ವಿಷಯಕ್ಕೆ ಹೋಗು

ಸಂಪರ್ಕ ಉಪಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
U.S. ಸೈನಿಕ MILSTAR ಸಂಪರ್ಕ ಉಪಗ್ರಹ

ಸಂಪರ್ಕ ಉಪಗ್ರಹ ವು (ಸ್ಯಾಟ್‌ಕಾಮ್‌ ಇದರ ಸಂಕ್ಷಿಪ್ತ ರೂಪ) ದೂರ ಸಂಪರ್ಕದ ಉದ್ದೇಶಕ್ಕಾಗಿ ಬಾಹ್ಯಕಾಶಕ್ಕೆ ಹಾರಿಬಿಡಲಾದ ಕೃತಕ ಉಪಗ್ರಹವಾಗಿದೆ. ಭೂಸ್ಥಾಯೀ ಕಕ್ಷೆಗಳು,ಮೋಲ್ನಿಯಾ ಕಕ್ಷೆಗಳು, ಇತರ ಅಂಡಾಕಾರದ ಕಕ್ಷೆಗಳು ಮತ್ತು ಕೆಳ ಮಟ್ಟದ (ಧ್ರುವ ಪ್ರದೇಶ ಮತ್ತು ಧ್ರುವ ಪ್ರದೇಶದ್ದಲ್ಲದ) ಭೂ ಕಕ್ಷೆಗಳು ಸೇರಿದಂತೆ ವಿವಿಧ ಕಕ್ಷೆಯ ಪಥಗಳನ್ನು ಆಧುನಿಕ ಸಂಪರ್ಕ ಉಪಗ್ರಹಗಳು ಬಳಸುತ್ತವೆ.

ಸೂಕ್ಷ್ಮ ತರಂಗ ರೇಡಿಯೊ ಮರುಪ್ರಸಾರವನ್ನು ಸಂಪರ್ಕ ಉಪಗ್ರಹಗಳು ಸ್ಥಾಯೀ ಸೇವೆಗಳ (ನಿರ್ದಿಷ್ಟ ಪಥ) ತಾಂತ್ರಿಕ ಪೂರೈಕೆ ಮಾಡುತ್ತವೆ.ಇದು ಜಲಂರ್ತಾಗಾಮಿ ಸಂಪರ್ಕ ಕೇಬಲ್‌ಗಳಿಗೆ ಪೂರಕವಾದಂಥವುಗಳು. ಹಡಗುಗಳು, ವಾಹನಗಳು, ವಿಮಾನಗಳು ಮತ್ತು ಚಿಕ್ಕ ಸಂಪರ್ಕ ಸಾಧನಗಳಾದ TV ಹಾಗೂ ರೇಡಿಯೊ ಪ್ರಸಾರಕ್ಕೆ ಕೇಬಲ್‌ನಂತಹ ಇತರ ತಂತ್ರಜ್ಞಾನಗಳನ್ನು ಅನ್ವಯಿಸುವುದು ಅಸಾಧ್ಯವೂ ಪ್ರಾಯೋಗಿಕವಲ್ಲದ್ದೂ ಆದ್ದರಿಂದ ಇಂಥ ಕಡೆಗಳಲ್ಲಿ ಉಪಗ್ರಹಗಳ ನೆರವನ್ನು ಪಡೆಯಲಾಗುವುದು.

ಇತಿಹಾಸ

[ಬದಲಾಯಿಸಿ]

ನೋಡಿ: ಭೂಸ್ಥಾಯೀ ಕಕ್ಷೆ ಮತ್ತು ಭೂಸಮಾನುಪಾತದ ಕಕ್ಷೆ ಉಪಗ್ರಹಗಳು.

ಆರಂಭಿಕ ಕಾರ್ಯಚರಣೆಗಳು

[ಬದಲಾಯಿಸಿ]

ಅಕ್ಟೋಬರ್ ೪, ೧೯೫೭ರಲ್ಲಿ ಮೊದಲ ಕೃತಕ ಉಪಗ್ರಹವಾದ ಸೋವಿಯತ್‌ ಸ್ಪುಟ್ನಿಕ್‌ ೧ನ್ನು ಬಾಹ್ಯಕಾಶಕ್ಕೆ ಹಾರಿಬಿಡಲಾಯಿತು ಹಾಗೂ ಇದು ೨೦.೦೦೫ ಮತ್ತು ೪೦.೦೦೨ MHz ತರಂಗಾಂತರಗಳಲ್ಲಿ ಕೆಲಸ ಮಾಡುವ ರೇಡಿಯೊ-ಟ್ರಾನ್ಸ್‌ಮೀಟರ್‌ ಹೊಂದಿತ್ತು. ೧೯೫೮ರಲ್ಲಿ ಸಂವಹನವನ್ನು ಮರುಪ್ರಸಾರ ಮಾಡಬಹುದಾದ ಮೊದಲ ಅಮೆರಿಕನ್‌ ಉಪಗ್ರಹ ಪ್ರಾಜೆಕ್ಟ್‌ SCOREಅನ್ನು ಬಾಹ್ಯಕಾಶಕ್ಕೆ ಚಿಮ್ಮಿಸಲಾಯಿತು. ಅದರಲ್ಲಿ ಧ್ವನಿ ಸಂದೇಶಗಳನ್ನು ಸಂಗ್ರಹಿಸಲು ಮತ್ತು ರವಾನಿಸಲು ಧ್ವನಿಮುದ್ರಕವನ್ನು ಅಳವಡಿಸಲಾಗಿತ್ತು. ಈ ಉಪಗ್ರಹದ ಮೂಲಕ U.S. ಅಧ್ಯಕ್ಷರಾದ ಡ್ವಿಟ್‌ D. ಇಸೆನೊವರ್‌ರವರು ಕ್ರಿಸ್‌ಮಸ್‌ ಶುಭಾಶಯವನ್ನು ವಿಶ್ವಕ್ಕೆ ನೀಡಿದರು.೧೯೬೦ರಲ್ಲಿ ನಾಸಾ ಈಕೋ ಉಪಗ್ರಹವನ್ನು ಹಾರಿಸಿತ್ತು. ಇದರಲ್ಲಿರುವ 100-foot (30 m)ಅಲ್ಯೂಮಿನಿಯಂ ಅನ್ನು ಒಳಗೊಂಡ 100-foot (30 m)PET ಫಿಲಂ ಬಲೂನು ರೇಡಿಯೊ ಸಂಪರ್ಕಕ್ಕೆ ಪ್ರತಿಫಲಿಸಲು ಜಡವಾಗಿತ್ತು.೧೯೬೦ರಲ್ಲಿ ಫಿಲ್ಕೊ ರಚಿಸಿದ ಕುರಿಯರ್ 1B ಉಪಗ್ರಹವನ್ನು ಹಾರಿ ಬಿಡಲಾಯಿತು. ಇದು ಮೊದಲ ಸಕ್ರಿಯ ಪುನರಾವರ್ತಕ ಉಪಗ್ರಹವಾಗಿದೆ.

ಟೆಲ್‌ಸ್ಟಾರ್‌ ಉಪಗ್ರಹವು ಮೊದಲ ಸಕ್ರಿಯ, ನೇರ ಮರುಪ್ರಸಾರ ಸಂಪರ್ಕ ಉಪಗ್ರಹವಾಗಿದೆ. ಸಂಪರ್ಕ ಉಪಗ್ರಹವನ್ನು ಅಭಿವೃದ್ಧಿಸಲು AT&T, ಬೆಲ್‌ ಟೆಲಿಫೋನ್‌ ಲ್ಯಾಬೋರೇಟರಿಸ್‌, NASA, ಬ್ರಿಟಿಷ್‌ ಜನರಲ್‌ ಪೋಸ್ಟ್‌ ಆಫೀಸ್‌, ಮತ್ತು ಫ್ರಂಚ್‌ ನ್ಯಾಷನಲ್‌ PTTಗಳ (ಪೋಸ್ಟ್‌ ಆಫೀಸ್‌) ನಡುವೆ ಬಹು-ರಾಷ್ಟ್ರೀಯ ಒಪ್ಪಂದದ ಅಂಗವಾಗಿ AT&T ಸಂಬಂಧಿಸಿದಂತೆ ಜುಲೈ 10, ೧೯೬೨ರಲ್ಲಿ ಕೇಪ್‌ ಕ್ಯಾನವರಲ್‌ದಿಂದ NASA ಮೊದಲ ಖಾಸಗಿ ಪ್ರಾಯೋಜಿತ ಬಾಹ್ಯಕಾಶ ಉಡಾವಣೆ ಮಾಡಿತು. ಟೆಲ್‌ಸ್ಟಾರ್‌ನ್ನು ಅಂಡಾಕಾರದ ಕಕ್ಷೆಯಲ್ಲಿರಿಸಲಾಗಿದ್ದು (ಪ್ರತಿ ೨ ಗಂಟೆ ೩೭ ನಿಮಿಷಗಳಲ್ಲಿ ಒಂದು ಸುತ್ತು ಪೂರ್ಣಗೊಳ್ಳುತ್ತದೆ), ಅದು ಭೂಮಧ್ಯರೇಖೆಯ ಮೇಲೆ ೪೫° ಕೋನದಲ್ಲಿ ಸುತ್ತುವುದು.

ಮೊದಲ ಭೂಸ್ಥಾಯೀ ಉಪಗ್ರಹ ಹ್ಯೂಗ್‌ಸ್ಸಿನ್‌ಕಾಮ್‌ 2ನ್ನು ಜುಲೈ 26 ೧೯೬೩ರಲ್ಲಿ ಉಡಾಯಿಸಲಾಯಿತು. ಸಿನ್‌ಕಾಮ್‌ ೨ ಸ್ಥಿರವಾದ ವೇಗದಲ್ಲಿ ದಿನಕ್ಕೊಂದು ಬಾರಿ ಭೂಮಿಯನ್ನು ಸುತ್ತುತ್ತದೆ. ಅದರೆ ಇದು ಈಗಲೂ ಉತ್ತರ-ದಕ್ಷಿಣ ಚಲನೆಯನ್ನು ಹೊಂದಿರುವುದರಿಂದ ಈ ಉಪಗ್ರಹವನ್ನು ಪತ್ತೆಹಚ್ಚಲು ವಿಶೇಷ ಉಪಕರಣಗಳ ಅಗತ್ಯವಿದೆ.

