ಜಲಜನಕ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಜಲಜನಕ, H, 1 | ||||||||||||||
ರಾಸಾಯನಿಕ ಸರಣಿ | [[ಅಲೋಹಗಳು]] | ||||||||||||||
ಗುಂಪು, ಆವರ್ತ, ಖಂಡ | 1, 1, s | ||||||||||||||
ಸ್ವರೂಪ | |||||||||||||||
ಅಣುವಿನ ತೂಕ | 1.00794(7) g·mol−1 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | 1s¹ | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
1 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಅನಿಲ | ||||||||||||||
ಸಾಂದ್ರತೆ | (0 °C, 101.325 kPa) (0 °C, 101.325 kPa) 0.08988 g/L g/L | ||||||||||||||
ಕರಗುವ ತಾಪಮಾನ | 14.01 K
(−259.14 °C, −434.45 °F) K ( °C, °ಎಫ್) | ||||||||||||||
ಕುದಿಯುವ ತಾಪಮಾನ | 20.28 K
(−252.87 °C, −423.17 °F) K ( °C, °F) | ||||||||||||||
ತ್ರಿಗುಣ ಬಿಂದು | 13.8033 K (-259°C), 7.042 kPa K, kPa | ||||||||||||||
ಕ್ರಾಂತಿಬಿಂದು | 32.97 K, 1.293 MPa K, MPa | ||||||||||||||
ಸಮ್ಮಿಲನದ ಉಷ್ಣಾಂಶ | (H2) 0.117 kJ·mol−1 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | (H2) 0.904 kJ·mol−1 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) (25 °C)(H2)28.836 J·mol−1·K−1 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | hexagonal | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 1, −1 (amphoteric oxide) | ||||||||||||||
ವಿದ್ಯುದೃಣತ್ವ | 2.20 (Pauling scale) (Pauling scale) | ||||||||||||||
ಅಣುವಿನ ತ್ರಿಜ್ಯ | 25pm pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 53 pm pm | ||||||||||||||
ತ್ರಿಜ್ಯ ಸಹಾಂಕ | 37pm pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 120pm pm | ||||||||||||||
ಇತರೆ ಗುಣಗಳು | |||||||||||||||
ಉಷ್ಣ ವಾಹಕತೆ | (300 K) (300 K) 180.5 m W·m−1·K−1 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 8.8 µm·m−1·K−1 | ||||||||||||||
ಶಬ್ದದ ವೇಗ | (gas, 27 °C) 1310 m/s m/s | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 1333-74-0 | ||||||||||||||
ಉಲ್ಲೇಖನೆಗಳು | |||||||||||||||
ಜಲಜನಕ (Hydrogen - ಹೈಡ್ರೋಜನ್)ವು ಒಂದು ರಾಸಯನಿಕ ಮೂಲಧಾತು. ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತು. ಇದು ಅತ್ಯಂತ ಸರಳ, ಹಗುರವಾದ ಮೂಲಧಾತು. ಇದಕ್ಕೆ ಬಣ್ಣ, ರುಚಿ, ವಾಸನೆ ಇಲ್ಲ.[೧] ಇದರಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ. ಇದರ ಹೆಸರು ಗ್ರೀಕ್ ಭಾಷೆಯ 'ಜಲಜನಕ' ಎಂಬ ಅರ್ಥ ಕೊಡುವ ಎರಡು ಶಬ್ದಗಳಿಂದ ಬಂದಿದೆ.
