸಂಪರ್ಕಕ್ಕೆ ಬಂದ ಅನಾಥ ಮಕ್ಕಳನ್ನೆಲ್ಲಾ ಅವರ ಮನೆಯಲ್ಲಿರಿಸಿಕೊಂಡು ಅವರೆಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.ಅನಾಥಾಲಯ ಬೆಳೆದಿದೆ. ಅದೇ ಊರಿನ ಇನ್ನೊಂದು ಕಡೆ ಪ್ರಾಥಮಿಕ ಶಾಲೆ ಕಟ್ಟಿದ್ದಾರೆ. ಮಾಧ್ಯಮಿಕ ಶಾಲೆಯನ್ನೂ ನಡೆಸುತ್ತಿದ್ದಾರೆ. ಅಲ್ಲಿ ತಾವೇ ನಡೆಸುವ ಅನಾಥಾಲಯದಲ್ಲಿರುವ ನೂರಾರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಕ್ರೀಡಾ ತರಬೇತಿ ನೀಡಿದ್ದಾರೆ.ಈಗ ಇದು ಕೆನ್ಯಾದ ಉತ್ತಮ ಶಾಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಅದೇ ಊರಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವಲ್ಲಿ ಕಿಪ್ ಪಾತ್ರ ಬಲು ದೊಡ್ಡದು. ಇದೀಗ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಕೆನ್ಯಾ ತಂಡದ ಅಥ್ಲೀಟ್‌ಗಳು ಇದೇ ಕ್ರೀಡಾಂಗಣದಲ್ಲಿ ತರಬೇತು ಪಡೆದಿದ್ದಾರೆ. ಇವರ ತರಬೇತಿಯಿಂದ ಲಂಡನ್ ಒಲಿಂಪಿಕ್ಸ್‌ನಲ್ಲಿ ಕೆನ್ಯಾ ಎರಡು ಚಿನ್ನ ಗೆದ್ದಿತ್ತು. [೧]
ಒಲಿಂಪಿಕ್ಸ್ 2016 ಕ್ಕೆ ಇತರ ಉಮೇದಿಗಳು
[ಬದಲಾಯಿಸಿ]- 2016ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಆಸಕ್ತಿ ಇರುವ ದೇಶಗಳು ಬಿಡ್ ಸಲ್ಲಿಸಬೇಕೆಂದು ಐಒಸಿ 2007ರ ಸೆಪ್ಟೆಂಬರ್ 13ರಂದು ಹೇಳಿತ್ತು. ಅರ್ಜಿ ಸಲ್ಲಿಸಿದ ರಾಷ್ಟ್ರಕ್ಕೆ ಪ್ರಮುಖವಾಗಿ 25 ಪ್ರಶ್ನೆಗಳನ್ನು ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಹಲವು ರಾಷ್ಟ್ರಗಳು ಉತ್ತರಿಸಿ ಅರ್ಜಿ ಸಲ್ಲಿಸಿದ್ದವು.
- ಆಗ ಒಲಿಂಪಿಕ್ಸ್ ಸಮಿತಿ ಕೊನೆಯಲ್ಲಿ ನಾಲ್ಕು ನಗರಗಳ ಪಟ್ಟಿಯನ್ನು ತಯಾರಿಸಿತು. ಚಿಕ್ಯಾಗೊ, ಮ್ಯಾಡ್ರಿಡ್, ರಿಯೊ ಡಿ ಜನೈರೊ ಮತ್ತು ಟೊಕಿಯೊ ಆತಿಥ್ಯದ ಅವಕಾಶ ಪಡೆಯಲು ಮುಂಚೂಣಿಯಲ್ಲಿದ್ದವು. ಅಂತಿಮವಾಗಿ ಮೂರನೇ ಸುತ್ತಿನಲ್ಲಿ ಬ್ರೆಜಿಲ್ ೬೬ ಅಂಕ ಪಡೆದು, ಈ ಅವಕಾಶ ರಿಯೊ ಪಾಲಾಯಿತು.
ಸವಾಲುಗಳು
[ಬದಲಾಯಿಸಿ]- ಆತಿಥ್ಯದ ಅವಕಾಶ ಲಭಿಸಿದ ವರ್ಷದಿಂದಲೇ ಬ್ರೆಜಿಲ್ ಸರ್ಕಾರ ಸಿದ್ಧತೆಯ ಕೆಲಸಗಳನ್ನು ಮಾಡಲು ಆರಂಭಿಸಿತು. ಆದರೆ, ಈ ಕಾರ್ಯಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿತ್ತು. ಒಲಿಂಪಿಕ್ಸ್ ಕೂಟದ ಸಂಘಟನಾ ಸಮಿತಿಯ ಸಿಒಒ ಫ್ಲಾವಿಯಾ ಪೆಸ್ತಾನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೂ ಎದೆಗುಂದದ ಬ್ರೆಜಿಲ್ ಸರ್ಕಾರ ಈ ಕಾರ್ಯವನ್ನು ಮತ್ತಷ್ಟು ವೇಗವಾಗಿ ಮಾಡಲು ಆರಂಭಿಸಿತು. ವಿಶ್ವದ ದೊಡ್ಡ ದೊಡ್ಡ ಕ್ರೀಡಾಕೂಟಗಳನ್ನು ಸಂಘಟಿಸಿದ ಅನುಭವ ಹೊಂದಿರುವ ಸಾಂಬಾ ನಾಡು ಈಗ ಕೂಟಕ್ಕೆ ಸಜ್ಜಾಗಿದೆ. ಬ್ರೆಜಿಲ್ 2011ರಲ್ಲಿ ವಿಶ್ವ ಮಿಲಿಟರಿ ಗೇಮ್ಸ್, 2013ರಲ್ಲಿ ಫಿಫಾ ಕಾನ್ಪಡರೇಷನ್ ಕಪ್, 2007ರಲ್ಲಿ ಪ್ಯಾನ್ ಅಮೆರಿಕ ಕ್ರೀಡಾಕೂಟ ಮತ್ತು 2014ರಲ್ಲಿ ಫಿಫಾ ವಿಶ್ವಕಪ್ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.
- ಜೈಕಾ ವೈರಸ್ ಸಮಸ್ಯೆ:
- ಅಲ್ಲಿ ಜೈಕಾ ವೈರಸ್ ಹರಡುವ ಭೀತಿ ಎದುರಾಗಿರುವ ಕಾರಣ ಕೂಟವನ್ನು ಬೇರೆಡಗೆ ಸ್ಥಳಾಂತರಿಸಬೇಕೆಂದು ಭಾರಿ ಒತ್ತಾಯ ಕೇಳಿಬರುತ್ತಿದೆ. ಆದರೆ ಬ್ರೆಜಿಲ್ ಸರ್ಕಾರ ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. ‘ಜೈಕಾ ವೈರಸ್‌ನಿಂದ ಕ್ರೀಡಾಪಟುಗಳು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಆದ್ದರಿಂದ ಒಲಿಂಪಿಕ್ಸ್ ಸ್ಥಳಾಂತರಿಸುವುದಿಲ್ಲ’ ಎಂದು ಬ್ರೆಜಿಲ್ ಸರ್ಕಾರ ಹೇಳಿದೆ. ಆದ್ದರಿಂದ ಕೂಟ ಆಯೋಜನೆ ಹೇಗಿರಲಿದೆ ಎನ್ನುವ ಕುತೂಹಲವಿದೆ.
ಒಲಿಂಪಿಕ್‌ನ ಮೂಲ ಧ್ಯೇಯ
[ಬದಲಾಯಿಸಿ]ವೇಗ, ಎತ್ತರ ಮತ್ತು ಬಲಿಷ್ಠ:
|
ಒಲಂಪಿಕ್ ಧ್ವಜ
[ಬದಲಾಯಿಸಿ]- ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ಐದು ವರ್ತುಲಗಳು ಐದು ವರ್ಣಗಳಲ್ಲಿ (ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು) ಗೋಚರಿಸುತ್ತವೆ. ವಿಶೇಷವೆಂದರೆ ವಿಶ್ವದ ಪ್ರತಿಯೊಂದು ರಾಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ (ಒಲಿಂಪಿಕ್ ಚಿಹ್ನೆಯಲ್ಲಿರುವ ಐದು ಬಣ್ಣಗಳು ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.
ಮುಖ್ಯ ಮಾಹಿತಿ
[ಬದಲಾಯಿಸಿ]- ಒಲಿಂಪಿಕ್ಸ್‌ನ ಸ್ಪರ್ಧೆಗಳು ಬ್ರೆಜಿಲ್‌ನ ಪ್ರಮುಖ ಐದು ನಗರಗಳಲ್ಲಿ (ಬೆಲೊ ಹಾರಿಜಂಟ್, ಸಾಲ್ವಡರ್, ಬ್ರಸಿಲಿಯಾ, ರಿಯೊ ಡಿ ಜನೈರೊ ಮತ್ತು ಮನಾಸ್) ನಡೆಯಲಿದೆ. ಮುಖ್ಯ ಕ್ರೀಡಾಂಗಣ ರಿಯೊದಲ್ಲಿದೆ.
- ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ದಕ್ಷಿಣ ಅಮೆರಿಕದ ಮೊದಲ ನಗರ ಎನ್ನುವ ಕೀರ್ತಿ ರಿಯೊ ಹೊಂದಿದೆ.
- ಕೊಸೊವಾ, ದಕ್ಷಿಣ ಸೂಡಾನ್‌ಗೆ ಇದು ಮೊದಲ ಒಲಿಂಪಿಕ್ಸ್
- ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ರಗ್ಬಿ ಮತ್ತು ಗಾಲ್ಫ್ ಹೊಸದಾಗಿ ಸ್ಥಾನ ಪಡೆದಿವೆ.