ಭೂಸ್ಥಾಯೀ ಕಕ್ಷೆಗಳು

[ಬದಲಾಯಿಸಿ]
ಭೂಸ್ಥಾಯೀ ಕಕ್ಷೆ

ಭೂಸ್ಥಾಯೀ ಕಕ್ಷೆಯಲ್ಲಿರುವ ಉಪಗ್ರಹಗಳು ಭೂಮಿಯಲ್ಲಿರುವ ವೀಕ್ಷಕರಿಗೆ ಸ್ಥಿರಸ್ಥಿತಿಯಲ್ಲಿ ಇರುವಂತೆ ಕಾಣಿಸುವುದು. ಭೂಸ್ಥಾಯೀ ಉಪಗ್ರಹ ಭೂಮಿಯನ್ನು ಭೂಮಧ್ಯರೇಖೆಯ ಮೇಲೆ ಹಾದು ಸಮಾನ ವೇಗದಲ್ಲಿ ದಿನಕ್ಕೊಂದು ಬಾರಿ ಸುತ್ತುವುದು.

ಉಪಗ್ರಹದ ಕಡೆಗೆ ಮುಖಮಾಡಿರುವ ನೆಲದ ಮೇಲಿನ ಆಂಟೆನಾಗಳಿಂದ ಸಂಪರ್ಕ ಸಾಧನೆಗೆ ಭೂಸ್ಥಾಯೀ ಕಕ್ಷೆ ಉಪಯುಕ್ತವಾಗಿದೆ. ಉಪಗ್ರಹದ ಚಲನೆಯನ್ನು ಪತ್ತೆ ಹಚ್ಚಲು ಬೇಕಿರುವ ವೆಚ್ಚದಾಯಕ ಉಪಕರಣಗಳಿಲ್ಲದೆಯೂ ಕೂಡ ಪರಿಣಾಮಕಾರಿಯಾಗಿ ಈ ಕಕ್ಷೆಯಲ್ಲಿರುವ ಉಪಗ್ರಹ ಕಾರ್ಯನಿರ್ವಹಿಸಬಲ್ಲದು. ಸಂಪರ್ಕ ಸಾಧನೆಗಾಗಿ (ಉದಾ:ನೇರ TV ಪ್ರಸಾರ) ಭೂಮಿಯ ಮೇಲೆ ನೆಲೆಗೊಂಡ ಆಂಟೆನಾಗಳು ಅಧಿಕ ಸಂಖ್ಯೆಯಲ್ಲಿ ಬೇಕಾಗುವುದನ್ನು ಮತ್ತು ಅದರಿಂದ ಆಗುವ ವೆಚ್ಚವನ್ನು ಗಮನಿಸಿದಾಗ, ಉಪಗ್ರಹವನ್ನು ಅಷ್ಟು ಮೇಲಕ್ಕೆತ್ತಿ ಕಕ್ಷೆಗೆ ಸೇರಿಸುವ ಜಟಿಲ ಕಾರ್ಯ ಮತ್ತು ಅದಕ್ಕೆ ತಗಲುವ ಪ್ರತ್ಯೇಕ ಖರ್ಚು ಎಷ್ಟು ಸೂಕ್ತ ಎಂಬುದನ್ನು ಸಮರ್ಥಿಸುತ್ತದೆ.

ಭೂಸ್ಥಾಯೀ ಸಂಪರ್ಕ ಉಪಗ್ರಹ ಕಲ್ಪನೆಯನ್ನು ಅರ್ಥರ್‌ C. ಕ್ಲಾರ್ಕ್‌ರವರು ಮೊದಲು ಪ್ರಸ್ತಾಪಿಸಿದ್ದರು. ಇದರ ಕುರಿತು ಕೋಂಸ್ಟಾಂಟಿನ್‌ ಸಿಯೋಲ್ಸ್ಕಿ ಕೆಲಸ ಮಾಡಿದ್ದಾರೆ ಮತ್ತು ೧೯೨೯ರಲ್ಲಿ ಹರ್ಮಾನ್‌ ಪೋಟೋಕ್ನಿಕ್‌ರವರು ((ಹರ್ಮಾನ್‌ ನೂರ್ಬರ್ಗ್‌ ಎಂದು ಬರೆಯಲಾಗುವ) ಭೂಸ್ಥಾಯೀ ಸಂಪರ್ಕ ಉಪಗ್ರಹದ ಕುರಿತು ತಾವು ಮಾಡಿದ ಕೆಲಸವನ್ನು ದಾಸ್‌ ಪ್ರೋಬ್ಲೆಮ್‌ ದೆರ್‌ ಬೆಫಾಹ್ರುಂಗ್‌ ದೆಸ್‌ ವೆಲ್ಟ್ರಾಯುಮ್ಸ್‌ - ದೆರ್‌ ರಾರೆಟೆನ್‌-ಮೊಟರ್‌ ನಲ್ಲಿ ಬರೆದಿದ್ದಾರೆ. ಎಕ್ಸ್‌ಟ್ರಾ-ಟೆರ್ರೆಸ್ಟ್ರಿಯಲ್‌ ರಿಲೇಸ್‌ Archived 2007-12-25 ವೇಬ್ಯಾಕ್ ಮೆಷಿನ್ ನಲ್ಲಿ.” ಎಂಬ ಲೇಖನವನ್ನು 'ವೈರ್‌ಲೆಸ್‌ ವರ್ಲ್ಡ್'‌ ಎಂಬ ಬ್ರಿಟಿಷ್‌‌ ಪತ್ರಿಕೆಯ ಅಕ್ಟೋಬರ್ 1945ಸಂಚಿಕೆಯಲ್ಲಿ ಕ್ಲಾರ್ಕ್‌ ಪ್ರಕಟಿಸಿದರು. ರೇಡಿಯೊ ಸಂಕೇತಗಳನ್ನು ಪ್ರಸಾರಮಾಡುವ ಉದ್ದೇಶಕ್ಕಾಗಿ ಭೂಸ್ಥಾಯೀ ಕಕ್ಷೆಗಳಲ್ಲಿ ಕೃತಕ ಉಪಗ್ರಹಗಳ ನಿಯೋಜನೆಯ ಹಿಂದಿರುವ ಮೂಲಭೂತ ತತ್ವಗಳನ್ನು ಈ ಲೇಖನ ವಿವರಿಸುತ್ತದೆ. ಹೀಗಾಗಿ ಅರ್ಥರ್‌ C. ಕ್ಲಾರ್ಕ್‌ ಅವರನ್ನು ಸಂಪರ್ಕ ಉಪಗ್ರಹದ ಅನ್ವೇಷಕ ಎಂದು ಆಗಾಗ ಉಲ್ಲೇಖಿಸಲಾಗುತ್ತದೆ.

ಆಗಸ್ಟ್‌ 19, 1964ರಲ್ಲಿ ಮೊದಲ ಭೂಸ್ಥಾಯೀ ಉಪಗ್ರಹವಾದ ಸಿನ್‌ಕಾಮ್‌ 3ನ್ನು ಕಕ್ಷೆಗೆ ಹಾರಿಸಲಾಯಿತು. ಅಂತರಾಷ್ಟ್ರೀಯ ದಿನಾಂಕ ರೇಖೆ ಮೇಲೆ ೧೮೦° ಪೂರ್ವ ರೇಖಾಂಶದಲ್ಲಿನ ಕಕ್ಷೆಯಲ್ಲಿ ಇದನ್ನು ಇರಿಸಲಾಗಿದೆ. ಇದನ್ನು ಅದೇ ವರ್ಷ ಜಪಾನಿನ ಟೊಕಿಯೊದಲ್ಲಿ ನಡೆದ 1964 ಬೇಸಿಗೆ ಒಲಿಂಪಿಕ್ಸ್‌ನ ಪ್ರಾಯೋಗಿಕ ದೂರದರ್ಶನ ಪ್ರಸಾರವನ್ನು ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಪ್ರಸಾರಮಾಡಲು ಬಳಸಲಾಯಿತು. ಇದು ಫೆಸಿಫಿಕ್‌ ಸಾಗರದಾಚೆಗೂ ಮಾಡಿದ ಮೊದಲ ದೂರದರ್ಶನ ಕಾರ್ಯಕ್ರಮ ಪ್ರಸಾರವಾಗಿದೆ.

ಸಿನ್‌ಕಾಮ್‌ 3ಹಾರಿಸಿದ ಸ್ವಲ್ಪದಿನಗಳ ನಂತರ ಅಂದರೆ ಏಪ್ರಿಲ್‌ 6, 1965ರಲ್ಲಿ ಅರ್ಲಿ ಬರ್ಡ್‌ ಎನ್ನುವ ಇಂಟೆಲ್‌ಸ್ಯಾಟ್‌ Iಅನ್ನು ಉಡಾಯಿಸಿ ೨೮° ಪಶ್ಚಿಮ ರೇಖಾಂಶದಲ್ಲಿರುವ ಕಕ್ಷೆಗೆ ಸೇರಿಸಲಾಯಿತು. ಇದು ಅಟ್ಲಾಂಟಿಕ್‌ ಸಾಗರ‌ದ ಮೇಲೆ ದೂರ ಸಂಪರ್ಕಕ್ಕಾಗಿ ಬಳಸಿದ ಮೊದಲ ಭೂಸ್ಥಾಯೀ ಉಪಗ್ರಹವಾಗಿದೆ.

ನವೆಂಬರ್‌ 9, 1972ರಲ್ಲಿ ಉತ್ತರ ಅಮೆರಿಕಾದ ಮೊದಲ ಭೂಸ್ಥಾಯೀ ಉಪಗ್ರಹ ಅನಿಕ್‌ A1ಅನ್ನು ಟೆಲಿಸ್ಯಾಟ್‌ ಕೆನೆಡಾ ಬಾಹ್ಯಕಾಶಕ್ಕೆ ಹಾರಿಬಿಡಲಾಯಿತು. ಇದರ ಬೆನ್ನಲ್ಲೆ ಅಂದರೆ, ಏಪ್ರಿಲ್‌ 13, 1974ರಲ್ಲಿ ಪಾಶ್ಚಿಮಾತ್ಯ ಒಕ್ಕೂಟವು ಭೂಸ್ಥಾಯೀ ಉಪಗ್ರಹವಾದ ವೆಸ್ಟಾರ್‌ 1ಅನ್ನು ಯುನೈಟೆಡ್‌ ಸ್ಟೇಟ್ಸ್‌ ಉಡಾಯಿಸಿತು.

ಡಿಸೆಂಬರ್‌ 19, 1974ರಲ್ಲಿ ಮೂರು ಅಕ್ಷಗಳಲ್ಲಿ ಸ್ಥಿರವಾಗಿರುವ ವಿಶ್ವದ ಭೂಸ್ಥಾಯೀ ಸಂಪರ್ಕ ಉಪಗ್ರಹವಾದ ಫ್ರಾಂಕೊ-ಜರ್ಮನ್‌ ಸಿಂಫೋನೀಯನ್ನು ಬಾಹ್ಯಕಾಶಕ್ಕೆ ಸೇರಿಸಿದರು.