ಇದು ಆವರ್ತಕೋಷ್ಟಕದ ೧ಎ ಗುಂಪಿನ ೧ನೆಯ ಆವರ್ತದ ಮೊದಲನೆಯ ಧಾತು. ಪ್ರತೀಕ H. ಪರಮಾಣು ಸಂಖ್ಯೆ ೧. ಪರಮಾಣು ತೂಕ ೧.೦೦೭೯೭. ದ್ರವನಬಿಂದು -೨೫೯0 ಸೆ. ಕುದಿಬಿಂದು -೨೫೨.೬೦ ಸೆ. ಸಾಪೇಕ್ಷ ಸಾಂದ್ರತೆ (೦೦ಸೆಲ್ಷಿಯಸಿನಲ್ಲಿ) ೦.೦೮೯೮೭. ಎಲೆಕ್ಟ್ರಾನ್ ವಿನ್ಯಾಸ 1s2. ವೇಲೆನ್ಸಿ ೧. ಹೈಡ್ರೊಜನ್-೧, ಹೈಡ್ರೊಜನ್-೨ (ಡ್ಯುಟೀರಿಯಮ್), ಹೈಡ್ರೊಜನ್-೩ (ಟ್ರೈಟಿಯಮ್) ಇವು ನೈಸರ್ಗಿಕ ಸಮಸ್ಥಾನಿಗಳು. ಇವುಗಳ ಪೈಕಿ ಕೊನೆಯದು ೧೨.೫ ವರ್ಷ ಅರ್ಧಾಯು ಇರುವ ವಿಕಿರಣಪಟು ಹಾಗೂ ಅಸ್ಥಿರ ಸಮಸ್ಥಾನಿ. ನೈಸರ್ಗಿಕ ಹೈಡ್ರೊಜನ್ ಈ ಮೂರೂ ಸಮಸ್ಥಾನಿಗಳ ಮಿಶ್ರಣ (ಸರಿಸುಮಾರು ಪ್ರಮಾಣ: ೯೯.೯೮೫%, ೦.೦೧೫%, ಶೇಷ).
ಗುಣಗಳು
ಬದಲಾಯಿಸಿಇದು ದಹ್ಯ ಅನಿಲ. ಗಿರಕಿ ಹೊಡೆಯುತ್ತಿರುವ ಎರಡು ಪರಮಾಣುಗಳಿರುವ ಬಲು ಸ್ಥಿರವಾದ ಅಣು ರೂಪದಲ್ಲಿರುವುದು ಸಾಮಾನ್ಯ.[೨] ಈ ಪರಮಾಣುಗಳ ಬೈಜಿಕ ಗಿರಕಿ (ನ್ಯೂಕ್ಲಿಯರ್ ಸ್ಪಿನ್) ಒಂದೇ ದಿಕ್ಕಿನಲ್ಲಿ ಇದ್ದರೆ ಆರ್ತೊಹೈಡ್ರೊಜನ್ ಎಂದು, ವಿರುದ್ಧ ದಿಕ್ಕುಗಳಲ್ಲಿದ್ದರೆ ಪ್ಯಾರಹೈಡ್ರೊಜನ್ ಎಂದು ಹೆಸರು. ಸಾಮಾನ್ಯ ಹೈಡ್ರೊಜನ್ ಇವೆರಡು ಸಮಾಂಗಿಗಳ(ಐಸೊಮರ್ಸ್) ಮಿಶ್ರಣ. ಅಣುವಿನ ಪರಮಾಣುಗಳನ್ನು ಪ್ರತ್ಯೇಕಿಸಲು ಅಗಾಧ ಪ್ರಮಾಣದ ಶಕ್ತಿ ಬೇಕು. ಅತ್ಯಂತ ಸರಳ ಪರಮಾಣು ಸಂರಚನೆಯುಳ್ಳ ಹೈಡ್ರೊಜನಿಗೆ ಅನೇಕ ವಿಶಿಷ್ಟ ಗುಣಗಳಿವೆ. ಇದು ಉತ್ತಮ ಅಪಕರ್ಷಣಕಾರಕ. ಅಸಾಮಾನ್ಯ ಕ್ರಿಯಾಶೀಲ ಧಾತು ಇದಲ್ಲವಾದರೂ ಇತರ ಧಾತುಗಳಿಗಿಂತ ಹೆಚ್ಚು ಸಂಯುಕ್ತಗಳನ್ನು ರೂಪಿಸುತ್ತದೆ. ಸಾಪೇಕ್ಷವಾಗಿ ಇದರ ಅಯಾನೀಕರಣ ಸಾಮರ್ಥ್ಯವೂ ಉಳಿದವುಗಳದ್ದಕ್ಕಿಂತ ಹೆಚ್ಚು. ಆದ್ದರಿಂದ ಇದರ ಬಹುತೇಕ ಸಂಯುಕ್ತಗಳು ಸಹವೇಲೆನ್ಸೀಯ ಬಂಧಗಳಿಂದ (ಕೊವೇಲೆಂಟ್ ಬಾಂಡ್) ಆಗಿವೆ. ಹೈಡ್ರೊಜನ್ ಅಯಾನಿನ ಆವೇಶ (ಚಾರ್ಜ್) ಮತ್ತು ತ್ರಿಜ್ಯ ನಿಷ್ಪತ್ತಿ ಬಲು ಹೆಚ್ಚು. ಎಂದೇ, ಅದು ಇತರ ಪದಾರ್ಥಗಳ ಸಂಯೋಗದಲ್ಲಿ ಮಾತ್ರ ಲಭ್ಯ. ಹೈಡ್ರೊಜನ್ ಅಣು ಹೈಡ್ರೈಡ್ ಅಯಾನುಗಳನ್ನೂ ಸಹವೇಲೆನ್ಸೀಯ ಹೈಡ್ರೈಡುಗಳನ್ನೂ ರೂಪಿಸಬಲ್ಲದು.