ಅಂತಿಮ ಮಾಹಿತಿಗಳು
[ಬದಲಾಯಿಸಿ]- 31-7-2016:
ಭಾಗವಹಿಸುವ ರಾಷ್ಟ್ರಗಳು | 206 |
---|---|
ಒಟ್ಟು ಮುಖ್ಯ ಕ್ರೀಡೆಗಳು | 28 |
ಒಟ್ಟು ಸ್ಪರ್ಧೆಗಳು | 41 |
ಭಾಗವಹಿಸುವ ಒಟ್ಟು ಕ್ರೀಡಾಪಟುಗಳು | 10293 |
ಒಲಂಪಿಕ್ ಸ್ಪರ್ಧೆಗಳು ನಡೆಯುವ ಸ್ಥಳಗಳು | 33 |
ಒಲಂಪಿಕ್ ಕ್ರೀಡಾಕೂಟಕ್ಕೆ ಆದಾಯ ಮತ್ತು ವೆಚ್ಚ ಅಥವಾ ಹೂಡಿಕೆ
[ಬದಲಾಯಿಸಿ]ಆದಾಯ | |
ಫೆಡರಲ್ & ರಾಜ್ಯ ಸರ್ಕಾರದ ಒಟ್ಟು | ಬ್ರೆಜಿಲ್ ಡಾಲರ್‍ನಲ್ಲಿ(R$) |
---|---|
ಜನರಲ್ ಒಟ್ಟು | 9106905.02 |
ಖಾಸಗಿ ನಿಧಿಗಳ | 2804822.16 |
ಸಾರ್ವಜನಿಕ ಹಣ | 6302082.86 |
ಸಾರ್ವಜನಿಕ ಆದಾಯ ಒಟ್ಟು-1 | 56,015,708.68 |
ಸಾರ್ವಜನಿಕ ಆದಾಯ ಒಟ್ಟು -2 | 34,033,726.00 |
ಎಲ್ಲಾ ಒಟ್ಟು | 108263244.7 |
ಹೂಡಿಕೆ | |
ಒಲಿಂಪಿಕ್ ಪಾರ್ಕ್ | 10.3 ಬಿಲಿಯನ್ |
ಸಾರ್ವಜನಿಕ ಸಾರಿಗೆ | 14.48 ಬಿಲಿಯನ್ |
ಜನರಲ್-ಇತರೆ(ಒಟ್ಟು) | 4.18 ಬಿಲಿಯನ್ |
ಎಲ್ಲಾ ಒಟ್ಟು | 28.96 ಬಿಲಿಯನ್ (2896 ಕೋಟಿ R$) |
ಒಲಂಪಿಕ್ ಜ್ಯೋತಿ
[ಬದಲಾಯಿಸಿ]- ಒಲಂಪಿಕ್ ಜ್ಯೋತಿ ದೇಶದ 300 ನಗರಗಳ ಮೂಲಕ ಸಾಗಿ ಆಗಸ್ಟ್ 5ರಂದು ಒಲಿಂಪಿಕ್ಸ್ ನಡೆಯುವ ಮರಾಕಾನ ಕ್ರೀಡಾಂಗಣದಲ್ಲಿ ಬಂದು ಸೇರಲಿದೆ. ವೇತನ ಹೆಚ್ಚಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಕೆಲವರು ಆಂಗ್ರ ಡೊಸ್ ರಿಯೆಸ್ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಆ ಮಾರ್ಗದಲ್ಲಿ ಜ್ಯೋತಿ ಸಾಗಿ ಬಂದಿದ್ದರಿಂದ ಪ್ರತಿಭಟನಾ ನಿರತರು ಜ್ಯೋತಿ ತಡೆದು ಗಲಾಟೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ರಿಯೊ ಡಿ ಜನೈರೊ ರಾಜ್ಯ ಭದ್ರತಾ ಕಾರ್ಯದರ್ಶಿ ಜೋಸ್ ಮರಿಯಾನೊ ಬೆಲ್‌ಟ್ರೇಮ್ ತಿಳಿಸಿದ್ದಾರೆ. ಒಲಿಂಪಿಕ್ಸ್ ಜ್ಯೋತಿಯನ್ನು ತಡೆಯುವುದು ಅಕ್ಷಮ್ಯ ಅಪರಾಧ. ಅಂತಹವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ಜ್ಯೋತಿ ಸಾಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ.
ಭಾರತದಲ್ಲಿ 'ರನ್ ಫಾರ್ ರಿಯೊ’
[ಬದಲಾಯಿಸಿ]- ಯುವ ಸಮು ದಾಯದಲ್ಲಿ ಒಲಿಂಪಿಕ್ಸ್ ಬಗೆಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ 31-7-2016 ಭಾನುವಾರ ‘ರನ್ ಫಾರ್ ರಿಯೊ’ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, 20 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ.ಮೇಜರ್ ಧ್ಯಾನಚಂದ್ ಕ್ರೀಡಾಂಗಣ ದಲ್ಲಿ ಆರಂಭವಾಗುವ ಈ ಓಟ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಅಂತ್ಯವಾಗಲಿದೆ.[೭]
- 1900ರಿಂದಲೇ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇದುವರೆಗೂ 23 ಬಾರಿ ವಿಶ್ವದ ಶ್ರೇಷ್ಠ ಕೂಟದಲ್ಲಿ ಭಾಗವಹಿಸಿದೆ. ತಮ್ಮ ಚೊಚ್ಚಲ ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್ ಓಟ ಮತ್ತು 200 ಮೀಟರ್ಸ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕೋಲ್ಕತ್ತದ ನಾರ್ಮನ್ ಗಿಲ್ಬರ್ಟ್ ಪ್ರಿಚರ್ಡ್ ಬೆಳ್ಳಿ ಪದಕಗಳನ್ನು ಜಯಿಸಿದ್ದರು. ನಾರ್ಮನ್ ಪದಕಗಳನ್ನು ಗೆದ್ದ ಬಳಿಕ ಭಾರತ 22 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ.
- ಪಟಿಯಾಲ, ಬೆಂಗಳೂರು, ಕೇರಳ ಸೇರಿದಂತೆ ನಾಲ್ಕೂ ವಲಯಗಳಲ್ಲಿ ಅಭ್ಯಾಸಕ್ಕೆ ಒಟ್ಟು 12 "ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರ"[೮] ಗಳಿವೆ. ಒಲಿಂಪಿಕ್ಸ್‌ನಂಥ ಕೂಟಕ್ಕೆ ವಿದೇಶಿ ಕೋಚ್ ಬೇಕು ಎಂದಾಗ ಭಾರತ ಸರ್ಕಾರ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತದೆ. ಭಾರತದ ಅಥ್ಲೀಟ್ ಗಳು ತರಬೇತಿ ಪಡೆಯಲು ಸ್ಪೇನ್, ಅಮೆರಿಕ, ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ.
- 2016ರ ಒಲಿಂಪಿಕ್ಸ್‌ಗೆ ಹೆಚ್ಚು ಕ್ರೀಡಾಪಟುಗಳು ಅರ್ಹತೆ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ (ಟಾಪ್) ಯೋಜನೆ ಜಾರಿಗೆ ತಂದಿದೆ. ಕೋಚ್, ಕ್ರೀಡಾ ಪರಿಕರ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಸರ್ಕಾರ ನೆರವಾಗುತ್ತಿದೆ. ಕ್ರೀಡಾಪಟುಗಳ ವೈಯಕ್ತಿಕ ಖರ್ಚಿಗೆ ಮಾಸಿಕ ರೂ.1 ಲಕ್ಷ ಕೊಡಲು ಸರ್ಕಾರ ಮುಂದಾಗಿದೆ. (ಮ್ಯಾಪ್+))
ಅಥ್ಲೆಟಿಕ್ಸ್‌ನಲ್ಲಿ ಸಾಧನೆ
[ಬದಲಾಯಿಸಿ]- ಗುವಾಹಟಿಯಲ್ಲಿ ೨೦೧೬ರ ನಡೆದ ದಕ್ಷಿಣ ಏಷ್ಯಾ ಕೂಟದಲ್ಲಿ ಭಾರತ 308 ಪದಕಗಳನ್ನು ಗೆದ್ದಿದೆ. ಅಥ್ಲೆಟಿಕ್ಸ್‌ನಲ್ಲಿ ಬಂದಿದ್ದು 58 ಚಿನ್ನದ ಪದಕಗಳು. ಜೊತೆಗೆ ಅಗ್ರ ರ್ಯಾಂಕ್ ಗಳಿಸಿದೆ.
- ಹದಿನೇಳು ಏಷ್ಯನ್ ಕ್ರೀಡಾಕೂಟಗಳಿಂದ ಭಾರತ ಒಟ್ಟು 616 ಪದಕಗಳನ್ನು ಜಯಿಸಿದೆ. ಅಥ್ಲೆಟಿಕ್ಸ್‌ನಲ್ಲಿ ಬಂದ ಪದಕಗಳ ಸಂಖ್ಯೆಯೇ 72. ಇನ್ನು ಕಾಮನ್‌ವೆಲ್ತ್ ಕೂಟದಲ್ಲಿ ಭಾರತ ಒಟ್ಟು 436 ಪದಕಗಳನ್ನು ಗೆದ್ದಿದೆ. ಆದರೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಭಾರತ ಜಯಿಸಿದ ಪದಕಗಳ ಸಂಖ್ಯೆ ಎರಡು
- ಡಿಸ್ಕಸ್ ಎಸೆತದಲ್ಲಿ ಭಾರತದ ಭರವಸೆ ಎನಿಸಿರುವ ವಿಕಾಸ್ ಗೌಡ, ಕೃಷ್ಣಾ ಪೂನಿಯಾ ಅವರ ‘ಸಾಧನೆ’:
- ವರ್ಷಪೂರ್ತಿ ಅಮೆರಿಕದಲ್ಲಿ ತರಬೇತಿ ಪಡೆಯುವ ಕರ್ನಾಟಕದ ವಿಕಾಸ್ 2012ರ ಒಲಿಂಪಿಕ್ಸ್‌ನಲ್ಲಿ 64.79 ಮೀಟರ್ಸ್ ದೂರ ಮಾತ್ರ ಡಿಸ್ಕ್ ಎಸೆದಿದ್ದರು. ಆದರೆ ವಿಶ್ವದ ಶ್ರೇಷ್ಠ ಕೂಟದಲ್ಲಿ ಅವರಿಗೆ ತಮ್ಮ ಹೆಸರಿನಲ್ಲಿ 66.28 ಮೀಟರ್ಸ್ ದಾಖಲೆ ಇದೆ.(ಲಿಥುವೇನಿಯಾದ ವಿರ್ಜಿಲಿಜುಸ್ ಅಲೆಕ್ನಾ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 69.89 ಮೀಟರ್ಸ್ ಡಿಸ್ಕ್ ಎಸೆದಿದ್ದು ಒಲಿಂಪಿಕ್ಸ್ ದಾಖಲೆ ಎನಿಸಿದೆ.)