ಟೆಲ್‌ಸ್ಟಾರ್‌, ಸಿನ್‌ಕಾಮ್‌ ೩, ಅರ್ಲಿ ಬರ್ಡ್‌, ಅನಿಕ್‌ A೧, ಮತ್ತು ವೆಸ್ಟಾರ್‌ ೧, RCA ಅಮೆರಿಕಾಮ್‌ರ (ನಂತರ GE ಅಮೆರಿಕಾಮ್‌, ಈಗ SES ಅಮೆರಿಕಾಮ್‌) ಉಡಾವಣೆಯ ಮುಂದೊಮ್ಮೆ ೧೯೭೫ರಲ್ಲಿ ಸ್ಯಾಟ್‌ಕಾಮ್‌ 1ಅನ್ನು ಉಡಾಯಿಸಲಾಯಿತು. WTBS (ಈಗ TBS ಸುಪರ್‌ಸ್ಟೇಷನ್‌), HBO, CBN (ಈಗ ABC ಸಮೂಹ), ಮತ್ತು ದಿ ವೆದರ್‌ ಚ್ಯಾನಲ್‌ನಂತಹ ಪ್ರಾರಂಭದ ಕೇಬಲ್‌ TV ಚ್ಯಾನಲ್‌ಗಳ ಪ್ರಸಾರಕ್ಕೆ ನೆರವಾಗುವ ಸಾಧನವಾಗಿ ಸ್ಯಾಟ್‌ಕಾಮ್‌ ೧ ಉಪಗ್ರಹವು ಯಶಸ್ವಿಯಾಯಿತು. ಏಕೆಂದರೆ ಈ ಉಪಗ್ರಹವನ್ನು ಬಳಸಿ ಎಲ್ಲಾ ಸ್ಥಳೀಯ ಕೇಬಲ್‌ TV ಬಿತ್ತರಿಸುವ ಕೇಂದ್ರಗಳಿಗೆ ತಮ್ಮ ಕಾರ್ಯಕ್ರಮಗಳನ್ನು ಈ ಚ್ಯಾನಲ್‌ಗಳು ರವಾನಿಸುತ್ತಿದ್ದವು. ಇದಲ್ಲದೇ, ABC, NBC, ಮತ್ತು CBSನಂತಹ ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಬ್ರೋಡ್‌ಕಾಸ್ಟ್‌ ಟೆಲಿವಿಷನ್‌ ನೆಟ್‌ವರ್ಕ್‌ಗಳು ಸ್ಥಳೀಯ ಪ್ರಸಾರ ಕೇಂದ್ರಗಳೊಂದಿಗೆ ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಬಳಸಿದ ಮೊದಲ ಉಪಗ್ರಹ ಇದಾಗಿದೆ. ಅಮೆರಿಕದಲ್ಲಿ ಸ್ಯಾಟ್ಕಾಮ್ ೧ ವ್ಯಾಪಕ ಬಳಕೆಯಲ್ಲಿತ್ತು. ಕಾರಣ ತನ್ನ ಪ್ರತಿಸ್ಪರ್ಧಿ ಎನಿಸಿದ್ದ ವೆಸ್ಟಾರ್ ೧ ಇದ್ದ ಟ್ರಾನ್ಸ್‌ಪೋಂಡರ್ಗಳಿಗಿಂತ ದುಪ್ಪಟ್ಟು ಟ್ರಾನ್ಸ್‌ಪೋಂಡರ್ ಸ್ಯಾಟ್‌ಕಾಮ್ ೧ ರಲ್ಲಿ ಇತ್ತು.(ಮೊದಲಿನದರಲ್ಲಿ ೨೪ ಇದ್ದರೆ ಇನ್ನೊಂದರಲ್ಲಿ ೧೨ ಮಾತ್ರ ಇತ್ತು)ಇದರಿಂದಾಗಿ ಬಳಕೆದಾರರಿಗೆ ಖರ್ಚು ಕಡಿಮೆ ಬೀಳತ್ತಿತ್ತು. ನಂತರದ ದಶಕಗಳಲ್ಲಿನ ಉಪಗ್ರಹಗಳು ಇದಕ್ಕೂ ಹೆಚ್ಚಿನ ಸಂಖ್ಯೆಯ ಟ್ರಾನ್‌ಸ್ಪೋಂಡರ್‌ಗಳನ್ನು ಹೊಂದುವುದರತ್ತ ಗಮನ ನೆಟ್ಟವು.

೨೦೦೦ರ ಹೊತ್ತಿಗೆ ಹ್ಯೂಗ್‌ಸ್ ಸ್ಪೇಸ್‌ ಆಂಡ್‌ ಕಮ್ಯುನಿಕೇಷನ್ಸ್‌ವು (ಈಗ ಬೋಯಿಂಗ್‌ ಸ್ಯಾಟಲೈಟ್‌ ಡೆವಲಪ್‌ಮೆಂಟ್‌ ಸೆಂಟರ್‌)) ವಿಶ್ವಾದ್ಯಂತ ಇರುವ ನೂರಕ್ಕೂ ಹೆಚ್ಚು ಉಪಗ್ರಹಗಳಲ್ಲಿ ೪೦%ರಷ್ಟು ನಿರ್ಮಿಸಿದ್ದಾರೆ. ಇತರ ಪ್ರಮುಖ ಉಪಗ್ರಹ ತಯಾರಕರೆಂದರೆ ಸ್ಪೇಸ್‌ ಸಿಸ್ಟಂಸ್‌/ಲೋರಲ್‌, STAR ಬಸ್‌ ಸರಣಿಯೊಂದಿಗೆ ಆರ್ಬಿಟಲ್ ಸೈನ್ಸ್‌ಸ್‌ ಕಾರ್ಪೋರೇಷನ್‌, ಲಾಕ್‌ಹೀಡ್‌ ಮಾರ್ಟಿನ್‌ (ಹಿಂದೆ RCA ಅಸ್ಟ್ರೋ ಎಲೆಕ್ಟ್ರಾನಿಕ್ಸ್‌/GE ಅಸ್ಟ್ರೋ ಸ್ಪೇಸ್‌ ಬ್ಯುಸಿನೆಸ್‌ನ ಮಾಲೀಕತ್ವದಲ್ಲಿತ್ತು), ನಾರ್ಥ್‌ರೋಪ್‌ ಗ್ರಮ್ಮನ್‌, ಅಲ್ಕಾಟೆಲ್‌ ಸ್ಪೇಸ್‌, ಈಗ ಸ್ಪೇಸ್‌ಬಸ್‌ ಸರಣೆಯೊಂದಿಗೆ ತ್ಯಾಲಸ್‌ ಅಲೆನಿಯಾ ಸ್ಪೇಸ್‌ ಮತ್ತು EADS ಅಸ್ಟ್ರೀಯಮ್‌.

ಕೆಳಮಟ್ಟದ ಭೂಕಕ್ಷೆಯ ಉಪಗ್ರಹಗಳು

[ಬದಲಾಯಿಸಿ]
ಸೈನ್‌ನಲ್ಲಿರುವ ಕೆಳಮಟ್ಟದ ಭೂಕಕ್ಷೆ

ಭೂಮಿಯ ಮೇಲ್ಮೈ ಮೇಲೆ ಸುಮಾರು ೪೦೦ ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕೆಳಮಟ್ಟದ ಭೂಕಕ್ಷೆಯಲ್ಲಿ (LEO) ಉಪಗ್ರಹವು ಭೂಮಿಯನ್ನು ಸುತ್ತಲು ಸುಮಾರು ೯೦ ನಿಮಿಷಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಉಪ-ಉಪಗ್ರಹದ ಅಂದಾಜು ೧೦೦೦ ಕಿ.ಮೀ. ಸುತ್ತ ಮುತ್ತಲಿಂದ, ಕೆಳಮಟ್ಟದಲ್ಲಿರುವ ಈ ಉಪಗ್ರಹ ಗೋಚರಿಸುತ್ತದೆ.ಕಡಿಮೆ ಎತ್ತರದಲ್ಲಿರುವುದೇ ಈ ಸಾಧ್ಯತೆಗೆ ಕಾರಣ. ಇದಲ್ಲದೇ ಕೆಳಮಟ್ಟದ ಭೂಕಕ್ಷೆಯಲ್ಲಿರುವ ಉಪಗ್ರಹಗಳು ಭೂವಿಯ ಸ್ಥಾನಕ್ಕೆ ಅನುಗುಣವಾಗಿ ತಮ್ಮ ಸ್ಥಾನವನ್ನು ತ್ವರಿತವಾಗಿ ಬದಲಿಸಿಕೊಳ್ಳುವುವು. ತಡೆರಹಿತ ಸಂಪರ್ಕದ ಕಾರ್ಯಚರಣೆಯ ಅಗತ್ಯವಿದ್ದರೆ, ಸ್ಥಳೀಯ ಅಗತ್ಯಕ್ಕೆ ಕೂಡ ಹೆಚ್ಚಿನ ಸಂಖ್ಯೆಯ ಉಪಗ್ರಹಗಳ ಅಗತ್ಯ ಬೀಳುತ್ತದೆ.

ಕೆಳಮಟ್ಟದ ಭೂಕಕ್ಷೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಭೂಮಿಯಿಂದಿರುವ ಕಕ್ಷೆಗಿರುವ ಕಡಿಮೆ ಅಂತರ ಮತ್ತು ಉನ್ನತ ಮಟ್ಟದ ಸಂಕೇತ ಬಲ ಅಗತ್ಯವಿಲ್ಲದ ಕಾರಣದಿಂದ ಭೂಸ್ಥಾಯೀ ಉಪಗ್ರಹಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ (ಮೂಲದಿಂದಿರುವ (ನೆಲ) ಅಂತರ ಹೆಚ್ಚಾದಂತೆ ಸಂಕೇತ ಬಲವು ಇಳಿಯುವುದು ಎನ್ನುವುದು ನೆನಪಿರಲಿ. ಇದರಿಂದಾಗಿ ಹಠಾತ್ ಪರಿಣಾಮಗಳು ಸಂಭವಿಸುತ್ತವೆ). ಆದ್ದರಿಂದ ಉಪಗ್ರಹಗಳ ಸಂಖ್ಯೆ ಮತ್ತು ಅವುಗಳಿಗೆ ತಗಲುವ ಉತ್ಪಾದನಾ ವೆಚ್ಚದ ಮಧ್ಯೆ ರಾಜಿ ಮಾಡಿಕೊಳ್ಳಬಹುದು. ಜೊತೆಗೆ ಎರಡು ಪ್ರಕಾರದ ಕಾರ್ಯಚರಣೆಗಳನ್ನು ಬೆಂಬಲಿಸಲು ಅಗತ್ಯ ಬೀಳುವ ಉಪಗ್ರಹದಲ್ಲಿರುವ ಸಾಧನ ಮತ್ತು ಭೂಮಿಯ ಮೇಲಿರುವ ಸಾಧನಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ.

ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಉಪಗ್ರಹಗಳ ಸಮೂಹವನ್ನು ಉಪಗ್ರಹಗ ಪುಂಜ ಎಂದು ಕರೆಯಲಾಗುವುದು. ಪ್ರಾಥಮಿಕವಾಗಿ ದೂರ ಪ್ರದೇಶಗಳಿಗೆ ಉಪಗ್ರಹ ದೂರವಾಣಿ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಇಂತಹ ಎರಡು ಉಪಗ್ರಹ ಪುಂಜಗಳಿವೆ-ಒಂದು ಇರಿಡಿಯಮ್‌ ಮತ್ತೊಂದು ಗ್ಲೋಬಲ್‌ಸ್ಟಾರ್‌ ಸಿಸ್ಟಮ್ಸ್‌. ಇರಿಡಿಯಮ್‌ ಸಿಸ್ಟಮ್‌ ೬೬ ಉಪಗ್ರಹಗಳನ್ನು ಹೊಂದಿದೆ. Microsoft ವ್ಯವಸ್ಥಾಪಕ ಪೌಲ್‌ ಅಲ್ಲೆನ್‌ಅವರು ಬೆಂಬಲಿಸಿದ ಟೆಲಿಡೆಸಿಕ್‌ ಎನ್ನುವ ಇನ್ನೊಂದು LEO ಉಪಗ್ರಹ ಪುಂಜ ಸುಮಾರು ೮೪೦ ಉಪಗ್ರಹಗಳನ್ನು ಹೊಂದಿರಬೇಕೆಂದು ಯೋಜಿಸಲಾಗಿತ್ತು. ನಂತರ ಇದರ ಸಂಖ್ಯೆಯು ೨೮೮ಕ್ಕೆ ಇಳಿಸಲಾಯಿತಾದರೂ ಕೊನೆಗೆ ಒಂದು ಪರೀಕ್ಷಾ ಉಪಗ್ರಹವನ್ನು ಮಾತ್ರ ಉಡಾಯಿಸಲಾಯಿತು.

ಭೂಮಿಯ ಒಂದು ಭಾಗದಲ್ಲಿ ಹಾದುಹೋಗುವಾಗ ಸ್ವೀಕರಿಸಿದ ಮಾಹಿತಿಯನ್ನು ಸಂಗ್ರಹಿಸಿ, ನಂತರ ಅದನ್ನು ಇನ್ನೊಂದು ಭಾಗದಲ್ಲಿ ಪ್ರಸಾರ ಮಾಡುವ ಸಾಮರ್ಥ್ಯವಿರುವ ಕೆಳಮಟ್ಟದ ಭೂಕಕ್ಷೆ ಉಪಗ್ರಹಗಳನ್ನು ಬಳಸಿ ಅವಿಚ್ಛಿನ್ನವಲ್ಲದ ಪ್ರಸಾರ ವ್ಯಾಪ್ತಿಯನ್ನು ನೀಡಲು ಸಾಧ್ಯವಾಯಿತು. ಇದೊಂದು ಕೆನೆಡಾCASSIOPEಎಂಬ ಸಂಪರ್ಕ ಉಪಗ್ರಹದ CASCADE ವ್ಯವಸ್ಥೆಯೊಂದಿಗಿನ ಸಂದರ್ಭ.ಸಂಗ್ರಹಣೆ ಮಾಡಿ ನಂತರ ರವಾನೆಮಾಡುವ ವಿಧಾನವನ್ನು ಬಳಸುವ ಇನ್ನೊಂದು ವ್ಯವಸ್ಥೆಯೆಂದರೆ ಓರ್ಬ್ಕಾಮ್.

ಮೊಲ್ನಿಯಾ ಉಪಗ್ರಹಗಳು

[ಬದಲಾಯಿಸಿ]

ಮೊದಲೇ ಹೇಳಿದಂತೆ ಭೂಸ್ಥಾಯೀ ಉಪಗ್ರಹಗಳು ಭೂಮಧ್ಯರೇಖೆಯ ಮೇಲೆಯೇ ಕಾರ್ಯನಿರ್ವಹಿಸಬೇಕಾದಂತ ಅನಿವಾರ್ಯತೆ ಇದೆ. ಎತ್ತರದ ಪ್ರಶಗಳಲ್ಲಿ ಸೇವೆಯನ್ನು ಒದಗಿಸಲು ಭೂಸ್ಥಾಯೀ ಉಪಗ್ರಹಗಳು ಸೂಕ್ತವಾದವಲ್ಲ: ಭೂಸ್ಥಾಯೀ ಉಪಗ್ರಹವು ದಿಗಂತದಲ್ಲಿ ಕೆಳಮಟ್ಟಕ್ಕೆ ಕಾಣಿಸುವುದಲ್ಲದೆ ಸಂಪರ್ಕದ ಮೇಲೆ ಪ್ರಭಾವ ಬೀರುವುದು ಮತ್ತು ಬಹುಮರ್ಗ ನಿರ್ಮಾಣವಾಗಲು ಕಾರಣವಾಗುತ್ತದೆ (ಭೂಮಿಯಲ್ಲಿರುವ ಆಂಟೆನಾಕ್ಕೆ ಕಳುಹಿಸಿರುವ ಸಂಕೇತ ಮತ್ತು ಅದರಿಂದ ಬಂದಿರುವ ಸಂಕೇತಗಳ ಘರ್ಷಣೆ ಸಂಭವಿಸಬಹುದು). ಮೊಲ್ನಿಯಾ ಸರಣಿಯ ಮೊದಲ ಉಪಗ್ರಹವನ್ನು ಏಪ್ರಿಲ್‌ 23, 1965ರಲ್ಲಿ ಹಾರಿ ಬಿಡಲಾಯಿತು ಮತ್ತು ಮೊಸ್ಕೋದ ಅಪ್‌ಲಿಂಕ್‌ ಕೇಂದ್ರದಿಂದ ಡೌನ್‌ಲಿಂಕ್‌ ಕೇಂದ್ರಗಳಾದಸೈಬೀರಿಯಾ, ರಷ್ಯಯನ್‌ ಫಾರ್‌ ಈಸ್ಟ್‌ನಲ್ಲಿರುವ ನೋರಿಲ್‌ಸ್ಕಿ, ಖಾಬರೋವ್ಸಿಕಿ, ಮಗದನ್‌ ಮತ್ತು ವ್ಲಡಿವೋಸ್ಟೋಕ್‌ನಲ್ಲಿರುವ TV ಸಂಕೇತಗಳ ಪ್ರಾಯೋಗಿಕ ಪ್ರಸಾರಕ್ಕಾಗಿ ಈ ಉಪಗ್ರಹವನ್ನು ಬಳಸಲಾಯಿತು. 1967ರ ನವೆಂಬರ್‌ನಲ್ಲಿ ಸೋವಿಯತ್‌ ಎಂಜಿನಿಯರ್‌ಗಳು ಆರ್ಬಿಟಾ ಎನ್ನುವ ಉಪಗ್ರಹ ದೂರದರ್ಶನದ ರಾಷ್ಟ್ರೀಯ TV ಜಾಲದ ವಿಶಿಷ್ಟ ವ್ಯವಸ್ಥೆಯನ್ನು ರಚಿಸಿದರು. ಅದು ಮೊಲ್ನಿಯಾ ಉಪಗ್ರಹಗಳನ್ನು ಆಧರಿಸಿ ರಚಿಸಲಾಗಿತ್ತು.

ಅಂತಹ ಸಂದರ್ಭಗಳಲ್ಲಿ ಮೋಲ್ನಿಯಾ ಕಕ್ಷೆಗಳನ್ನು ಬೇಡಿಕೆಯ ಮೇಲೆ ಬದಲಾಯಿಸಲಾಗುತ್ತಿತ್ತು. ಮೋಲ್ನಿಯಾ ಕಕ್ಷೆ ಉತ್ತಮವಾಗಿ ಪ್ರವೃತ್ತವಾಗಿದ್ದು, ಕಕ್ಷೆಯ ಉತ್ತರ ಭಾಗದಲ್ಲಿರುವಾಗ ಆಯ್ದ ಸ್ಥಾನಗಳ ಮೇಲೆ ಉನ್ನತ ಕೋನಯನ್ನು ಖಾತ್ರಿಪಡಿಸುತ್ತದೆ. (ಕ್ಷಿತಿಜದಲ್ಲಿ ಉಂಟಾಗುವ ಉಪಗ್ರಹದ ಸ್ಥಾನದಲ್ಲಿನ ವಿಸ್ತರಣೆಯೇ ಉನ್ನತಿ ಅಥವಾ ಔನ್ನತ್ಯ.ಹಾಗಾಗಿ ನಿರ್ದಿಷ್ಟ ಸ್ತರದಲ್ಲಿರುವ ಉಪಗ್ರಹವು ಶೂನ್ಯ ಉನ್ನತಿ ಕೋನಯನ್ನು ಹೊಂದಿರುತ್ತದೆ ಮತ್ತು ಉಪಗ್ರಹವು ನೇರವಾಗಿ ಮೇಲೆ ೯೦ ಡಿಗ್ರಿಯಷ್ಟು ಉನ್ನತಿ ಕೋನಯನ್ನು ಹೊಂದಿರುತ್ತದೆ).