ಇತಿಹಾಸ
ಬದಲಾಯಿಸಿಜಲಜನಕವನ್ನು ೧೬ನೇ ಶತಮಾನದಲ್ಲಿ ಕೃತಕವಾಗಿ ಅಮ್ಲ ಮತ್ತು ಲೋಹದ ಮಿಶ್ರಣದಿಂದ ತಯಾರಿಸಲಾಯಿತು. ಇದು ಆ ಶತಮಾನದ ವಿಜ್ಞಾನಿಗಳಿಗೆ ತಿಳಿದಿತ್ತು. ಆ ಮೊದಲೇ ಆವಿಷ್ಕರಿಸಿದ್ದ ದಹ್ಯ ಅನಿಲಗಳ ಪೈಕಿ ಇದೂ ಒಂದೆಂದು ಭಾವಿಸಿ ನಿರ್ಲಕ್ಷಿಸಿದ್ದರು. 1766-81 ರಲ್ಲಿ, ಹೆನ್ರಿ ಕ್ಯಾವೆಂಡಿಶ್ ಹೈಡ್ರೋಜನ್ ಒಂದು ಪ್ರತ್ಯೇಕ ಪದಾರ್ಥ ಎಂದು ಗುರುತಿಸುವುದರಲ್ಲಿ ಮೊದಲಿಗರಾಗಿದ್ದರು.[೩] ಇವನು ಹೈಡ್ರೊಜನ್ ಮತ್ತು ಆಕ್ಸಿಜನ್‌ಗಳ ಸಂಯುಕ್ತ ನೀರು ಎಂಬುದನ್ನೂ ಪತ್ತೆಹಚ್ಚಿದ (೧೭೮೧). ಈ ಅನಿಲಕ್ಕೆ ಹೈಡ್ರೊಜನ್ ಎಂದು ನಾಮಕರಣ ಮಾಡಿದವ ಆಂತ್ವಾನ್ ಲೊರಾನ್ ಲೆವಾಸ್ಯೇ (೧೭೪೩-೯೪).[೪] ಇದು ಬಣ್ಣವಿಲ್ಲದ ಅನಿಲವಾಗಿದೆ[೫]. ಸ್ವತಂತ್ರ ಹೈಡ್ರೊಜನ್ ಭೂಮಿಯಲ್ಲಿ ವಿರಳವಾಗಿದ್ದರೂ ತಾರಾದ್ರವ್ಯದಲ್ಲಿ ಸಮೃದ್ಧವಾಗಿದೆ. ಹೈಡ್ರೊಜನ್ನಿನ ಸಂಯುಕ್ತಗಳು ಭೂಮಿಯಲ್ಲಿ ಹೇರಳವಾಗಿರುವುದರಿಂದ ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಇದರ ಕ್ರಮಾಂಕ ೯.