- ಪೂನಿಯಾ 2012ರ ಒಲಿಂಪಿಕ್ಸ್‌ನಲ್ಲಿ 63.54 ಮೀಟರ್ಸ್ ಎಸೆದಿದ್ದರು. ಇನ್ನೊಬ್ಬ ಅಥ್ಲೀಟ್ ಸೀಮಾ ಅಂಟಿಲ್ ಕೂಡ 61.91 ಮೀಟರ್ಸ್ ಡಿಸ್ಕ್ ಎಸೆದು ಅರ್ಹತಾ ಸುತ್ತಿನಿಂದಲೇ ಹೊರಬಿದ್ದಿದ್ದರು. (ಜರ್ಮನಿಯ ಮಾರ್ಟಿನಾ ಹೆಲ್‌ಮೆನ್ 1988ರ ಕೂಟದಲ್ಲಿ 72.30 ಮೀಟರ್ಸ್ ಎಸೆದದ್ದು ಒಲಿಂಪಿಕ್ಸ್ ದಾಖಲೆ ಎನಿಸಿದೆ. ಹಿಂದಿನ ಒಲಿಂಪಿಕ್ಸ್‌ನಲ್ಲಿ ಕ್ರೊವೇಷ್ಯಾದ ಸ್ಯಾಂಡ್ರಾ ಪೆರ್ಕೊವಿಕ್ (69.11 ಮೀಟರ್ಸ್) ಚಿನ್ನ ಗೆದ್ದಿದ್ದರು.)
- ಶಾಟ್‌ಪುಟ್:ರಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಶಾಟ್‌ಪಟ್ ಸ್ಪರ್ಧಿ ಇಂದರ್‌ಜಿತ್ ಸಿಂಗ್ ಹೋದ ವರ್ಷ ಚೀನಾದ ವುಹಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದರು. ಏಷ್ಯನ್ ಗ್ರ್ಯಾಂಡ್ ಪ್ರಿ ಯಲ್ಲೂ ಇದೇ ಸಾಧನೆ ಮಾಡಿದ್ದರು. 19.70 ಮೀಟರ್ಸ್ ದೂರ ಗುಂಡು ಎಸೆದಿದ್ದು ವೈಯಕ್ತಿಕ ಶ್ರೇಷ್ಠ ಸಾಧನೆ ಎನಿಸಿದೆ.
- ಓಟ : ಏಷ್ಯನ್ ಕ್ರೀಡಾಕೂಟ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನ 800 ಮೀಟರ್ಸ್ ಓಟದಲ್ಲಿ ಐದು ಪದಕಗಳನ್ನು ಗೆದ್ದಿರುವ ಟಿಂಟು ಲೂಕಾ ಏಷ್ಯಾ ವಲಯದಲ್ಲಷ್ಟೇ ಗಮನ ಸೆಳೆಯುತ್ತಾರೆ. ವಿದೇಶದಲ್ಲಿ ತರಬೇತಿ ಪಡೆದಿರುವ ಕೇರಳದ ಟಿಂಟು ಹಿಂದಿನ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.800 ಮೀಟರ್ಸ್ ಗುರಿಯನ್ನು ಮುಟ್ಟಲು ಟಿಂಟು ಒಂದು ನಿಮಿಷ 59.69 ಸೆಕೆಂಡು ತೆಗೆದುಕೊಂಡಿದ್ದರು. ಈ ವಿಭಾಗದಲ್ಲಿ ರಷ್ಯಾದ ಮರಿಯಾ ಸವಿನೊವಾ ಒಂದು ನಿಮಿಷ 56.19 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.
- 3000 ಮೀಟರ್ಸ್ ಸ್ಟೀಫಲ್ ಚೇಸ್‌ನಲ್ಲಿ ಭಾರತದ ಮಟ್ಟಿಗೆ ಉತ್ತಮ ದಾಖಲೆ ಹೊಂದಿರುವ ಲಲಿತಾ ಬಾಬರ್ ಹೋದ ವರ್ಷ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 9 ನಿಮಿಷ 34.13 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
- ಅಥ್ಲೀಟ್‌ಗಳ ಜೊತೆ ಫೆಡರೇಷನ್ ಜವಾಬ್ದಾರಿಯುತವಾಗಿ ನಡೆದುಕೊಂಡು ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕೆಂದು ಭಾರತದ ಅಥ್ಲೆಟಿಕ್ಸ್'ಅಭಿಮಾನಿ ಪ್ರಮೋದ್ ಅಭಿಪ್ರಾಯ ಪಡುತ್ತಾರೆ.
- ಕೆಲ ವರ್ಷಗಳ ಹಿಂದೆ ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್ ಹೇಳಿದ್ದು,"ಒಲಿಂಪಿಕ್ಸ್‌ನಲ್ಲಿ ಭಾರತದ ಒಬ್ಬ ಅಥ್ಲೀಟ್ ಒಂದು ಪದಕ ಗೆದ್ದರೆ ಸಾಕು. ಇಷ್ಟು ದಿನ ಬದುಕಿದ್ದು ಸಾರ್ಥಕ ಎಂದುಕೊಳ್ಳುತ್ತೇನೆ. ಅಂಥದ್ದೊಂದು ಅಪೂರ್ವ ಕ್ಷಣವನ್ನು ಎದುರು ನೋಡುತ್ತಲೇ ಇದ್ದೇನೆ."
ಬ್ಯಾಡ್ಮಿಂಟನ್
[ಬದಲಾಯಿಸಿ]- ಮಹಿಳೆ: ಸಿಂಗಲ್ಸ್:
- ಪಿ.ವಿ.ಸಿಂಧು:
ಕ್ರೀಡಾಪಟು | ಪ್ರತಿಸ್ಪರ್ಧಿ | ಪ್ರತಿಸ್ಪರ್ಧಿ | ಪ್ರತಿಸ್ಪರ್ಧಿ | ಪ್ರತಿಸ್ಪರ್ಧಿ | ಪ್ರತಿಸ್ಪರ್ಧಿ | ಪ್ರತಿಸ್ಪರ್ಧಿ | ಪದಕ |
---|---|---|---|---|---|---|---|
ಪಿ.ವಿ. ಸಿಂಧು | ಸರೊಸಿ(ಹಂಗೆರಿ) | ಲೀ (ಕೆನಡ) | ತಾಯಿ ತಾ ಚೀನಾ ಟೈಫೆ | ವಾಂಗ್ (ಚೀನಾ) | ನಜೊಮಮಿ ಓಕೊಹರಾ(ಜಪಾನ್ | ಕೆರೊಲಿನಾ ಮೆರಿನ್ (ಸ್ಪೈನ್) | ರ್ಯಾಂಕ್ |
1ನೇ,2ನೇ, 3ನೇ ಆಟ ಅಂಕಗಳು | 21-8,21–9 | 19-21, 21-15, 21-17. | 21-13, 21-15 | 22–20, 21–19 | 21–19, 21–10 | 21–19, 12–21, 15–21) | |
ಫಲಿತಾಂಶ | ಗೆಲವು | ಗೆಲವು | ಗೆಲವು | ಗೆಲವು | ಗೆಲವು | ಸೋಲು | ಬೆಳ್ಳಿ |
ಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಗೆದ್ದ ಭಾರತದ ಪಿ.ವಿ. ಸಿಂಧು ಬೆಳ್ಳಿ ಪದಕ; ಗಳಿಸಿದ ಸ್ಪೇನ್ ಆಟಗಾರ್ತಿ ಕ್ಯಾರೊಲಿನಾ ಮರಿನ್ ಚಿನ್ನದ ಪದಕ, ಮತ್ತು ಜಪಾನಿನ ನೊಜೊಮಿ ಒಕುಹರಾ ಕಂಚಿನ ಪದಕ ಪಡೆದರು.
- ಮುಖ್ಯಾಂಶಗಳು
- ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ
- ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ
- ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು
- ಪಿ.ವಿ. ಸಿಂಧು ಅವರಿಗೆ ₹ 50 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಒಂದು ಕೋಟಿ ನೀಡುವುದಾಗಿದೆ ಘೋಷಿಸಿದ್ದಾರೆ. [೯]
- ಫೋಟೊ:[[೨]]
ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) ಮಹಿಳೆಯರು
[ಬದಲಾಯಿಸಿ]- 17 ಆಗಸ್ಟ್,2016:-ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.
ಪಟು | ತೂಕ | ಮೊ.ಸುತ್ತು,ವಿಪಕ್ಷ | ಫಲಿ- | ವಿಪಕ್ಷ | ಫಲಿ- | ವಿಪಕ್ಷ | ಫಲಿ-1/4 | 1/4 | ವಿಪಕ್ಷ | ಫಲಿ-1/4 | ಪದಕ |
---|---|---|---|---|---|---|---|---|---|---|---|
ಸಾಕ್ಷಿ ಮಲಿಕ್ | 58 kg | ಜೆ ಮೆಟರ್ಸನ್(ಸ್ವೀಡನ್) | W 3–1ಗೆಲುವು | ಚೆರ್ಡಿವೆರ-ಮಾಲ್ಡೊವ | W 3–1:ಗೆ | ಕೊಬ್ಲೊವ ರಷ್ಯಾ)L 1–3ಸೋ. | ಬೈ1/4ಕ್ಕೆ | ಪುರೆವ್ಡೊರ್(ಮಂ,ಲಿಯ)W 3–1 PP | ಟೈನಿಬೆಕೊವಾ ಐಸುಲು(ಕಜಕ್)W 8–5 | ಗೆಲುವು | ಕಂಚು |
- ವಿನೇಶ್ ಪೋಗಟ್ X Vuc (ROU)ರೊಮೇನಿಯ W 4–0 (ಗೆಲವು)ST:: Sun Yn (CHN)ಚೀನಾ L 0–5 VB (ಸೋಲು)
- ಬಬಿತಾ ಪೋಗಟ್ X Prevolaraki (GRE)ಗ್ರೀಸ್ L 1–3 PP(ಸೋಲು)
- ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್‌ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್ ಗಳಿಸಿ ಗೆಲುವುಪಡೆದರು.ಸಾಕ್ಷಿಯ ಕೋಚ್ ತಮ್ಮ ಶಿಷ್ಯೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಖಾಡದಲ್ಲಿ ಕುಣಿದಾಡಿದರು.
- ಕುಸ್ತಿಯಲ್ಲಿ:ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಬಂದ ಐದನೇ ಪದಕವಿದು. ಹಿಂದೆ ಕೆ.ಡಿ. ಜಾಧವ್ (1952), ಸುಶೀಲ್ ಕುಮಾರ್ (2008 ಮತ್ತು 2012), ಯೋಗೇಶ್ವರ ದತ್ (2012) ಪದಕಗಳನ್ನು ಜಯಿಸಿದ್ದರು.