ಇನ್ನೂ ಹೆಚ್ಚುವರಿಯಾಗಿ, ಮೋಲ್ನಿಯಾ ಕಕ್ಷೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರಂತೆ ಭೂಕೇಂದ್ರವು ಉಪಗ್ರಹವು ತನ್ನ ಹೆಚ್ಚಿನ ಸಮಯವನ್ನು ದೂರ ಉತ್ತರ ಅಕ್ಷಾಂಶಗಳಲ್ಲಿ ಕಳೆಯುತ್ತದೆ.ಈ ವೇಳೆಯಲ್ಲಿ ನೆಲದ ಮೇಲಿನ ಅದರ ಚಿಹ್ನೆ ಅತ್ಯಲ್ಪ ಸರಿದಾಡುವುದು ಅತ್ಯಲ್ಪ.ಉಪಗ್ರಹದ ಪರಿಭ್ರಮಣೆ ಅವಧಿಯ ಅರ್ಧದಿನವಾಗಿದೆ. ಹಾಗಾಗಿ ಪ್ರತಿ ಸೆಕೆಂಡ್‌ ಪರಿಭ್ರಮಣಕ್ಕೆ ಉದ್ದೇಶಿಸಿತ ಪ್ರದೇಶದ ಮೇಲೆ ಕಾರ್ಯಚರಣೆಗೆ ಎಂಟು ಗಂಟೆಗಳಷ್ಟು ಉಪಗ್ರಹವು ಲಭ್ಯವಾಗುತ್ತದೆ.ಹೀಗೆ ಮೂರು ಮೊಲ್ನಿಯಾ ಉಪಗ್ರಹ ಪುಂಜವು (ಕಕ್ಷೆಯ ಗೋಳದಲ್ಲಿ ಸೇರಿ) ತಡೆರಹಿತ ಪ್ರಸಾರವನ್ನು ಒದಗಿಸುವುದು.

ಮೊಲ್ನಿಯಾ ಉಪಗ್ರಹಗಳನ್ನು ರಷ್ಯಾದಲ್ಲಿ ದೂರವಾಣಿ ಮತ್ತು TV ಪ್ರಸಾರ ಸೇವೆಗಳಿಗಾಗಿ ಬಳಸಲಾಗಿದೆ. ಉದಾಹರಣೆಗೆ ದೊಡ್ಡ ಕಟ್ಟಡಗಳಿರುವ ನಗರ ಪ್ರದೇಶಗಳಲ್ಲಿ ಕಾರುಗಳಲ್ಲಿ ಪ್ರಯಾಣಿಸುವಾಗ ಸುರಕ್ಷಿತ ಸಂಪರ್ಕತೆಯ ಬದಲಿಗೆ ಉನ್ನತಿ ಕೋನದ ಪ್ರವೇಶ ಬೇಕಾಗುತ್ತದೆ. ಹೀಗೆ ಮೊಬೈಲ್‌ ರೇಡಿಯೊ ವ್ಯವಸ್ಥೆಗಳಿಗಾಗಿ ಇನ್ನೊಂದು ಉಪಯೋಗಕ್ಕಾಗಿ ಈ ಉಪಗ್ರಹವನ್ನು ಬಳಸುತ್ತಿದ್ದರು (ಕೆಳಮಟ್ಟದ ಅಕ್ಷಾಂಶಗಳಲ್ಲಿಯೂ ಕೂಡ).

ಉಪಯೋಗಗಳು

[ಬದಲಾಯಿಸಿ]

ದೂರವಾಣಿ

[ಬದಲಾಯಿಸಿ]
ಇರಿಡಿಯಮ್‌ ಉಪಗ್ರಹ

ಅತಿದೂರದ ಖಂಡಾಂತರ ಸಂಪರ್ಕಕ್ಕಾಗಿ ಈ ಉಪಗ್ರಹಗಳನ್ನು ಬಳಸಿಕೊಂಡಿದ್ದೇ ಪ್ರಮುಖವೂ, ಐತಿಹಾಸಿಕವೂ ಮತ್ತು ಮೊದಲ ಬಾರಿಗೆ ಅನ್ವಯಿಸಿಕೊಂಡಿದ್ದೂ ಆಗಿದೆ.ಸ್ಥಿರ ಪಬ್ಲಿಕ್ ಸ್ವಿಚ್ಡ್ ಟೆಲಿಫೋನ್‌ ನೆಟ್‌ವರ್ಕ್‌ ಸ್ಥಿರ ದೂರವಾಣಿಗಳಿಂದ ಭೂನಿಲ್ದಾಣ ದೂರವಾಣಿ ಭೂಕೇಂದ್ರಕ್ಕೆ ಕರೆಗಳನ್ನು ರವಾನಿಸುವುದು. ನಂತರ ಕರೆಗಳು ಭೂಸ್ಥಾಯೀ ಉಪಗ್ರಹಕ್ಕೆ ರವಾನೆಯಾಗುವುದು. ಸಮಾನವಾದ ಹಾದಿಯನ್ನು ಡೌನ್‌ಲಿಂಕ್‌ ಅನುಸರಿಸುತ್ತದೆ . ಫೈಬರ್‌-ಆಪ್ಟಿಕ್ಸ್‌ನ ಬಳಕೆಯ ಮೂಲಕ ಜಲಾಂರ್ತಾಗಾಮಿ ಸಂಪರ್ಕ ಕೇಬಲ್‌ಗಳ ಸುಧಾರಣೆಯಿಂದಾಗಿ ಸ್ಥಿರ ದೂರವಾಣಿಗಳ ಸೇವೆಗಳಿಗಾಗಿ ೨೦ನೆಯ ಶತಮಾನದ ಕೊನೆಯಲ್ಲಿ ಉಪಗ್ರಹ ಬಳಕೆ ಸ್ವಲ್ಪ ಕುಂದಿತು. ಆದರೆ ಅಸ್ಸೆನ್ಷನ್ ದ್ವೀಪ, ಸೈಂಟ್‌ ಹೆಲೆನಾ, ಡಾಯೆಗೊ ಗಾರ್ಸಿಯಾ ಮತ್ತು ಈಸ್ಟರ್‌ ದ್ವೀಪದಂತಹ ದೂರ ಪ್ರದೇಶದಲ್ಲಿರುವ ದ್ವೀಪಗಳಲ್ಲಿ ಇಂದಿಗೂ ಯಾವುದೇ ಜಲಂರ್ತಾಗಾಮಿ ಕೇಬಲ್‌ಗಳ ಮೂಲಕ ಸೇವೆ ಒದಗಿಸುತ್ತಿಲ್ಲ. ದಕ್ಷಿಣ ಅಮೆರಿಕಾ, ಆಫ್ರಿಕಾ, ಕೆನೆಡಾ, ಚೀನಾ, ರಷ್ಯಾ ಮತ್ತು ಆಸ್ಟ್ರೇಲಿಯಾದ ದೊಡ್ಡ ಪ್ರದೇಶಗಳನ್ನುಳ್ಳ ಕೆಲವು ಖಂಡ ಮತ್ತು ದೇಶಗಳಲ್ಲಿನ ಪ್ರದೇಶಗಳಲ್ಲಿ ಸ್ಥಿರ ದೂರವಾಣಿಯು ವಿರಳವಾಗಿದೆ ಅಥವಾ ಅಸ್ತಿತ್ವದಲ್ಲೇ ಇಲ್ಲ. ಸಂಪರ್ಕ ಉಪಗ್ರಹವು ಅಂಟಾರ್ಕ್ಟಿಕಾದ ಅಂಚು ಮತ್ತು ಗ್ರೀನ್‌ಲೆಂಡ್‌ನ ಬೆಟ್ಟಗುಡ್ಡದ ಪ್ರದೇಶಗಳಲ್ಲಿ ಸಂಪರ್ಕವನ್ನು ಕಲ್ಪಿಸಿದೆ.

ಉಪಗ್ರಹ ದೂರವಾಣಿಗಳು ಭೂಸ್ಥಾಯೀ ಅಥವಾ ಕೆಳಮಟ್ಟದ ಭೂಕಕ್ಷೆ ಉಪಗ್ರಹಗಳ ಸಮೂಹಕ್ಕೆ ನೇರವಾಗಿ ಸಂಪರ್ಕಿಸುತ್ತವೆ. ನಂತರ ಪಬ್ಲಿಕ್ ಸ್ವಿಚ್ಡ್‌ ಟೆಲಿಫೋನ್‌ ನೆಟ್‌ವರ್ಕ್‌ ಅಥವಾ ಇನ್ನೊಂದು ಉಪಗ್ರಹ ದೂರವಾಣಿ ವ್ಯವಸ್ಥೆಗೆ ಸಂಪರ್ಕ ಹೊಂದಿರುವ ಉಪಗ್ರಹದ ಟೆಲಿಪೋರ್ಟ್‌ಗೆ ಕರೆಯನ್ನು ರವಾನಿಸುವುದು.

ಉಪಗ್ರಹೀಯ ದೂರದರ್ಶನ

[ಬದಲಾಯಿಸಿ]

ದೂರದರ್ಶನವು ಭೂಸ್ಥಾಯೀ ಸಂಪರ್ಕ ಉಪಗ್ರಹಗಳ ಮುಖ್ಯ ಮಾರುಕಟ್ಟೆಯಾಗಿದೆ. ಇದರ ಸಾಮರ್ಥ್ಯಕ್ಕೆ ಸರಿಯಾಗಿ ಹೊಂದುವ ಕೆಲಸವಾದ ದೊಡ್ಡ ಪ್ರಮಾಣದ ಬ್ಯಾಂಡ್‌ವಿಡ್ತ್‌ಗೆ ಸಂಬಂಧಿಸಿದ ಕೆಲವು ಸಂಕೇತಗಳನ್ನು ಏಕಕಾಲದಲ್ಲಿ ಹಲವು ರೀಸಿವರ್‌ಗಳಿಗೆ ತಲುಪಿಸುವುದಕ್ಕಾಗಿ ಹೆಚ್ಚಿನ ಬೇಡಿಕೆ ಇದಕ್ಕಿದೆ. ಉತ್ತರ ಅಮೆರಿಕಾದ ದೂರದರ್ಶನ ಮತ್ತು ರೇಡಿಯೊಗಾಗಿ ಬಳಸುವ ಎರಡು ಪ್ರಕಾರದ ಉಪಗ್ರಹಗಳೆಂದರೆ ನೇರ ಪ್ರಸಾರ ಉಪಗ್ರಹ (DBS) ಮತ್ತು ನಿರ್ದಿಷ್ಟ ಸೇವೆಯ ಉಪಗ್ರಹ (FSS)

ಉತ್ತರ ಅಮೆರಿಕಾದ ಹೊರಗೆ, ವಿಶೇಷವಾಗಿ ಯುರೋಪ್‌ನಲ್ಲಿ FSS ಮತ್ತು DBS ಉಪಗ್ರಹಗಳ ಕಾರ್ಯವು ಸ್ವಲ್ಪ ವಿಭಿನ್ನವಾಗಿದೆ. ಯುರೋಪ್‌ನಲ್ಲಿ ನೇರ ಮನೆಗೆ ದೂರದರ್ಶನ ಸೇವೆಗೆ ಬಳಸಿದ ಹೆಚ್ಚಿನ ಉಪಗ್ರಹಗಳು ಉತ್ತರ ಅಮೆರಿಕಾದಲ್ಲಿನ DBS-ಶ್ರೇಣಿಯ ಉಪಗ್ರಹಗಳಂತೆ ಹೆಚ್ಚು ಸಾಮರ್ಥ್ಯದ ಔಟ್‍‌‌ಪುಟ್‌ನ್ನು ಹೊಂದಿದೆ. ಆದರೆ ಇದು FSS-ಶ್ರೇಣಿಯ ಉಪಗ್ರಹದಂತೆ ಅದೇ ರೇಖಿಯ ಧ್ರುವೀಕರಣವನ್ನು ಬಳಸುವುದು. ಉದಾಹರಣೆಗೆ ಯುರೋಪ್‌ ಖಂಡದ ಮೇಲಿರುವ ಕಕ್ಷೆಯಲ್ಲಿರುವ ಅಸ್ಟ್ರಾ, ಯುಟೆಲ್‌ಸ್ಯಾಟ್‌ ಮತ್ತು ಹಾಟ್‌ಬರ್ಡ್‌ ಬಾಹ್ಯಾಕಾಶ ನೌಕೆ. ಇದರಿಂದಾಗಿ FSS ಮತ್ತು DBS ಎಂಬ ಪದವು ಉತ್ತರ ಅಮೆರಿಕಾ ಖಂಡದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದು, ಯುರೋಪ್‌ನಲ್ಲಿ ಇದನ್ನು ಅಷ್ಟಾಗಿ ಬಳಸುತ್ತಿಲ್ಲ.

