ವಿಷಯಕ್ಕೆ ಹೋಗು

ಗುತ್ತಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೨:೫೯, ೨೦ ನವೆಂಬರ್ ೨೦೧೭ ರಂತೆ Kartikdn (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: '''ಗುತ್ತಿಗೆ''' ಎಂದರೆ ಒಂದು ಸ್ವತ್ತಿನ ಬಳಕೆಗಾಗಿ ಗುತ್ತಿಗೆದಾರನು (ಬಳಕೆದಾರ)...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಗುತ್ತಿಗೆ ಎಂದರೆ ಒಂದು ಸ್ವತ್ತಿನ ಬಳಕೆಗಾಗಿ ಗುತ್ತಿಗೆದಾರನು (ಬಳಕೆದಾರ) ಗೇಣಿದಾತನಿಗೆ ಸಂದಾಯಮಾಡುವಂತೆ ಕೋರುವ ಒಂದು ಒಪ್ಪಂದದ ವ್ಯವಸ್ಥೆ.[] ಆಸ್ತಿ, ಕಟ್ಟಡಗಳು ಮತ್ತು ವಾಹನಗಳು ಗುತ್ತಿಗೆಕೊಡಲಾಗುವ ಸಾಮಾನ್ಯ ಸ್ವತ್ತುಗಳು. ಕೈಗಾರಿಕಾ ಅಥವಾ ವ್ಯಾಪಾರ ಉಪಕರಣವನ್ನೂ ಗುತ್ತಿಗೆಗೆ ಕೊಡಲಾಗುತ್ತದೆ.

ಸ್ಥೂಲವಾಗಿ ಹೇಳುವುದಾದರೆ, ಗುತ್ತಿಗೆ ಒಪ್ಪಂದವು ಎರಡು ಪಕ್ಷಗಳಾದ ಗೇಣಿದಾತ ಮತ್ತು ಗುತ್ತಿಗೆದಾರರ ನಡುವಿನ ಒಂದು ಒಪ್ಪಂದ. ಗೇಣಿದಾತನು ಸ್ವತ್ತಿನ ನ್ಯಾಯಸಮ್ಮತ ಒಡೆಯ; ಗುತ್ತಿಗೆದಾರನು ನಿಯಮಿತ ಬಾಡಿಗೆ ಪಾವತಿಗಳಿಗೆ ಪ್ರತಿಯಾಗಿ ಸ್ವತ್ತನ್ನು ಬಳಸುವ ಹಕ್ಕನ್ನು ಪಡೆಯುತ್ತಾನೆ. ಗುತ್ತಿಗೆದಾರನು ಆಸ್ತಿ ಅಥವಾ ಉಪಕರಣದ ಬಳಕೆಗೆ ಸಂಬಂಧಿಸಿದಂತೆ ವಿವಿಧ ಷರತ್ತುಗಳಿಗೆ ಬದ್ದವಾಗಿರಲು ಕೂಡ ಸಮ್ಮತಿಸುತ್ತಾನೆ. ಉದಾಹರಣೆಗೆ, ಒಂದು ಕಾರನ್ನು ಗುತ್ತಿಗೆಗೆ ಪಡೆಯುವ ವ್ಯಕ್ತಿಯು ಆ ಕಾರನ್ನು ಕೇವಲ ವೈಯಕ್ತಿಕ ಬಳಕೆಗಾಗಿ ಮಾತ್ರ ಬಳಸುವನೆಂದು ಸಮ್ಮತಿಸಬಹುದು.

