ವಿಷಯಕ್ಕೆ ಹೋಗು

ಜಾಲತಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂತರ್ಜಾಲ ತಾಣ ಇಂದ ಪುನರ್ನಿರ್ದೇಶಿತ)
ನಾಸಾ ಜಾಲತಾಣದ ಮುಖ್ಯಪುಟ

ಜಾಲತಾಣವು ಒಂದು ಒಂಟಿ ಪ್ರಭಾವಕ್ಷೇತ್ರ ನಾಮದಿಂದ (ಡೊಮೇನ್ ನೇಮ್) ಸೇವೆಪಡೆಯುವ ಸಂಬಂಧಿತ ಜಾಲಪುಟಗಳ ಸಮೂಹ. ಒಂದು ಜಾಲತಾಣವು ಕನಿಷ್ಠ ಒಂದು ವೆಬ್ ಸರ್ವರ್‍ನಲ್ಲಿ ಸ್ಥಳಾವಕಾಶ ಪಡೆದಿರುತ್ತದೆ, ಮತ್ತು ಏಕರೂಪ ಸಾಧನ ಶೋಧಕ (ಯೂನಿಫ಼ಾರ್ಮ್ ರಿಸೋರ್ಸ್ ಲೊಕೇಟರ್) ಎಂದು ಕರೆಯಲ್ಪಡುವ ಒಂದು ಅಂತರಜಾಲ ವಿಳಾಸದ ಮುಖಾಂತರ ಒಂದುಅಂತರಜಾಲ ಅಥವಾ ಖಾಸಗಿ ಸ್ಥಳೀಯ ವಲಯ ಜಾಲದಂತಹ (ಲೋಕಲ್ ಏರಿಯಾ ನೆಟ್‍ವರ್ಕ್) ಒಂದು ಜಾಲಬಂಧದ ಮೂಲಕ ಪ್ರವೇಶಿಸಬಲ್ಲದ್ದಾಗಿರುತ್ತದೆ. ಎಲ್ಲ ಸಾರ್ವಜನಿಕವಾಗಿ ಸುಲಭ ಗಮ್ಯ ಜಾಲತಾಣಗಳು ಒಟ್ಟಾಗಿ ವಿಶ್ವವ್ಯಾಪಿ ಜಾಲವನ್ನು (ವರ್ಲ್ಡ್ ವೈಡ್ ವೆಬ್) ರಚಿಸುತ್ತವೆ.