ನಿರ್ದಿಷ್ಟ ಸೇವೆಯ ಉಪಗ್ರಹ

[ಬದಲಾಯಿಸಿ]

ನಿರ್ದಿಷ್ಟ ಸೇವೆಯ ಉಪಗ್ರಹಗಳ ನ್ನು C ಬ್ಯಾಂಡ್‌ ಮತ್ತು Ku ಬ್ಯಾಂಡ್‌ಗಳ ಕೆಳಭಾಗವನ್ನು ಬಳಸುತ್ತದೆ.ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ದೂರ ಶಿಕ್ಷಣ, ವ್ಯವಹಾರ ದೂರದರ್ಶನ (BTV), ವಿಡಿಯೋಕಾನ್ಫ‌ರನ್ಸಿಂಗ್‌, ಮತ್ತು ಸಾಮಾನ್ಯ ವಾಣಿಜ್ಯ ದೂರ ಸಂಪರ್ಕಕ್ಕಾಗಿ ಬಳಸುವ ಜೊತೆಗೆ ಟೆಲಿವಿಷನ್‌ ನೆಟ್‌ವರ್ಕ್‌ಗಳಿಂದ ಸ್ಥಳೀಯ ಪ್ರಸಾರ ಕೇಂದ್ರಗಳಿಗೆ ಮತ್ತು ಸ್ಥಳೀಯ ಪ್ರಸಾರ ಕೇಂದ್ರಗಳಿಂದ ಟೆಲಿವಿಷನ್‌ ನೆಟ್‌ವರ್ಕ್‌ಗಳಿಗೆ ಫೀಡ್‌ಗಳನ್ನು (ನೆಟ್‌ವರ್ಕ್‌ ಮತ್ತು ವಿಶೇಷ ಕಾರ್ಯಕ್ರಮಗಳಾಗಿ ಕಾರ್ಯಕ್ರಮ ಫೀಡ್‌ಗಳು, ನೇರ ಪ್ರಸಾರಗಳು ಮತ್ತು ಬ್ಯಾಕ್‌ಹೌಲ್‌ಗಳಂತಹ) ಪ್ರಸಾರ ಮಾಡುವುದಕ್ಕಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. FSS ಉಪಗ್ರಹಗಳನ್ನು ಸಹ ಕೇಬಲ್‌ ಟೆಲಿವಿಷನ್‌ ಹೆಡ್‌ಎಂಡ್‌ಗಳಿಗೆ ರಾಷ್ಟ್ರೀಯ ಕೇಬಲ್‌ ಚ್ಯಾನಲ್‌ಗಳನ್ನು ವಿತರಿಸಲು ಬಳಸಲಾಗುತ್ತದೆ.

ಮುಕ್ತ ಉಪಗ್ರಹ TV ಚ್ಯಾನಲ್‌ಗಳನ್ನು ಸಹ ಸಾಮಾನ್ಯವಾಗಿ FSS ಉಪಗ್ರಹಗಳ ಮೂಲಕ Ku ಬ್ಯಾಂಡ್‌ನಲ್ಲಿ ಪ್ರಸಾರ ಮಾಡಲಾಗುವುದು. ಉತ್ತರ ಅಮೆರಿಕಾಇಂಟೆಲ್‌ಸ್ಯಾಟ್‌ ಅಮೆರಿಕಾಸ್‌ 5, ಗ್ಯಾಲಕ್ಸಿ 10R ಮತ್ತು AMC 3 ಉಪಗ್ರಹಗಳು ತಮ್ಮ Ku ಬ್ಯಾಂಡ್‌ ಟ್ರಾನ್‌ಸ್ಪೋಂಡರ್‌ ಭಾರೀ ಪ್ರಮಾಣದಲ್ಲಿ FTA ಚ್ಯಾನಲ್‌ ಪ್ರಸಾರಕ್ಕಾಗಿ ನೆರವು ನೀಡುತ್ತವೆ.

ಅಮೆರಿಕನ್‌ ಡಿಶ್‌ ನೆಟ್‌ವರ್ಕ್ DBS ಸೇವೆಯನ್ನು ಇತ್ತೀಚೆಗೆ FSS ತಂತ್ರಜ್ಞಾನವನ್ನು ಬಳಸಿಕೊಂಡಿದೆ. FCC ನಿಯಮಗಳ ಪ್ರಕಾರ ಸ್ಥಳೀಯ ದೂರದರ್ಶನ ಕೇಂದ್ರಗಳಿಗೆ ಸಾಗಿಸಲು ಹೆಚ್ಚಿನ ಸಾಮರ್ಥ್ಯ "ರವಾನಿಸುವ" ಮತ್ತು HDTV ಚ್ಯಾನಲ್‌ಗಳನ್ನು ಸಾಗಿಸಲು ಹೆಚ್ಚಿನ ಬ್ಯಾಂಡ್‌ವಿಡ್ತ್‌ನ ಅಗತ್ಯವು ಇರುವ ಕಾರಣ ಮತ್ತು ಅದರ ಸುಪರ್‌ ಡಿಶ್‌ ಆಂಟೇನಾಕ್ಕೆ ಅಗತ್ಯವಿರುವ ಪ್ರೋಗ್ರಾಮ್‌ಗಳ ಪ್ಯಾಕೇಜ್‌ನ್ನು ಬಳಸುತ್ತಿದೆ.

ನೇರ ಪ್ರಸಾರ ಉಪಗ್ರಹ

[ಬದಲಾಯಿಸಿ]

ನೇರ ಪ್ರಸಾರ ಉಪಗ್ರಹ ವು ಒಂದು ಸಂಪರ್ಕ ಉಪಗ್ರಹವಾಗಿದೆ. ಇದು ಚಿಕ್ಕ DBS ಉಪಗ್ರಹ ಡಿಶ್‌ಗಳಿಗೆ ಸಂಕೇತವನ್ನು ರವಾನಿಸುತ್ತದೆ (ಸಾಮಾನ್ಯಾವಾಗಿ ಇದರ ವ್ಯಾಸವು ೧೮ ರಿಂದ ೨೪ ಅಂಗುಲಗಳವರೆಗೆ ಅಥವಾ ೪೫ ರಿಂದ ೬೦ ಸೆ.ಮೀ.ವರೆಗೆ ಇರುತ್ತದೆ). ಸಾಮಾನ್ಯವಾಗಿ ನೇರ ಪ್ರಸಾರ ಉಪಗ್ರಹಗಳು ಸೂಕ್ಷ್ಮ ತರಂಗ Ku ಬ್ಯಾಂಡ್‌ನ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುತ್ತವೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ದಿರೆಕ್ TV ಮತ್ತು ಡಿಶ್‌ ಜಾಲ, ಕೆನೆಡಾದಲ್ಲಿ ಬೆಲ್‌ TV ಮತ್ತು ಷಾ ಡೈರೆಕ್ಟ್‌, UKಯಲ್ಲಿ ಫ್ರೀಸ್ಯಾಟ್ ಮತ್ತು UKಯಲ್ಲಿ ಸ್ಕೈ ಡಿಜಿಟಲ್‌, ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ಮತ್ತು ನ್ಯೂಜಿಲೆಂಡ್‌ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ DTH-ಉದ್ದೇಶಿತ (ನೇರ ಮನೆಗೆ) ಉಪಗ್ರಹ TV ಸೇವೆಗಳಿಗಾಗಿ DBS ತಂತ್ರಜ್ಞಾನವನ್ನು ಬಳಸಲಾಗಿದೆ.

DBS, FSS ಉಪಗ್ರಹಗಳಿಗಿಂತ ಕೆಳಮಟ್ಟದ ತರಂಗಾಂತರ ಮತ್ತು ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವುದರಿಂದ ಸಂಕೇತಗಳನ್ನು ಸ್ವೀಕರಿಸುವುದಕ್ಕೆ ದೊಡ್ಡ ಗಾತ್ರದ ಡಿಶ್‌ನ ಅಗತ್ಯವಿದೆ (Ku ಬ್ಯಾಂಡ್‌ಗೆ ೩ ನಿಂದ ೮ ಅಡಿ (೧ ಯಿಂದ ೨.೫ಮೀಟರ್‌) ಮತ್ತು C ಬ್ಯಾಂಡ್‌ಗೆ ೧೨ ಅಡಿ (೩.೬ಮೀ) ಅಥವಾ ಅದಕ್ಕಿಂತ ದೊಡ್ಡ ವ್ಯಾಸ). ಅವುಗಳು ಪ್ರತಿ ಟ್ರಾನ್‌ಸ್ಪೋಂಡರ್‌ಗಳ RF ಇನ್‌ಪುಟ್‌ ಮತ್ತು ಔಟ್‌ಪುಟ್‌‌ಗಳಿಗೆ ರೇಖೀಯ ಧ್ರುವೀಕರಣವನ್ನು ಬಳಸುತ್ತವೆ (ಇದಕ್ಕೆ ವಿರುದ್ಧವಾಗಿ ವೃತ್ತಾಕಾರದ ಧ್ರುವೀಕರಣವನ್ನು DBS ಉಪಗ್ರಹಗಳು ಬಳಸುತ್ತವೆ). ಆದರೆ ಇದು ಬಳಕೆದಾರ ಗಮನಕ್ಕೆ ಬಾರದಂಥ ಚಿಕ್ಕ ತಾಂತ್ರಿಕ ವ್ಯತ್ಯಾಸ. ೧೯೭೦ನೆ ದಶಕದ ಉತ್ತರಾರ್ಧದಿಂದ ೧೯೯೦ನೆ ದಶಕದ ಆರಂಭದವರೆಗಿನ ಸಮಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ TVRO (ಟೆಲಿವಿಷನ್‌ ರೀಸಿವ್‌ ಓನ್ಲಿ) ರೀಸಿವರ್‌ಗಳು ಮತ್ತು ಡಿಶ್‌ಗಳ ಪ್ರಕಾರದಲ್ಲಿ DTH ಉಪಗ್ರಹ TVಸೇವೆಗಾಗಿ FSS ಉಪಗ್ರಹ ತಂತ್ರಜ್ಞಾನವನ್ನು ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿತ್ತು. ಈ ಉಪಗ್ರಹ ತಂತ್ರಜ್ಞಾನವು ಈಗ ಅಸ್ತಿತ್ವದಲ್ಲಿಲ್ಲದ ಪ್ರೈಮ್‌ಸ್ಟಾರ್‌ ಉಪಗ್ರಹ TV ಸೇವೆಗಾಗಿ Ku ಬ್ಯಾಂಡ್‌ ಪ್ರಕಾರವನ್ನು ಬಳಸುತ್ತಿತ್ತು.