- ಫೋಟೋ:[[೩]]
ದೀಪಾ ಕರ್ಮಾಕರ್ (ಈವೆಂಟ್: ಕಲಾತ್ಮಕ),ಜಿಮ್ನಾಸ್ಟಿಕ್ಸ್
[ಬದಲಾಯಿಸಿ]ಕ್ರೀಡಾಪಟು | ಕಸರತ್ತು | ಅಂತಿಮನಿರ್ಣಯ | ||||
---|---|---|---|---|---|---|
ಘಟಕ | ದಿನ | ಅರ್ಹತೆ ಅಂಕ | ರ್ಯಾಂಕ್ | ಅಂತಿಮಅಂಕ | ರ್ಯಾಂಕ್ | |
ದೀಪಾ ಕರ್ಮಾಕರ್ | ವಾಲ್ಟ್ | 14 August | 14.85 | 8 | 15066 | 4ನೇಸ್ಥಾನ |
- ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇಸ್ಥಾನ :
ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ ದೀಪಾ ಕರ್ಮಾಕರ್ ಅವರಿಗೆ 14-8-2016 ಭಾನುವಾರ ರಾತ್ರಿ ಸ್ವಲ್ಪದರಲ್ಲಿ ಪದಕ ತಪ್ಪಿತು.ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮೊದಲ ಅವಕಾಶದಲ್ಲಿ 14,866 ಮತ್ತು ಎರಡನೇ ಅವಕಾಶದಲ್ಲಿ ಕಠಿಣವಾದ ಪ್ರುಡೊನೊವಾ ವಾಲ್ಟ್‌ನಲ್ಲಿ 15.266 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸ್ಥಾನಕ್ಕೆ ಬಂದರು. ಒಟ್ಟು 15.066 ಅಂಕಗಳು.ದೀಪಾ ನಂತರ ಕಣಕ್ಕಿಳಿದ ಸ್ವಿಟ್ಜರ್‍ಲೆಂಡ್ ಗುಲಿಯಾ ಸ್ಟೇನ್‌ಗ್ರುಬೆರ್ 15.216 (ಕಂಚು)(ದೀಪಾಗಿಂತ 0.150ಹೆಚ್ಚು) ಅಂಕಗಳನ್ನು ಪಡೆದರು. ಕೊನೆಯ ಸ್ಪರ್ಧಿಯಾಗಿ ಕಣಕ್ಕಿಳಿದ ಅಮೆರಿಕದ ಸಿಮೊನ್ ಬೈಲ್ಸ್ 15.966 ಅಂಕ ಪಡೆದು ಚಿನ್ನ ಗೆದ್ದರು. ಮರಿಯಾಪಸೇಕಾ ರಷ್ಯಾ15253 (ಬೆಳ್ಳಿ).
ಒಲಂಪಿಕ್ ೨೦೧೬ಕ್ಕೆ ಅರ್ಹತೆ ಪಡೆದ ಭಾರತದ ಪಟುಗಳ ಸಂಖ್ಯೆ
[ಬದಲಾಯಿಸಿ]ಕ್ರಮ ಸಂಖ್ಯೆ | ಕ್ರೀಡೆ | ಪುರುಷರು | ವನಿತೆಯರು | ಒಟ್ಟು | ಕ್ರೀಡಾ ಘಟಕಗಳು(Events) |
---|---|---|---|---|---|
೧ | ಬಿಲ್ಲುಗಾರಿಕೆ | 1 | 3 | 4 | 3 |
೨ | ಅತ್ಲೆಟಿಕ್ಸ್ | 17 | 17 | 34 | 21 |
೩ | ಬ್ಯಾಡ್ಮಿಂಟನ್ | 3 | 4 | 7 | 4 |
೪ | ಬಾಕ್ಸಿಂಗ್ | 3 | 0 | 3 | 3 |
೫ | ಹಾಕಿ-(ಮೈದಾನ) | 16+2 | 16+2 | 32+4 | 2 |
೬ | ಗೋಲ್ಫ್ | 2 | 1 | 3 | 2 |
೭ | ಜಿಮ್ನ್ಯಾಸ್ಟಿಕ್ | 0 | 1 | 1 | 1 |
೮ | ಜುಡೊ | 1 | 0 | 1 | 1 |
೯ | ರೋಯಿಂಗ್ (ದೋಣಿ-Rowing) | 1 | 0 | 1 | 1 |
೧೦ | ಶೂಟಿಂಗ್(Shooting) | 9 | 3 | 12 | 11 |
೧೧ | ಈಜು | 1 | 1 | 2 | 2 |
೧೨ | ಟೇಬಲ್ ಟೆನ್ನಿಸ್. | 2 | 2 | 4 | 2 |
೧೩ | ಟೆನ್ನಿಸ್ | 2 | 2 | 4 | 3 |
೧೪ | ಭಾರ ಎತ್ತುವಿಕೆ | 1 | 1 | 2 | 2 |
೧೫ | ಕುಸ್ತಿ (Wrestling) | 5 | 3 | 8 | 8 |
ಒಟ್ಟು | 66 | 56 | 122 | 66 |
2016ರ ರಿಯೊ ಬೇಸಿಗೆ ಒಲಂಪಿಕ್ ಕ್ರೀಡೆಗಳು & ವಿಭಾಗಗಳು
[ಬದಲಾಯಿಸಿ]- ಒಲಂಪಿಕ್ ಉದ್ಘಾಟನಾ ಸಮಾರಂಭ 5 ಆಗಸ್ಟ್ 2016 ರಂದು ಮರಕಾನಾ (Maracanã) ಕ್ರೀಡಾಂಗಣದಲ್ಲಿ ನಡೆಯಲಿದೆ.
- ಕ್ರೀಡೆಗಳು :
- 2016 ಬೇಸಿಗೆ ಒಲಿಂಪಿಕ್ ಒಟ್ಟು 28 ಕ್ರೀಡೆಗಳನ್ನು ಮತ್ತು 41 ವಿಭಾಗಗಳನ್ನು ಮತ್ತು 306 ಘಟಕ/ಘಟನೆಗಳನ್ನು ಹೊಂದಿದೆ..
ಆಟ ಮತ್ತು ಉಪವಿಭಾಗಗಳ ಸಂಖ್ಯೆಗಳನ್ನು ಕೊಟ್ಟಿದೆ.
ಆಟ | ವಿಭಾಗ | ಆಟ | ವಿಭಾಗ | ಆಟ | ವಿಭಾಗ |
---|---|---|---|---|---|
ಜಲ-ಕ್ರೀಡೆ | ಸಂಖ್ಯೆ | ಇಕ್ವೆಸ್ಟ್ರಿಯನ್ | ಸಂಖ್ಯೆ | ರಗ್ಬಿ ಸೆವೆನ್ಸ್ | ಸಂಖ್ಯೆ |
ಡೈವಿಂಗ್ | 8 | ಕುದುರೆ | 2 | ಸೇಲಿಂಗ್ | 10 |
ಈಜು | 34 | ಈವೆಂಟಿಂಗ್ | 2 | ಶೂಟಿಂಗ್ | 15 |
ಸಿಂಕ್ರೊನೈಸ್ ಈಜು | 2 | ಜಿಗಿಯುವ | 2 | ಟೇಬಲ್ ಟೆನಿಸ್ | 4 |
ವಾಟರ್ ಪೋಲೊ | 2 | ಫೆನ್ಸಿಂಗ್ | 10 | ಟೇಕ್ವಾಂಡೋ | 8 |
ಬಿಲ್ಲುಗಾರಿಕೆ | 4 | ಫೀಲ್ಡ್ ಹಾಕಿ | 2 | ಟೆನಿಸ್ | 5 |
ಅಥ್ಲೆಟಿಕ್ಸ್ | 4 | ಫುಟ್ಬಾಲ್ | 2 | ಟ್ರಯಥ್ಲಾನ್ | 2 |
ಬ್ಯಾಡ್ಮಿಂಟನ್ | 5 | ಗಾಲ್ಫ್ | 2 | ವಾಲಿಬಾಲ್ | |
ಬ್ಯಾಸ್ಕೆಟ್ಬಾಲ್ | 2 | ಜಿಮ್ನಾಸ್ಟಿಕ್ಸ್ | ವಾಲಿಬಾಲ್ | 2 | |
ಬಾಕ್ಸಿಂಗ್ | 13 | ಕಲಾತ್ಮಕ | 14 | ಬೀಚ್ ವಾಲಿಬಾಲ್ | 2 |
ಕ್ಯಾನೋಯಿಂಗ್ | ಲಯಬದ್ಧ | 2 | ವೇಟ್ಲಿಫ್ಟಿಂಗ್ | 15 | |
ಸ್ಕೀ ಪಂದ್ಯ | 4 | ಟ್ರ್ಯಾಂಪೊಲೈನ್ | 2 | ರೆಸ್ಲಿಂಗ್ | |
ಸ್ಪ್ರಿಂಟ್ | 12 | ಹ್ಯಾಂಡ್ಬಾಲ್ | 2 | ಫ್ರೀಸ್ಟೈಲ್ | 12 |
ಸೈಕ್ಲಿಂಗ್ | ಜೂಡೋ (14) | 14 | ಗ್ರೀಕ್ ಮತ್ತು ರೋಮನ್ | 6 | |
ಬೈಕಿಂಗ್ | 2 | ಆಧುನಿಕ ಪೆಂಥಲಾನ್ | 2 | ||
ರಸ್ತೆ | 4 | ರೋಯಿಂಗ್ | 14 | ||
ಟ್ರ್ಯಾಕ್ | 10 | ರಗ್ಬಿ ಸೆವೆನ್ಸ್ | 2 |
ಫೋಟೊಗಳು
[ಬದಲಾಯಿಸಿ]
ಒಲಂಪಿಕ್ ಕಮಿಟಿ ಸದಸ್ಯ-ರಾಷ್ಟ್ರಗಳು ಮತ್ತು ಆ ದೇಶದ ಸ್ಪರ್ಧಾಳುಗಳು
[ಬದಲಾಯಿಸಿ]೨೦೧೬-ಜೂನ್ ತಿಂಗಳಲ್ಲಿ ತಯಾರಾದ ಪಟ್ಟಿ:(ಬದಲಾವಣೆಗೆ ಅವಕಾಶವಿದೆ)
ದೇಶ (ಸ್ಪರ್ದಾಳುಗಳ ಸಂಖ್ಯೆ) | |||||
ಅಫ್ಘಾನಿಸ್ಥಾನ (1) | ಚಿಲಿ (42) | ಐಸ್ಲ್ಯಾಂಡ್ (7) | ಮೊಜಾಂಬಿಕ್ (4) | ಸೊಲೊಮನ್ ದ್ವೀಪಗಳು (1) | ಸೇಶೆಲ್ಸ್ (5) |
ಅಲ್ಬೇನಿಯಾ (5) | ಚೀನಾ (413) | ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುಗಳು (1) | ಮ್ಯಾನ್ಮಾರ್ (2) | ದಕ್ಷಿಣ ಆಫ್ರಿಕಾ (137) | ಸಿಯೆರಾ ಲಿಯೋನ್ (2) |