ದೊರೆಯುವಿಕೆ
ಬದಲಾಯಿಸಿವಿಶ್ವದಲ್ಲಿ ಸುಮಾರು ಶೇಕಡಾ ೭೫ ರಷ್ಟು ಜಲಜನಕವೇ ತುಂಬಿಕೊಂಡಿದೆ.[೬] ನಕ್ಷತ್ರಗಳಲ್ಲಿ ಪ್ಲಾಸ್ಮಾರೂಪದಲ್ಲಿ ಜಲಜನಕವಿದೆ. ಭೂಮಿಯಲ್ಲಿ ದೊರೆಯುವ ಮೂಲಧಾತುಗಳಲ್ಲಿ ಜಲಜನಕ ೯ನೇ ಅತೀ ಹೆಚ್ಚು ದೊರೆಯುವ ಮೂಲಧಾತುವಾಗಿದೆ. ಭೂ ಪದರದಲ್ಲಿ ಬೇರೆ ಮೂಲಧಾತುಗಳೊಂದಿಗೆ ಬೆರೆತು ರಾಸಾಯನಿಕ ಸಂಯುಕ್ತಗಳಾಗಿ ಸುಮಾರು ಶೇಕಡಾ ಒಂದರಷ್ಟಿದೆ. ಆದರೆ ಪರಮಾಣು ರೂಪದಲ್ಲಿ ಭೂಮಿಯಲ್ಲಿ ಜಲಜನಕವು ಅತ್ಯಲ್ಪ ಪ್ರಮಾಣದಲ್ಲಷ್ಟೇ ಇದೆ.
ಉಪಯೋಗಗಳು
ಬದಲಾಯಿಸಿಅಮೋನಿಯ ಸಂಶ್ಲೇಷಣೆ, ಘನಮೇದಸ್ಸಾಗಿ ಸಸ್ಯತೈಲಗಳ ಪರಿವರ್ತನೆ ಹಾಗೂ ಕೆಲವು ಕಾರ್ಬನಿಕ ಸಂಯುಕ್ತಗಳ ಉತ್ಪಾದನೆಗೆ ಹೈಡ್ರೊಜನೀಕರಣ, ಮೆತನೋಲ್ ಸಂಶ್ಲೇಷಣೆ, ಹೈಡ್ರೊಕ್ಲೋರಿಕಾಮ್ಲ ತಯಾರಿ, ಪೆಟ್ರೋಲಿಯಮ್ ಸಂಸ್ಕರಣೆ, ಆಕ್ಸಿಹೈಡ್ರೊಜನ್ ಹಾಗೂ ಪರಮಾಣು ಟಾರ್ಚ್, ಲೋಹೀಯ ಆಕ್ಸೈಡುಗಳ ಅಪಕರ್ಷಣೆ,[೭] ಲೋಹೀಯ ಹೈಡ್ರೈಡುಗಳ ತಯಾರಿ ಮುಂತಾದ ಅನೇಕ ಕಾರ್ಯಗಳಿಗೆ ಹೈಡ್ರೊಜನ್ ಬಳಕೆ ಇದೆ.
ಉಲ್ಲೇಖಗಳು
ಬದಲಾಯಿಸಿ- ↑ "Hydrogen". Encyclopædia Britannica (in ಇಂಗ್ಲಿಷ್). Archived from the original on 24 December 2021. Retrieved 25 December 2021.
- ↑ Staff (2003). "Hydrogen (H2) Properties, Uses, Applications: Hydrogen Gas and Liquid Hydrogen". Universal Industrial Gases, Inc. Archived from the original on 19 February 2008. Retrieved 5 February 2008.
- ↑ Presenter: Professor Jim Al-Khalili. "Discovering the Elements". Chemistry: A Volatile History. 25:40 minutes in. BBC. BBC Four. http://www.bbc.co.uk/programmes/b00q2mk5.
- ↑ Stwertka, Albert (1996). A Guide to the Elements. Oxford University Press. pp. 16–21. ISBN 978-0-19-508083-4.
- ↑ http://www.rsc.org/periodic-table/element/1/hydrogen
- ↑ Boyd, Padi (19 July 2014). "What is the chemical composition of stars?". NASA. Archived from the original on 15 January 2015. Retrieved 5 February 2008.
- ↑ Chemistry Operations (15 December 2003). "Hydrogen". Los Alamos National Laboratory. Archived from the original on 4 March 2011. Retrieved 5 February 2008.
ಹೊರಗಿನ ಕೊಂಡಿಗಳು
ಬದಲಾಯಿಸಿ- Basic Hydrogen Calculations of Quantum Mechanics
- Hydrogen at The Periodic Table of Videos (University of Nottingham)
- High temperature hydrogen phase diagram Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- Wavefunction of hydrogen