ಇತ್ತೀಚೆಗೆ[ಯಾವಾಗ?] DirecTVಯ SPACEWAY-1 ಉಪಗ್ರಹ ಮತ್ತು ಅನಿಕ್‌ F2ನಂತಹ ಸಂಪರ್ಕ ಉಪಗ್ರಹಗಳನ್ನು Ka ಬ್ಯಾಂಡ್‌ನಲ್ಲಿ ಟ್ರಾನ್‌ಸ್ಪೋಂಡರ್‌ಗಳನ್ನು ಅಳವಡಿಸಿಕೊಂಡು ಉಡಾಯಿಸಲಾಗುತ್ತಿದೆ. ಇತ್ತೀಚೆಗೆ NASAವು ಸಹ Ka ಬ್ಯಾಂಡ್‌ಅನ್ನು ಬಳಸಿ ಪ್ರಾಯೋಗಿಕ ಉಪಗ್ರಹಗಳನ್ನು ಹಾರಿಸಿದೆ.

ಮೊಬೈಲ್‌ ಉಪಗ್ರಹ ತಂತ್ರಜ್ಞಾನಗಳು

[ಬದಲಾಯಿಸಿ]

ಆರಂಭದಲ್ಲಿ ಸ್ಥಿರ TV ರೀಸಿವರ್‌ಗಳಿಗಷ್ಟೆ ಪ್ರಸಾರಕ್ಕಾಗಿ ಲಭ್ಯವಿದ್ದದ್ದು, ೨೦೦೪ರ ಹೊತ್ತಿಗೆ ಜನಪ್ರಿಯ ಮೊಬೈಲ್‌ ನೇರ ಪ್ರಸಾರಕ್ಕೂ ಅನ್ವಯಗೊಳಿಸಲಾಯಿತು. ಈ ಬಳಕೆಯಿಂದಾಗಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎರಡು ಉಪಗ್ರಹ ರೇಡಿಯೊ ವ್ಯವಸ್ಥೆಗಳಾದ ಸಿರುಸ್‌ ಮತ್ತು XM ಸ್ಯಾಟಲೈಟ್‌ ರೇಡಿಯೊ ಹೋಲ್ಡಿಂಗ್ಸ್‌ ಅಸ್ತಿತ್ವಕ್ಕೆ ಬಂದವು. ಕೆಲವು ನಿರ್ಮಾಪಕರು DBS ದೂರದರ್ಶನದ ಸಂಕೇತದ ಮೊಬೈಲ್‌ ಸ್ವೀಕಾರಕ್ಕಾಗಿ ವಿಶೇಷ ಆಂಟೆನಾಗಳನ್ನು ಪರಿಚಿಯಿಸಿದರು. ಈ ಆಂಟೆನಾಗಳು GPS ತಂತ್ರಜ್ಞಾನವನ್ನು ಬಳಸಿ ವಾಹನವು ಯಾವುದೇ ಸ್ಥಳದಲ್ಲಿರೂ ಸಹ (ಆಂಟೆನಾವನ್ನು ಇದರ ಮೇಲೆ ಜೋಡಿಸಲಾಗಿರುತ್ತದೆ) ಸ್ವಯಂಚಾಲಿತವಾಗಿ ಉಪಗ್ರಹದಿಂದ ಸಂಕೇತ ಸ್ವೀಕರಿಸಲು ಅಣಿಯಾಗುತ್ತದೆ. ಈ ಮೊಬೈಲ್‌ ಉಪಗ್ರಹ ಆಂಟೆನಾಗಳು ಕೆಲವು ಮನರಂಜನೆ ಒದಗಿಸುವ ಮಾಲೀಕರಲ್ಲಿ ಜನಪ್ರಿಯವಾಗಿವೆ. ಜೆಟ್‌ಬ್ಲೂ ಏರ್‌ವೇಸ್‌ನಲ್ಲಿ ಆಸನಗಳಲ್ಲಿ ಅಳವಡಿಸಿದ LCD ಪರದೆಗಳಲ್ಲಿ DirecTVಯನ್ನು (ಜೆಟ್‌ಬ್ಲೂನ ಅಂಗ ಸಂಸ್ಥೆಯಾದ ಲೈವ್‌TV ಒದಗಿಸಿದ) ಪ್ರಯಾಣಿಕರ ವೀಕ್ಷಣೆಗೆ ಅನುವಾಗುವಂತೆ ಮೊಬೈಲ್‌ DBS ಆಂಟೆನಾಗಳನ್ನು ಬಳಸಲಾಗಿದೆ.

ಉಪಗ್ರಹ ರೇಡಿಯೊ

[ಬದಲಾಯಿಸಿ]

ರೇಡಿಯೊ ಉಪಗ್ರಹವು ಕೆಲವು ದೇಶಗಳಲ್ಲಿ ಧ್ವನಿ ಸೇವೆಯನ್ನು, ಅದರಲ್ಲೂ ವಿಶೇಷವಾಗಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನೀಡುತ್ತದೆ. ಖಂಡದಲ್ಲಿ ಎಲ್ಲೇ ಸಂಚರಿಸಿಕೊಂಡಿದ್ದರೂ ಕೇಳುಗರು ಒಂದೇ ಧ್ವನಿ ಕಾರ್ಯಕ್ರಮವನ್ನು ಕೇಳುವಂಥ ಮೊಬೈಲ್‌ ಸೇವೆಯನ್ನು ಉಪಗ್ರಹ ರೇಡಿಯೋ ಒದಗಿಸುತ್ತದೆ.

ಉಪಗ್ರಹ ರೇಡಿಯೊ ಅಥವಾ ಸಬ್‌ಸ್ಕ್ರಿಪ್ಷನ್ ರೇಡಿಯೊ(SR) ಸಂಪರ್ಕ ಉಪಗ್ರಹದ ಮೂಲಕ ಪ್ರಸಾರವಾಗುವ, ಪ್ರಾದೇಶಿಕ ರೇಡಿಯೊ ಸಂಕೇತಗಳಿಗಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ವ್ಯಾಪಿಸುವ ಡಿಜಿಟಲ್‌ ರೇಡಿಯೊ ಸಂಕೇತವಾಗಿದೆ.

ಭೂ ಆಧಾರಿತ ರೇಡಿಯೊ ಸೇವೆಗಳಿಗೆ ಸೂಕ್ತ ಅರ್ಥಪೂರ್ಣ ಬದಲಿ ಸೇವೆಯನ್ನು ಉಪಗ್ರಹ ರೇಡಿಯೊ ಕೆಲವು ದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ನೀಡುವುದು. ಸಿರುಸ್‌, XM ಮತ್ತು ವರ್ಲ್ಡ್‌ಸ್ಪೇಸ್‌ನಂತಹ ಮೊಬೈಲ್‌ ಸೇವೆಗಳು ಪೂರ್ಣ ಖಂಡದಲ್ಲಿ ಎಲ್ಲೇ ಸಂಚರಿಸುತ್ತಿದ್ದರೂ ಕೇಳುಗರು ಒಂದೇ ಧ್ವನಿ ಕಾರ್ಯಕ್ರಮವನ್ನು ಕೇಳಲು ನೆರವಾಗುವುದು. ಮ್ಯುಸಿಕ್‌ ಚಾಯಿಸ್‌ ಅಥವಾ ಮುಜಾಕ್‌ನ ಉಪಗ್ರಹ ಪ್ರಸಾರಿತ ವಿಷಯದಂಥ ಕೆಲವು ಸೇವೆಗಳಿಗೆ ನಿರ್ದಿಷ್ಟ ಸ್ಥಳ ಮತ್ತು ಆಂಟೆನಾ ಅಗತ್ಯವನ್ನು ಬೇಡುತ್ತದೆ. ಎಲ್ಲಾ ಸಂದರ್ಭದಲ್ಲಿ ಆಂಟೆನಾ ಉಪಗ್ರಹದ ಸಂಪರ್ಕಕ್ಕೆ ಸೂಕ್ತವಾದ ದಿಕ್ಕಿನತ್ತ ಮುಖಮಾಡಿರಬೇಕು. ಗಗನ ಚುಂಬಿ ಕಟ್ಟಡಗಳು, ಸೇತುವೆಗಳು ಅಥವಾ ವಾಹನ ನಿಲುಗಡೆ ಗ್ಯಾರೇಜುಗಳಂತಹ ಪ್ರದೇಶಗಳಲ್ಲಿ ಸಂಕೇತಗಳು ಅಸ್ಪಷ್ಟವಾಗಿದ್ದು, ಅಲ್ಲಿ ಕೇಳುಗರಿಗೆ ಸಂಕೇತ ದೊರೆಯುವಂತಾಗಲು ಆವರ್ತಕಗಳನ್ನು ಇರಿಸಲಾಗುವುದು.