ಆಲ್ಜೀರಿಯಾ (65) | ಕೊಲಂಬಿಯಾ (147) | ಭಾರತ (120) | ನಮೀಬಿಯಾ (11) | ದಕ್ಷಿಣ ಸೂಡಾನ್ (2) | ಸಿಂಗಪುರ (22) |
ಅಮೆರಿಕನ್ ಸಮೋವಾ (2) | ಕೊಮೊರೊಸ್ (2) | ಇಂಡೋನೇಷ್ಯಾ (28) | ನೌರು (2) | ದಕ್ಷಿಣ ಕೊರಿಯಾ (205) | ಸ್ಲೊವಾಕಿಯಾ (52) |
ಅಂಡೋರಾ (5) | ಕಾಂಗೋ (6) | ಇರಾನ್ (64) | ನೇಪಾಳ (7) | ಸ್ಪೇನ್ (305) | ಸ್ಲೊವೆನಿಯಾ (61) |
ಅಂಗೋಲಾ (23) | DR ಕಾಂಗೋ (3) | ಇರಾಕ್ (23) | ನೆದರ್ಲ್ಯಾಂಡ್ಸ್ (241) | ಶ್ರೀಲಂಕಾ (9) | ಸೊಲೊಮನ್ ದ್ವೀಪಗಳು (1) |
ಆಂಟಿಗುವ ಮತ್ತು ಬಾರ್ಬುಡ (4) | ಕುಕ್ ದ್ವೀಪಗಳು (7) | ಐರ್ಲೆಂಡ್ (74) | ನ್ಯೂಜಿಲ್ಯಾಂಡ್ (199) | ಸೂಡಾನ್ (4) | ದಕ್ಷಿಣ ಆಫ್ರಿಕಾ (137) |
ಅರ್ಜೆಂಟೀನಾ (212) | ಕೋಸ್ಟಾ ರಿಕಾ (8) | ಇಸ್ರೇಲ್ (48) | ನಿಕರಾಗುವಾ (3) | ಸುರಿನಾಮ್ (3) | ದಕ್ಷಿಣ ಸೂಡಾನ್ (2) |
ಅರ್ಮೇನಿಯ (33) | ಕ್ರೊಯೇಷಿಯಾ (86) | ಇಟಲಿ (295) | ನೈಜರ್ (2) | ಸ್ವಾಜಿಲ್ಯಾಂಡ್ (2) | ದಕ್ಷಿಣ ಕೊರಿಯಾ (205) |
ಅರುಬಾ (7) | ಕ್ಯೂಬಾ (116) | ಐವರಿ ಕೋಸ್ಟ್ (11) | ನೈಜೀರಿಯಾ (63) | ಸ್ವೀಡನ್ (152) | ಸ್ಪೇನ್ (305) |
ಆಸ್ಟ್ರೇಲಿಯಾ (410) | ಸೈಪ್ರಸ್ (17) | ಜಮೈಕಾ (63) | ಉತ್ತರ ಕೊರಿಯಾ (35) | ಸ್ವಿಜರ್ಲ್ಯಾಂಡ್ (107) | ಶ್ರೀಲಂಕಾ (9) |
ಆಸ್ಟ್ರಿಯಾ (68) | ಜೆಕ್ ರಿಪಬ್ಲಿಕ್ (107) | ಜಪಾನ್ (330) | ನಾರ್ವೇ (66) | ಸಿರಿಯಾ (4) | ಸೂಡಾನ್ (4) |
ಅಜರ್ಬೈಜಾನ್ (56) | ಡೆನ್ಮಾರ್ಕ್ (122) | ಜೋರ್ಡಾನ್ (6) | ಓಮನ್ (3) | ಚೀನೀ ತೈಪೆ (57) | ಸುರಿನಾಮ್ (3) |
ಬಹಾಮಾಸ್ (25) | ಜಿಬೂಟಿ (5) | ಕಝಾಕಿಸ್ತಾನ್ (103) | ಪಾಕಿಸ್ತಾನ (7) | ತಜಿಕಿಸ್ತಾನ್ (7) | ಸ್ವಾಜಿಲ್ಯಾಂಡ್ (2) |
ಬಹ್ರೇನ್ (25) | ಡೊಮಿನಿಕಾ (1) | ಕೀನ್ಯಾ (87) | ಪಲಾವು (2) | ಟಾಂಜಾನಿಯಾ (7) | ಸ್ವೀಡನ್ (152) |
ಬಾಂಗ್ಲಾದೇಶ (3) | ಡೊಮಿನಿಕನ್ ರಿಪಬ್ಲಿಕ್ (20) | ಕಿರಿಬಾಟಿ (1) | ಪ್ಯಾಲೆಸ್ಟೈನ್ (4) | ಥೈಲ್ಯಾಂಡ್ (46) | ಸ್ವಿಜರ್ಲ್ಯಾಂಡ್ (107) |
ಬಾರ್ಬಡೋಸ್ (12) | ಈಕ್ವೆಡಾರ್ (38) | ಕೊಸೊವೊ (8) | ಪನಾಮ (10) | ಪೂರ್ವ ತಿಮೋರ್ (1) | ಸಿರಿಯಾ (4) |
ಬೆಲಾರಸ್ (135) | ಈಜಿಪ್ಟ್ (120) | ಕುವೈತ್ (7) | ಪಪುವಾ ನ್ಯೂಗಿನಿಯಾ (8) | ಟೋಗೊ (1) | ಚೀನೀ ತೈಪೆ (57) |
ಬೆಲ್ಜಿಯಂ (101) | ಎಲ್ ಸಾಲ್ವಡಾರ್ (5) | ಕಿರ್ಗಿಸ್ತಾನ್ (16) | ಪೆರುಗ್ವೆ (11) | ತೊಂಗ(Tonga),(3) | ತಜಿಕಿಸ್ತಾನ್ (7) |
ಬೆಲೀಜ್ (3) | ಏರಿಟ್ರಿಯಾ (9) | ಲಾವೋಸ್ (1) | ಪೆರು (27) | ಟ್ರಿನಿಡಾಡ್ ಮತ್ತು ಟೊಬೆಗೊ (26) | ಟಾಂಜಾನಿಯಾ (7) |
ಬೆನಿನ್ (6) | ಎಸ್ಟೋನಿಯ (45) | ಲಾಟ್ವಿಯಾ (34) | ಫಿಲಿಪೈನ್ಸ್ (12) | ಟುನೀಶಿಯ (61) | ಥೈಲ್ಯಾಂಡ್ (46) |
ಬರ್ಮುಡಾ (6) | ಇಥಿಯೋಪಿಯ (34) | ಲೆಬನಾನ್ (9) | ಪೋಲಂಡ್ (238) | ಟರ್ಕಿ(98) | ಪೂರ್ವ ತಿಮೋರ್ (1) |
ಭೂತಾನ್ (2) | ಮೈಕ್ರೊನೇಷ್ಯದ ಸಂಯುಕ್ತ ರಾಜ್ಯಗಳು (1) | ಲೆಥೋಸೊ (7) | ಪೋರ್ಚುಗಲ್ (92) | ತುರ್ಕಮೆನಿಸ್ತಾನ್ (7) | ಟೋಗೊ (1) |
ಬೊಲಿವಿಯಾ (12) | ಫಿಜಿ (51) | ಲಿಬೇರಿಯಾ (2) | ಪೋರ್ಟೊ ರಿಕೊ (42) | ಉಗಾಂಡಾ (19) | ತೊಂಗ(Tonga),(3) |
ಬೋಸ್ನಿಯಾ ಮತ್ತು ಹರ್ಜೆಗೋವಿನಾ (11) | ಫಿನ್ಲ್ಯಾಂಡ್ (56) | ಲಿಬಿಯಾ (5) | ಕತಾರ್ (35) | ಉಕ್ರೇನ್ (183) | ಟ್ರಿನಿಡಾಡ್ ಮತ್ತು ಟೊಬೆಗೊ (26) |
ಬೋಟ್ಸ್ವಾನ (10) | ಫ್ರಾನ್ಸ್ (404) | ಲಿಚ್ಟೆನ್ಸ್ಟಿನ್ (3) | ನಿರಾಶ್ರಿತರ ಒಲಿಂಪಿಕ್ ಕ್ರೀಡಾಪಟುಗಳು (10) | ಯುನೈಟೆಡ್ ಅರಬ್ ಎಮಿರೇಟ್ಸ್ (10) | ಟುನೀಶಿಯ (61) |
ಬ್ರೆಜಿಲ್ (465)(ಆಕ್ಸೆಸಿಬಿಲಿಟಿ) | ಗೆಬೊನ್ (4) | ಲಿಥುವೇನಿಯಾ (67) | ರೊಮೇನಿಯಾ (104) | ಯುನೈಟೆಡ್ ಸ್ಟೇಟ್ಸ್ (555) | ಟರ್ಕಿ (98) |
ಬ್ರಿಟಿಷ್ ವರ್ಜಿನ್ ದ್ವೀಪಗಳು (2) | ಗ್ಯಾಂಬಿಯಾ (3) | ಲಕ್ಸೆಂಬರ್ಗ್ (9) | ರಶಿಯಾ (339) | ಉರುಗ್ವೆ (17) | ತುರ್ಕಮೆನಿಸ್ತಾನ್ (7) |
ಬ್ರುನೈ (1) | ಜಾರ್ಜಿಯಾ (39) | ಮ್ಯಾಸೆಡೊನಿಯ (5) | ರುವಾಂಡಾ (7) | ಉಜ್ಬೇಕಿಸ್ತಾನ್ (70) | ಉಗಾಂಡಾ (19) |
ಬಲ್ಗೇರಿಯ (51) | ಜರ್ಮನಿ (425) | ಮಡಗಾಸ್ಕರ್ (2) | ಸೇಂಟ್ ಕಿಟ್ಸ್ ಮತ್ತು ನೆವಿಸ್ (7) | ವನೌತು (4) | ಉಕ್ರೇನ್ (183) |
ಬುರ್ಕಿನಾ ಫಾಸೊ (1) | ಘಾನಾ (11) | ಮಲಾವಿ (1) | ಸೇಂಟ್ ಲೂಸಿಯಾ (4) | ವೆನೆಜುವೆಲಾ (86) | ಯುನೈಟೆಡ್ ಅರಬ್ ಎಮಿರೇಟ್ಸ್ (10) |
ಬುರುಂಡಿ (7) | ಗ್ರೇಟ್ ಬ್ರಿಟನ್ (366) | ಮಲೇಷ್ಯಾ (31) | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (2) | ವಿಯೆಟ್ನಾಂ (22) | ಯುನೈಟೆಡ್ ಸ್ಟೇಟ್ಸ್ (555) |