ವಾಣಿಜ್ಯ ಉದ್ದಿಮೆಗಳು ರೇಡಿಯೊ ಸೇವೆಗಳನ್ನು ಒದಗಿಸುತ್ತದವೆ ಮತ್ತು ಇದು ಚಂದಾಧಾರಿತ ಸೇವೆಯಾಗಿರುತ್ತದೆ. ಅವುಗಳನ್ನು ಡಿಕೋಡ್‌ ಮಾಡಿ ಮತ್ತೆ ಕೇಳಲು ವಿಶೇಷ ಹಾರ್ಡ್‌ವೇರ್‌ಗಳ ಬಳಕೆಯ ಅಗತ್ಯವಿರುವ ವಿವಿಧ ಸೇವೆಗಳು ಖಾಸಗಿ ಒಡೆತನದಲ್ಲಿವೆ. ಸೇವೆಯನ್ನು ಒದಗಿಸುವವರು ವಾಡಿಕೆಯಂತೆ ಸುದ್ದಿ, ಹವಾಮಾನ, ಕ್ರೀಡೆ ಮತ್ತು ಸಂಗೀತ ಚ್ಯಾನಲ್‌ಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ಸಂಗೀತ ಚ್ಯಾನಲ್‌ಗಳು ವಾಣಿಜ್ಯೋದ್ಯೇಶದಿಂದ ಮುಕ್ತವಾಗಿರುತ್ತವೆ.

ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪ್ರಾದೇಶಿಕ ಪ್ರಸಾರಗಳನ್ನು ಅಧಿಕ ಜನರಿಗೆ ಅಲ್ಪ ವೆಚ್ಚದಲ್ಲಿ ಸುಲಭವಾಗಿ ತಲುಪಿಸಬಹುದಾಗಿದೆ. ಆದ್ದರಿಂದ UK ಮತ್ತು ಕೆಲವು ದೇಶಗಳಲ್ಲಿ ಉಪಗ್ರಹ ರೇಡಿಯೊಗಿಂತಲೂ, ಡಿಜಿಟಲ್‌ ಆಡಿಯೊ ಪ್ರಸಾರ (DAB) ಸೇವೆಗಳು ಅಥವಾ HD ರೇಡಿಯೊಗಳಲ್ಲಿ ಒತ್ತು ನೀಡಿರುವುದು ರೇಡಿಯೊ ಸೇವೆಯ ವಿಕಸನವಾಗಿದೆ. ಒಳಗೊಂಡ ವಿಷಯಗಳು [hide]

ಹವ್ಯಾಸಿ ರೇಡಿಯೊ

[ಬದಲಾಯಿಸಿ]

{ ವಿಶೇಷವಾಗಿ ಹವ್ಯಾಸಿ ರೇಡಿಯೊ ದಟ್ಟಣೆಯನ್ನು ನಿರ್ವಹಿಸಲೆಂದೇ ವಿನ್ಯಾಸಗೊಳಿಸಿದ {1}OSCAR ಉಪಗ್ರಹಗಳನ್ನು ೦}ಹವ್ಯಾಸಿ ರೇಡಿಯೊ ನಿರ್ವಾಹಕರು ತಲುಪಬಹುದಾಗಿದೆ. ಅಂತಹ ಹೆಚ್ಚಿನ ಉಪಗ್ರಹಗಳು ಬಾಹ್ಯಾಕಾಶಕ್ಕೆ ಕಳುಹಿಸಲಾದ ಆವರ್ತಕಗಳಂತೆ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಸಾಮಾನ್ಯವಾಗಿ UHF ಅಥವಾ VHF ರೇಡಿಯೊ ಸಾಧನ ಮತ್ತು ಯಾಗಿಸ್ ಅಥವಾ ಡಿಶ್‌ ಆಂಟೆನಾಗಳಂತಹ ಹೆಚ್ಚು ಪ್ರಬಲವಾಗ ದಿಕ್‌ಶೋಧಕ ಆಂಟೆನಾಗಳೊಂದಿಗೆ ಹವ್ಯಾಸಿಗಳು ಪ್ರವೇಶಿಸಬಹುದು, ಭೂ-ಆಧಾರಿತ ಹವ್ಯಾಸಿ ಸಾಧನಗಳ ಇತಿಮಿತಿಗಳಿಂದಾಗಿ, ಹಲವು ಹವ್ಯಾಸಿ ಉಪಗ್ರಹಗಳನ್ನು ತಂಬಾ ಕೆಳಮಟ್ಟದ ಭೂಕಕ್ಷೆಗಳಿಗೆ ಹಾರಿಸಿಬಿಡಲಾಗಿದೆಯಲ್ಲದೆ.ನೀಡಿದ ಸಮಯದಲ್ಲಿ ಮಿತ ಸಂಖ್ಯೆಯ ಸಂಕ್ಷಿಪ್ತ ಸಂಪರ್ಕಕ್ಕಾಗಿ ಮಾತ್ರ ವ್ಯವಹರಿಸುವಂತೆ ಇವನ್ನು ವಿನ್ಯಾಸಗೊಳಿಸಲಾಗಿದೆ. ಕೆಲವು ಉಪಗ್ರಹಗಳು AX.25 ಅಥವಾ ಸಮಾನ ಪ್ರೋಟೋಕಾಲ್‌ಗಳನ್ನು ಬಳಸಿ ದತ್ತಾಂಶ ರವಾನೆ ಸೇವೆಗಳನ್ನು ಸಹ ಪೂರೈಸುವುವು.

ಅಂತರಜಾಲ ಉಪಗ್ರಹ

[ಬದಲಾಯಿಸಿ]

೧೯೯೦ನೆ ದಶಕದ ನಂತರ ಸಂಪರ್ಕ ಉಪಗ್ರಹ ತಂತ್ರಜ್ಞಾನವು ಬ್ರೋಡ್‌ಬ್ಯಾಂಡ್‌ ಡಾಟಾ ಸಂಪರ್ಕದ ಮೂಲಕ ಅಂತರಜಾಲವನ್ನು ಸಂಪರ್ಕಿಸಲು ಬಳಸಲಾಗುತ್ತಿದೆ. ದೂರ ಪ್ರದೇಶದಲ್ಲಿ ನೆಲೆಸಿದ್ದುಬ್ರೋಡ್‌ಬ್ಯಾಂಡ್‌{ ಸಂಪರ್ಕ ಪ್ರವೇಶ ದುಸ್ತರವೆನಿಸುವವರಿಗೆ /0}ಈ ತಂತ್ರಜ್ಞಾನ ತುಂಬಾ ಉಪಯುಕ್ತವಾಗಿದೆ.

ಸೈನ್ಯದಲ್ಲಿ ಬಳಕೆ

[ಬದಲಾಯಿಸಿ]

ಸಂಪರ್ಕ ಉಪಗ್ರಹಗಳನ್ನು ಜಾಗತಿಕ ಹತೋಟಿ ಮತ್ತು ನಿಯಂತ್ರಣ ವ್ಯವಸ್ಥೆಗಳಂತಹ ಸೈನಿಕ ಸಂಪರ್ಕಗಳಸಾಧನಗಳನ್ನಾಗಿ ಬಳಸಲಾಗುತ್ತದೆ. ಯುನೈಟೆಡ್‌ ಸ್ಟೇಟ್ಸ್‌MILSTAR, DSCS ಮತ್ತು FLTSATCOM, NATO ಉಪಗ್ರಹಗಳು, ಯುನೈಟೆಡ್‌ ಕಿಂಗ್‌ಡಮ್‌ನ ಉಪಗ್ರಹಗಳು ಮತ್ತು ಹಿಂದಿನ ಸೋವಿಯತ್‌ ಒಕ್ಕೂಟದ ಉಪಗ್ರಹಗಳು ಸಂಪರ್ಕ ಉಪಗ್ರಹಗಳನ್ನು ಬಳಸುವ ಸೈನಿಕ ವ್ಯವಸ್ಥೆಗಳ ಉದಾಹರಣೆಗಳಾಗಿವೆ. ಹಲವು ಸೈನಿಕ ಉಪಗ್ರಹಗಳು X-ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು MILSTAR ಉಪಗ್ರಹವು Ka ಬ್ಯಾಂಡ್‌ನ್ನು ಬಳಸುತ್ತಿದ್ದು, ಕೆಲವು ಉಪಗ್ರಹಗಳು UHF ರೇಡಿಯೊ ಲಿಂಕ್‌ಗಳನ್ನು ಸಹ ಬಳಕೆ ಮಾಡಿಕೊಳ್ಳುತ್ತವೆ.

ನೌಕಾಯಾನದಲ್ಲಿನ ಬಳಕೆ

[ಬದಲಾಯಿಸಿ]

ಉಪಗ್ರಹಗಳ ಚಕಿತ ಬಳಕೆಗಳಲ್ಲಿ GPS (ಭೂಸ್ಥಾನಿಕ ಪತ್ತೆ ವ್ಯವಸ್ಥೆ) ಸಹ ಒಂದಾಗಿದೆ. ನೌಕಾಯಾನದಲ್ಲಿ ಉಪಯೋಗಿಸುವುದೇ ಇದರ ಆದ್ಯ ಉದ್ದೇಶ. ಈ ಉದ್ದೇಶಕ್ಕಾಗಿ ಪ್ರಪಂಚದ ಸುತ್ತಲೂ ೨೪ ಉಪಗ್ರಹಗಳ ಜಾಲವಿದೆ. ಒಂದರ ಮೇಲೊಂದು ಅತಿವ್ಯಾಪಿಸುವಂತೆ ಮತ್ತು ಸಮಾನ ಅಂತರದಲ್ಲಿರುವಂತೆ LEO ಉಪಗ್ರಹಗಳ ಜಾಲವನ್ನು ಹೆಣೆಯಲಾಗಿದೆ. ಪ್ರಸಾರಕ್ಕಾಗಿ ೧.೫೭೫೪೨Ghz ಮತ್ತು ೧.೨೨೭೬GHz ಅಲ್ಪದಷ್ಟು ಸೂಕ್ಷ್ಮ ತರಂಗಾಂತರಗಳನ್ನು ಅವುಗಳು ಬಳಸುತ್ತದೆ. ಭೂಮಿಯಲ್ಲಿರುವ ರೀಸಿವರ್‌ಗಳು ಏಕಕಾಲದಲ್ಲಿ ನಾಲ್ಕು ಉಪಗ್ರಹಗಳಿಂದ ಸಂಕೇತವನ್ನು ಸ್ವೀಕರಿಸುತ್ತದೆ. ಅಕ್ಷಾಂಶ ಮತ್ತು ರೇಖಾಂಶಗಳಲ್ಲಿ ನಿಖರವಾದ ಸ್ಥಾನವನ್ನು ಗೃಹಿಸಿ, ಲೆಕ್ಕಾಚಾರ ಹಾಕಿ ಪ್ರದರ್ಶಿಸಲು ರೀಸಿವರ್‌ನಲ್ಲಿ ಸೂಕ್ಷ್ಮ ಸಂವೇದಿಗಳನ್ನು ಹೊಂದಿರುತ್ತದೆ.

ಇದನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Satcomm

ಆಕರಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]