ಕಾಂಬೋಡಿಯ (6) | ಗ್ರೀಸ್ (89) | ಮಾಲ್ಡೀವ್ಸ್ (2) | ಸಮೋವಾ (6) | ವರ್ಜಿನ್ ದ್ವೀಪಗಳು (5) | ಉರುಗ್ವೆ (17) |
ಕ್ಯಾಮರೂನ್ (23) | ಗ್ರೆನಡಾ (4) | ಮಾಲಿ (2) | ಸ್ಯಾನ್ ಮರಿನೋ (4) | ಯೆಮೆನ್ (2) | ಉಜ್ಬೇಕಿಸ್ತಾನ್ (70) |
ಕೆನಡಾ (313) | ಗ್ವಾಮ್ (5) | ಮಾಲ್ಟಾ (2) | ಸಾವೊ ಟೋಮೆ ಮತ್ತು ಪ್ರಿನ್ಸಿಪೆ (1) | ಜಾಂಬಿಯಾ (5) | ವನೌತು (4) |
ಕೇಪ್ ವರ್ಡೆ (4) | ಗ್ವಾಟೆಮಾಲಾ (21) | ಮಾರ್ಷಲ್ ದ್ವೀಪಗಳು (1) | ಸೌದಿ ಅರೇಬಿಯಾ (10) | ಜಿಂಬಾಬ್ವೆ (30)ಸೇಂಟ್ ಲೂಸಿಯಾ (4) | ವೆನೆಜುವೆಲಾ (86) |
ಕೇಮನ್ ದ್ವೀಪಗಳು (3) | ಗಿನಿ (2) | ಮಾರಿಷಸ್ (9) | ಸೆನೆಗಲ್ (18) | ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ (2) | ವಿಯೆಟ್ನಾಂ(22) |
ಮಧ್ಯ ಆಫ್ರಿಕಾ ಗಣರಾಜ್ಯ (2) | ಗಿನಿ ಬಿಸ್ಸಾವ್ (3) | ಮೆಕ್ಸಿಕೋ (124) | ಸರ್ಬಿಯಾ (104) | ಸಮೋವಾ (6) | ವರ್ಜಿನ್ ದ್ವೀಪಗಳು (5) |
ಚಾಡ್ (2) | ಗಯಾನಾ (6) | ಮೊಲ್ಡೊವಾ (21) | ಸೇಶೆಲ್ಸ್ (5) | ಸ್ಯಾನ್ ಮರಿನೋ (4) | ಯೆಮೆನ್ (2) |
ಕೇಪ್ ವರ್ಡೆ (4) | ಹೈಟಿ (8) | ಮೊನಾಕೊ (2) | ಸಿಯೆರಾ ಲಿಯೋನ್ (2) | ಸಾವೊ ಟೋಮೆ ಮತ್ತು ಪ್ರಿನ್ಸಿಪೆ (1) | ಜಾಂಬಿಯಾ (5) |
ಕೇಮನ್ ದ್ವೀಪಗಳು (3) | ಹೊಂಡುರಾಸ್ (25) | ಮಂಗೋಲಿಯಾ (40) | ಸಿಂಗಪುರ (22) | ಸೌದಿ ಅರೇಬಿಯಾ (10) | ಜಿಂಬಾಬ್ವೆ (30) |
ಮಧ್ಯ ಆಫ್ರಿಕಾ ಗಣರಾಜ್ಯ (2) | ಹಾಂಗ್ ಕಾಂಗ್ (38) | ಮಾಂಟೆನೆಗ್ರೊ (34) | ಸ್ಲೊವಾಕಿಯಾ (52) | ಸೆನೆಗಲ್ (18) | ಒಟ್ಟು ಸ್ಪರ್ದಾಳುಗಳು:10293 |
ಚಾಡ್ (2) | ಹಂಗೇರಿ (157) | ಮೊರಾಕೊ (56) | ಸ್ಲೊವೆನಿಯಾ (61) | ಸರ್ಬಿಯಾ (104) | ಒಟ್ಟು 206 ದೇಶ |
ಮೇಲಿನ ಅಂಕಿ ಅಂಶಗಳಲ್ಲಿ, ಕೊನೆಯ ಹಂತದಲ್ಲಿ ಬದಲಾವಣೆಗಳಾಗಿವೆ |
ಕಿರಿಯ ಈಜುಪಟು
[ಬದಲಾಯಿಸಿ]- ನೇಪಾಳಿ ಈಜುಪಟು ಗೌರಿಕಾ ಸಿಂಗ್ 13 ವರ್ಷ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಸ್ಪರ್ಧಿಯಾಗಿದ್ದಳು. ಈಗ 13 ವರ್ಷ 255 ದಿನದ ಈ ಬಾಲಕಿ ರಿಯೋದಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸುತ್ತಿರುವ ಅತೀ ಕಿರಿಯ ವಯಸ್ಸಿನ ಸ್ಪರ್ಧಿ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದಾಳೆ. ಲಂಡನ್ ಮೂಲದ ಶಾಲಾಬಾಲಕಿ ಇಂಗ್ಲೀಷ್ ಕ್ಲಬ್ ಬಾರ್ನೆಟ್ ಕಾಪ್ತಾಲ್ ಈಜುಪಟುವಾಗಿದ್ದು, ತಾನು ಎದುರಿಸಲಿರುವ ಸಾಹಸಕ್ಕೆ ಹೆದರಿಕೊಂಡಿಲ್ಲ. ಗೌರಿಕಾ ರಷ್ಯಾ ಕಜನ್ ವಿಶ್ವಚಾಂಪಿಯನ್‌ಷಿಪ್‌ನಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸಿದ್ದಳು. ಭಾರತದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೂರು ಕಂಚು ಮತ್ತು ಒಂದು ಬೆಳ್ಳಿ ಪದಕ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಳು.ಗೌರಿಕಾ ಅತೀ ಕಿರಿಯ ಒಲಿಂಪಿಯನ್ ಆಗಿರುವುದು ನಂಬಲಾಗದ ಸಂಗತಿಯಾಗಿದ್ದು,ಅವಳು ಹೇಗೆ ಒತ್ತಡ ನಿಭಾಯಿಸುತ್ತಾಳೆಂಬುದು ಅಚ್ಚರಿಯಾಗಿದೆ ಎಂದು ಅವಳ ತಂದೆ ಪ್ರತಿಕ್ರಿಯಿಸಿದ್ದಾರೆ.[೧೩][೧೪]
ಜಿಮ್ನಾಸ್ಟಿಕ್ಸ್
[ಬದಲಾಯಿಸಿ]- ವಾಲ್ಟ್ ಮತ್ತು ಪುಡುನೊವಾ : ಕಲಾತ್ಮಕ:
ಸ್ಥಾನ | ಜಿಮ್ನಾಸ್ಟ್ | ದೇಶ | ಅಂಕ ಗಳಿಕೆ | ಪದಕ |
---|---|---|---|---|
1 | ಸಿಮೊನ್ ಬೈಲ್ | ಅಮೇರಿಕ | 15,966 | ಚಿನ್ನ |
2 | ಮರಿಯಾಪಸೇಕಾ | ರಷ್ಯಾ | 15,253 | ಬೆಳ್ಳಿ |
3 | ಗುಲಿಯಾ zಸ್ಟೈನ್ಗ್ರುಬೆರ್ | ಸ್ವಿಟ್ಜರ್ ಲೆಂಡ್ | 15,216 | ಕಂಚು |
4 | ದೀಪಾ ಕರ್ಮಾರ್ಕರ್ | ಭಾರತ | 15066 | - |
ಜಮೈಕಾದ ಉಸೇನ್ ಬೋಲ್ಟ್ ವಿಶೇಷ ಸಾಧನೆ
[ಬದಲಾಯಿಸಿ]- ರಿಯೋ ಒಲಿಂಪಿಕ್ಸ್ 2016 :
- ರಿಯೋ ಡಿ ಜನೈರೋದಲ್ಲಿ ಆಗಸ್ಟ್ 20ರಂದು ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಒಳಗೊಂಡಿದ್ದ ಜಮೈಕಾದ ತಂಡ 4X100 ಮೀಟರ್ಸ್ ರಿಲೇಯಲ್ಲಿ ಬಂಗಾರ ಬಾಚಿಕೊಂಡಿದೆ. ಶನಿವಾರ ಬೆಳಗ್ಗೆ ಜಮೈಕಾ ತಂಡ ಚಿನ್ನ, ಜಪಾನಿಗೆ ಬೆಳ್ಳಿ ಹಾಗೂ ಕೆನಡಾಕ್ಕೆ ಕಂಚು ಲಭಿಸಿದೆ. ಜಸ್ಟೀನ್ ಗ್ಯಾಟ್ಲಿನ್ ಇದ್ದ ಯುಎಸ್ಎ ತಂಡ ಅನರ್ಹಗೊಂಡು. ಬೋಲ್ಟ್ ಅವರು ಶುಕ್ರವಾರ ಬೆಳಗ್ಗೆ 200 ಮೀಟರ್ಸ್ ಫೈನಲ್ ನಲ್ಲಿ ಚಿನ್ನ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈಗ ರಿಯೋದಲ್ಲೇ 100, 200, 4x100ಮೀ ಈ ಮೂರು ಟ್ರ್ಯಾಕ್ ಇವೆಂಟ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. 29 ವರ್ಷ ವಯಸ್ಸಿನ ಬೋಲ್ಟ್ ಅವರು ಆಗಸ್ಟ್ 20 ಶನಿವಾರ ಮತ್ತೊಮ್ಮೆ ಟ್ರ್ಯಾಕ್ ನಲ್ಲಿ ಮಿಂಚಿನ ಓಟ ನಡೆಸಿದರು. ಜಮೈಕಾ ತಂಡದ 4X100 ರಿಲೇಯಲ್ಲಿ ಚಿನ್ನ ಗೆದ್ದಿತು. ಈ ಗೆಲುವಿನ ಮೂಲಕ ಮೂರು ಹ್ಯಾಟ್ರಿಕ್ ಸಾಧಿಸಿದ ಏಕೈಕ ಓಟಗಾರ ಎನಿಸಿಕೊಂಡರು.
- ಲೂಯಿಸ್ ಸಮಕ್ಕೆ ಬೋಲ್ಟ್ : ಶ್ರೇಷ್ಠ ಅಥ್ಲೀಟ್ ಕಾರ್ಲ್ ಲೂಯಿಸ್, ಪಾವೋ ನೂರ್ಮಿ ಜತೆಗೆ ಉಸೇನ್ ಬೋಲ್ಟ್ ನಿಂತಿದ್ದಾರೆ. ಎಲ್ಲಾ ಒಲಿಂಪಿಕ್ಸ್ ಸೇರಿ 9 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇದು ಬೋಲ್ಟ್ ಅವರ ಕೊನೆ ಒಲಿಂಪಿಕ್ಸ್ ಆಗಿದ್ದು, 2017ರಲ್ಲಿ ಸಂಪೂರ್ಣ ನಿವೃತ್ತಿ ಹೊಂದಲಿದ್ದಾರೆ. ಬೀಜಿಂಗ್, ಲಂಡನ್ ನಲ್ಲಿ ಬೋಲ್ಟ್ ಅವರು ಮೂರು ಸ್ಪ್ರಿಂಟ್ ಚಿನ್ನ -100ಮೀ, 200ಮೀ ಹಾಗೂ 4x100ಮೀ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ರಿಯೋದಲ್ಲಿ ಎರಡು ಚಿನ್ನ ಗೆದ್ದಿದ್ದು ಈಗ ಶನಿವಾರ(ಆಗಸ್ಟ್ 20) 4X100 ರಿಲೇಯಲ್ಲಿ ಮೂರನೇ ಚಿನ್ನದ ಬೇಟೆಯಾಡಿದ್ದಾರೆ.[೧೬]
- ಫಲಿತಾಂಶ: ಪುರುಷರ ವಿಭಾಗ: 200 ಮೀ. ಓಟ: ಉಸೇನ್ ಬೋಲ್ಟ್, ಜಮೈಕ (ಕಾಲ: 19.78 ಸೆ.)–1, ಆ್ಯಂಡ್ರೆ ಡಿ ಗ್ರೇಸ್, ಕೆನಡಾ (20.2 ಸೆ.)–2, ಕ್ರಿಸ್ಟೋಫ್ ಲೆಮಾತೆ, ಫ್ರಾನ್ಸ್ (20.12 ಸೆ.)–3
- ಶಾಟ್‌ಪಟ್: ರ‍್ಯಾನ್ ಕ್ರೂಸೆರ್, ಅಮೆರಿಕ (ದೂರ: 22.52 ಮೀ.)–1, ಜೋ ಕೊವಾಕ್ಸ್, ಅಮೆರಿಕ (21.78 ಮೀ.)–2, ಥಾಮಸ್ ವಾಲ್ಶ್, ನ್ಯೂಜಿಲೆಂಡ್ (21.36 ಮೀ.)–3 ಡೆಕಥ್ಲಾನ್: ಆಸ್ಟನ್ ಏಟನ್, ಅಮೆರಿಕ (8892 ಪಾಯಿಂಟ್)–1, ಕೆವಿನ್ ಮೇಯರ್, ಫ್ರಾನ್ಸ್ (8843)–2, ಡೇಮಿಯನ್ ವಾರ್ನರ್, ಕೆನಡಾ (8666)–3 ಮಹಿಳೆಯರ ವಿಭಾಗ: 400 ಮೀ. ಹರ್ಡಲ್ಸ್: ದಲಿಲಾ ಮುಹಮ್ಮದ್, ಅಮೆರಿಕ (ಕಾಲ: 53.13 ಸೆಕೆಂಡು)–1, ಸಾರಾ ಸ್ಲಾಟ್ ಪೀಟರ್‌ಸನ್, ಡೆನ್ಮಾರ್ಕ್ (53.55 ಸೆ.)–2, ಆ್ಯಶ್ಲೆ ಸ್ಪೆನ್ಸರ್, ಅಮೆರಿಕ (53.72 ಸೆ.)–3
- ಜಾವೆಲಿನ್ ಥ್ರೋ: ಸಾರಾ ಕೊಲಾಕ್, ಕ್ರೊವೇಷ್ಯಾ (ದೂರ: 66.18 ಮೀ.)–1, ಸನೆಟ್ ವಿಲ್ಜೊನ್, ರಷ್ಯಾ (64.92 ಮೀ.)–2, ಬಾರ್ಬಾರ ಸ್ಪೊಟಕೋವಾ, ಜೆಕ್‌ಗಣರಾಜ್ಯ (64.80 ಮೀ.)3[೧೭]
ದೇಶವಾರು ಪದಕಗಳ ಪಟ್ಟಿ
[ಬದಲಾಯಿಸಿ]- 21-8-2016
- ೬-೮-೨೦೧೬:ಅಮೆರಿಕದ ಯುವ ಶೂಟರ್ ವರ್ಜೀನಿಯಾ ತ್ರ್ಯಾಶೆರ್ ಅವರು ರಿಯೊ ಒಲಿಂಪಿಕ್ ಕೂಟದ ಮೊದಲ ಚಿನ್ನ ಗೆದ್ದ ಗೌರವ ತಮ್ಮದಾಗಿಸಿಕೊಂಡರು.
- ಪದಕಗಳ ಪಟ್ಟಿ
ಕ್ರ.ಸಂ. | ರ್ಯಾಂಕ್ | ಒಲಂಪಿಕ್ ಸಮಿತಿ ಸದಸ್ಯ ದೇಶಗಳು | ಬಂಗಾರ | ಬೆಳ್ಳಿ | ಕಂಚು | ಒಟ್ಟು ಪದಕ |
---|---|---|---|---|---|---|
1 | 1 | ಯುನೈಟೆಡ್ ಸ್ಟೇಟ್ಸ್ (USA) | 46 | 37 | 38 | 121 |
2 | 2 | ಗ್ರೇಟ್ ಬ್ರಿಟನ್ (ಜಿಬಿಆರ್) | 27 | 23 | 17 | 67 |
3 | 3 | ಚೀನಾ (CHN) | 26 | 18 | 26 | 70 |
4 | 4 | ರಶಿಯಾ (ಆರ್ಯುಎಸ್) | 19 | 18 | 19 | 56 |
5 | 5 | ಜರ್ಮನಿ (GER) | 17 | 10 | 15 | 42 |
6 | 6 | ಜಪಾನ್ (JPN) | 12 | 8 | 21 | 41 |
7 | 7 | ಫ್ರಾನ್ಸ್ (TXL) | 10 | 18 | 14 | 42 |
8 | 8 | ದಕ್ಷಿಣ ಕೊರಿಯಾ (KOR) | 9 | 3 | 9 | 21 |
9 | 9 | ಇಟಲಿ (ITA) | 8 | 12 | 8 | 28 |
10 | 10 | ಆಸ್ಟ್ರೇಲಿಯಾ (ಆಸ್ಟ್ರೇಲಿಯ) | 8 | 11 | 10 | 29 |
11 | 11 | ನೆದರ್ಲ್ಯಾಂಡ್ಸ್ (NED) | 8 | 7 | 4 | 19 |
12 | 12 | ಹಂಗೇರಿ (TPE) | 8 | 3 | 4 | 15 |
13 | 13 | ಬ್ರೆಜಿಲ್ (ಬಿಆರ್ಎ)(*ಆತಿಥೇಯ) | 7 | 6 | 6 | 19 |
14 | 14 | ಸ್ಪೇನ್ (ಇಎಸ್ಪಿ)) * | 7 | 4 | 6 | 17 |
15 | 15 | ಕೀನ್ಯಾ (KEN) | 6 | 6 | 1 | 13 |
16 | 16 | ಜಮೈಕಾ (JAM) | 6 | 3 | 2 | 11 |
17 | 17 | ಕ್ರೊಯೇಷಿಯಾ (CRO) | 5 | 3 | 2 | 10 |
18 | 18 | ಕ್ಯೂಬಾ ((CUB)) | 5 | 2 | 4 | 11 |
19 | 19 | ನ್ಯೂಜಿಲ್ಯಾಂಡ್ (NZL)) | 4 | 9 | 5 | 18 |
20 | 20 | ಕೆನಡಾ (CAN) | 4 | 3 | 15 | 22 |
21 | 21 | ಉಜ್ಬೇಕಿಸ್ತಾನ್ (UZB) | 4 | 2 | 7 | 13 |
22 | 22 | ಕಝಾಕಿಸ್ತಾನ್ (LBJ) | 3 | 5 | 9 | 17 |
23 | 23 | ಕೊಲಂಬಿಯಾ (ಸಿಒಎಲ್) | 3 | 2 | 3 | 8 |
24 | 24 | ಸ್ವಿಜರ್ಲ್ಯಾಂಡ್ (SU) | 3 | 2 | 2 | 7 |
25 | 25 | ಇರಾನ್ (IRI) | 3 | 1 | 4 | 8 |
26 | 26 | ಗ್ರೀಸ್ (GRE) ಅನ್ನು | 3 | 1 | 2 | 6 |
27 | 27 | ಅರ್ಜೆಂಟೀನಾ (ಎಆರ್ಜಿ) | 3 | 1 | 0 | 4 |
28 | 28 | ಡೆನ್ಮಾರ್ಕ್ (DEN) | 2 | 6 | 7 | 15 |
29 | 29 | ಸ್ವೀಡನ್ (SWE) | 2 | 6 | 3 | 11 |
30 | 30 | ದಕ್ಷಿಣ ಆಫ್ರಿಕಾ (RSA) | 2 | 6 | 2 | 10 |
31 | 31 | ಉಕ್ರೇನ್ (Ukr) | 2 | 5 | 4 | 11 |
32 | 32 | ಸೆರ್ಬಿಯ (ಎಸ್ಆರ್ಬಿ) | 2 | 4 | 2 | 8 |
33 | 33 | ಪೋಲಂಡ್ (POL) | 2 | 3 | 6 | 11 |
34 | 34 | ಉತ್ತರ ಕೊರಿಯಾ ( PRK) | 2 | 3 | 2 | 7 |
35 | 35 | ಬೆಲ್ಜಿಯಂ (ಬಿಇಎಲ್) | 2 | 2 | 2 | 6 |
36 | 35 | ಥೈಲ್ಯಾಂಡ್ ((THA) | 2 | 2 | 2 | 6 |
37 | 37 | ಸ್ಲೊವಾಕಿಯಾ (SVK) | 2 | 2 | 0 | 4 |
38 | 38 | ಜಾರ್ಜಿಯಾ (GEO) | 2 | 1 | 4 | 7 |
39 | 39 | ಅಜರ್ಬೈಜಾನ್ (AZE) | 1 | 7 | 10 | 18 |
40 | 40 | ಬೆಲಾರಸ್ (MBA) | 1 | 4 | 4 | 9 |
41 | 41 | ಟರ್ಕಿ (TUR) | 1 | 3 | 4 | 8 |
42 | 42 | ಅರ್ಮೇನಿಯ (ಎಆರ್ಎಂ) | 1 | 3 | 0 | 4 |
43 | 43 | ಜೆಕ್ ರಿಪಬ್ಲಿಕ್ (CZE) | 1 | 2 | 7 | 10 |
44 | 44 | ಇಥಿಯೋಪಿಯ (ETH) | 1 | 2 | 5 | 8 |
45 | 45 | ಸ್ಲೊವೆನಿಯಾ (SLO) | 1 | 2 | 1 | 4 |
46 | 46 | ಇಂಡೋನೇಷ್ಯಾ (ಐಎನ್ಎ) | 1 | 2 | 0 | 3 |
47 | 47 | ರೊಮೇನಿಯಾ (Rou) | 1 | 1 | 3 | 5 |
48 | 48 | ಬಹ್ರೇನ್ (BRN) | 1 | 1 | 0 | 2 |
49 | 48 | ವಿಯೆಟ್ನಾಂ (VIE) | 1 | 1 | 0 | 2 |
50 | 50 | ಚೀನೀ ತೈಪೆ (BCD) | 1 | 0 | 2 | 3 |
51 | 51 | ಬಹಾಮಾಸ್ (BAH) | 1 | 0 | 1 | 2 |
52 | 51 | ಐವರಿ ಕೋಸ್ಟ್ (Civ) | 1 | 0 | 1 | 2 |
53 | 51 | ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುಗಳು (ಐಒಎ) | 1 | 0 | 1 | 2 |
54 | 54 | ಫಿಜಿ (FIJ) | 1 | 0 | 0 | 1 |
55 | 54 | ಜೋರ್ಡಾನ್ (JOR) | 1 | 0 | 0 | 1 |
56 | 54 | ಕೊಸೊವೊ (KOS) | 1 | 0 | 0 | 1 |
57 | 54 | ಪೋರ್ಟೊ ರಿಕೊ (PUR) | 1 | 0 | 0 | 1 |
58 | 54 | ಸಿಂಗಪುರ್ (SIN) | 1 | 0 | 0 | 1 |
59 | 54 | ತಜಿಕಿಸ್ತಾನ್ (TJK) | 1 | 0 | 0 | 1 |
60 | 60 | ಮಲೇಷ್ಯಾ (MAS) | 0 | 4 | 1 | 5 |
61 | 61 | ಮೆಕ್ಸಿಕೋ (MEX) | 0 | 3 | 2 | 5 |
62 | 62 | ಆಲ್ಜೀರಿಯಾ (ALG) | 0 | 2 | 0 | 2 |
63 | 62 | ಐರ್ಲೆಂಡ್ (IRL) | 0 | 2 | 0 | 2 |
64 | 64 | ಲಿಥುವೇನಿಯಾ (LTU) | 0 | 1 | 3 | 4 |
65 | 65 | ಬಲ್ಗೇರಿಯ (BUL) | 0 | 1 | 2 | 3 |
66 | 65 | ವೆನೆಜುವೆಲಾ (VEN) | 0 | 1 | 2 | 3 |
67 | 67 | ಇಂಡಿಯಾ/ಭಾರತ | 0 | 1 | 1 | 2 |
68 | 67 | ಮೊಂಗೋಲಿಯಾ (MGL) | 0 | 1 | 1 | 2 |
69 | 69 | ಬುರುಂಡಿ (BDI) | 0 | 1 | 0 | 1 |
70 | 69 | ಗ್ರೆನಡಾ (grn) | 0 | 1 | 0 | 1 |
71 | 69 | ನೈಜರ್ (NIG) | 0 | 1 | 0 | 1 |
72 | 69 | ಫಿಲಿಪೈನ್ಸ್ (PHI) | 0 | 1 | 0 | 1 |
73 | 69 | ಕತಾರ್ (QAT) | 0 | 1 | 0 | 1 |
74 | 74 | ನಾರ್ವೇ (NOR) | 0 | 0 | 4 | 4 |
75 | 75 | ಈಜಿಪ್ಟ್ (EGY) | 0 | 0 | 3 | 3 |
76 | 75 | ಟುನೀಶಿಯ (TUN) | 0 | 0 | 3 | 3 |
77 | 77 | ಇಸ್ರೇಲ್ (Isr) | 0 | 0 | 2 | 2 |
78 | 78 | ಆಸ್ಟ್ರಿಯಾ (AUT) | 0 | 0 | 1 | 1 |
79 | 78 | ಡೊಮಿನಿಕನ್ ರಿಪಬ್ಲಿಕ್ (DOM) | 0 | 0 | 1 | 1 |
80 | 78 | ಎಸ್ಟೋನಿಯ (IS) | 0 | 0 | 1 | 1 |
81 | 78 | ಫಿನ್ಲ್ಯಾಂಡ್ (FIN) | 0 | 0 | 1 | 1 |
82 | 78 | ಮೊರಾಕೊ (MAR) | 0 | 0 | 1 | 1 |
83 | 78 | ಮೊಲ್ಡೊವಾ (MDA) | 0 | 0 | 1 | 1 |
84 | 78 | ನೈಜೀರಿಯಾ (NGR) | 0 | 0 | 1 | 1 |
85 | 78 | ಪೋರ್ಚುಗಲ್ (ಪಿಒಆರ್) | 0 | 0 | 1 | 1 |
86 | 78 | ಟ್ರಿನಿಡಾಡ್ ಮತ್ತು ಟೊಬೆಗೊ (TTO) | 0 | 0 | 1 | 1 |
87 | 78 | ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) | 0 | 0 | 1 | 1 |
T | ಒಟ್ಟು (87 NOCs) | 307 | 307 | 360 | 974 |
ನೋಡಿ
[ಬದಲಾಯಿಸಿ]- *ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ
- ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
- ೨೦೦೮ ಒಲಂಪಿಕ್ ಕ್ರೀಡಾಕೂಟ
- *ಭಾರತದ ಮಹಿಳಾ ಹಾಕಿ ತಂಡ
- *ಭಾರತದ ಪುರುಷರ ಹಾಕಿ ತಂಡ
- *ಒಲಂಪಿಕ್ ಕ್ರೀಡಾಕೂಟ
- *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ
- *ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
- *List of 2012 Summer Olympics medal winners
- *events/sports/೨೦೧೬:[[೭]]
- *events[[೮]]
- *ಒಲಂಪಿಕ್ ಇತಿಹಾಸ:[[೯]] [[೧೦]]
ಹೆಚ್ಚಿನ ಓದಿಗೆ
[ಬದಲಾಯಿಸಿ]- ಭಾರತದ ಕ್ರೀಡಾಪಟುಗಳು ಮತ್ತು ರಿಯೋ ಆಲ್ಬಮ್:[[೧೧]]
- ರಾಷ್ಟ್ರೀಯತೆಯ ಹಲವು ತೊರೆಗಳು ಕೂಡಿ ಹರಿವ ಒಲಿಂಪಿಕ್ಸ್ ಮಹಾನದಿ:31st Jul, 2016 Archived 2016-08-09 ವೇಬ್ಯಾಕ್ ಮೆಷಿನ್ ನಲ್ಲಿ.
- ನೂರು ಮೀಟರ್ ಓಟದ ವಿಶ್ವ ದಾಖಲೆಗಳು.
- List of Athelets:[[೧೨]]
- ಹೆಣ್ಣುಮಕ್ಕಳ ‘ಒಲಿಂಪಿಕ್’ ಶಕ್ತಿ ದಾಪುಗಾಲು Archived 2016-08-23 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ ಅಥ್ಲೆಟಿಕ್ಸ್, ಅನಾಥಾಲಯ ಕಪ್ಪು ಜನರ ಹಾಡು ಪಾಡು, ಇತ್ಯಾದಿ...
- ↑ "About Rio 2016 Summer Olympics"". Archived from the original on 2020-06-14. Retrieved 2016-05-02.
- ↑ "ಆರ್ಕೈವ್ ನಕಲು". Archived from the original on 2011-07-23. Retrieved 2016-05-02.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ 18/07/2016:www.prajavani.net/article/ಸಾಂಬಾ ನಾಡು-ಬ್ರೆಜಿಲ್‌ನ-ಕ್ರೀಡಾ-ಪ್ರೀತಿ
- ↑ http://www.prajavani.net/sites/default/files/article_images/2016/07/30/olampics.jpg :ಮರುಕಳಿಸಿದ ಇತಿಹಾಸ ಮರುಕಳಿಸಿದ ದುರಂತ:07/31/2016
- ↑ "G1 - Passada crise com o COI, Paes diz que obras da Rio 2016 estão 'na mão' - notícias em Rio 450 anos
- ↑ "ಒಲಿಂಪಿಕ್ಸ್ ಜ್ಯೋತಿಗೆ ಹೆಚ್ಚಿನ ಭದ್ರತೆ;30th Jul, 2016". Archived from the original on 2016-07-05. Retrieved 2016-07-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಆರ್ಕೈವ್ ನಕಲು". Archived from the original on 2016-10-12. Retrieved 2016-05-03.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಸಿಂಧು ಹೋರಾಟಕ್ಕೆ ಬೆಳ್ಳಿಯ ಬೆಡಗು". Archived from the original on 2016-08-20. Retrieved 2016-08-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಕುಸ್ತಿ: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಸಾಕ್ಷಿ". Archived from the original on 2016-08-21. Retrieved 2016-08-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಪದಕ ತಪ್ಪಿದರೂ ಮನಗೆದ್ದ ದೀಪಾ
- ↑ indian-athletes-qualified-brazil[[೧]]
- ↑ ಗೌರಿಕಾ ಸಿಂಗ್ 13ರ ಅತೀ ಕಿರಿಯ ಪ್ರಾಯದಲ್ಲಿ ರಿಯೋ ಒಲಿಂಪಿಕ್ ಈಜುಪಟು:2 ಆಗಸ್ಟ್ 2016
- ↑ ರಿಯೋದ ಕಿರಿಯ ಕ್ರೀಡಾಪಟು
- ↑ 15-8-2016-ಪ್ರಜಾವಾಣಿ
- ↑ ಉಸೇನ್ ಬೋಲ್ಟ್ ಕೊರಳಿಗೆ ಮೂರನೇ ಚಿನ್ನ
- ↑ ಓಟದಲ್ಲಿ ಬೋಲ್ಟ್‌ಗೆ ಸಾಟಿಯಿಲ್ಲ
- ↑ www.hotstar.com/rio-olympics-2016