ಯಾವ ಗುತ್ತಿಗೆಯಲ್ಲಿ ಸ್ವತ್ತು ಮೂರ್ತ ಆಸ್ತಿಯಾಗಿರುವುದೊ ಅದನ್ನು ವರ್ಣಿಸಲು ಹೆಚ್ಚು ಸಂಕೀರ್ಣ ಪದವಾದ ಬಾಡಿಗೆ ಒಪ್ಪಂದವನ್ನು ಬಳಸಬಹುದು. ಅಮೂರ್ತ ಆಸ್ತಿಯ ಗುತ್ತಿಗೆಯ ಉದಾಹರಣೆಗಳೆಂದರೆ ಗಣಕ ಕ್ರಮವಿಧಿಯ ಬಳಕೆ (ಪರವಾನಗಿಗೆ ಹೋಲುತ್ತದೆ, ಆದರೆ ನಿಬಂಧನೆಗಳು ಭಿನ್ನವಾಗಿರುತ್ತವೆ), ಅಥವಾ ರೇಡಿಯೋ ಆವೃತ್ತಿಯ ಬಳಕೆ (ಉದಾಹರಣೆಗೆ ಸೆಲ್‍ಫ಼ೋನ್ ಒದಗಿಸುವವರೊಂದಿಗಿನ ಒಪ್ಪಂದ).

ಬಾಡಿಗೆ ಒಪ್ಪಂದ ಪದವನ್ನು ಕೆಲವೊಮ್ಮೆ ಅಂತರರಾಷ್ಟ್ರೀಯವಾಗಿ ನಿಯತಕಾಲಿಕ ಗುತ್ತಿಗೆ ಒಪ್ಪಂದವನ್ನು (ಬಹುತೇಕ ವೇಳೆ ತಿಂಗಳ-ತಿಂಗಳ ಗುತ್ತಿಗೆ) ವರ್ಣಿಸಲೂ ಬಳಸಲಾಗುತ್ತದೆ.

ಒಂದು ಗುತ್ತಿಗೆ ಒಪ್ಪಂದದಲ್ಲಿ ಈ ಸಾಮಾನ್ಯ ಅಂಶಗಳು ಸೇರಿರುತ್ತವೆ: ಒಪ್ಪಂದದ ಪಕ್ಷಗಳ ಹೆಸರುಗಳು; ಒಪ್ಪಂದದ ಆರಂಭದ ದಿನಾಂಕ ಮತ್ತು ಕಾಲಾವಧಿ; ಗುತ್ತಿಗೆ ಕೊಡಲಾಗುತ್ತಿರುವ ನಿರ್ದಿಷ್ಟ ವಸ್ತುವನ್ನು ಗುರುತಿಸುವ ಮಾಹಿತಿ (ರಸ್ತೆ ವಿಳಾಸ, ರಚನೆ/ವಿನ್ಯಾಸ, ಕ್ರಮ ಸಂಖ್ಯೆ); ನವೀಕರಣ ಮಾಡುವುದಕ್ಕೆ ಅಥವಾ ಮಾಡದಿರುವುದಕ್ಕೆ ಷರತ್ತುಗಳನ್ನು ಒದಗಿಸುವುದು; ಈ ವಸ್ತುವಿನ ಬಳಕೆಯನ್ನು ನೀಡುವುದಕ್ಕೆ ಒಂದು ನಿರ್ದಿಷ್ಟ ಸಂದಾಯದ ಮಾಹಿತಿ (ಇಡಿಗಂಟು, ಅಥವಾ ನಿಯತಕಾಲಿಕ ಪಾವತಿಗಳು); ಭದ್ರತಾ ಠೇವಣಿಗೆ ನಿಬಂಧನೆಗಳು ಮತ್ತು ಅದನ್ನು ಹಿಂದಿರುಗಿಸುವ ಕುರಿತು ನಿಯಮಗಳು ಇರುತ್ತವೆ; ಪೂರ್ವನಿಯೋಜಿತ ಷರತ್ತುಗಳು ಮತ್ತು ನಿರ್ದಿಷ್ಟ ಪರಿಹಾರಗಳು ಎಂದು ವರ್ಣಿಸಲಾದ ನಿರ್ದಿಷ್ಟ ಷರತ್ತುಗಳ ಪಟ್ಟಿ ಇರಬಹುದು; ಪಕ್ಷಗಳ ಮೇಲೆ ಹೊರಿಸಲಾದ ಇತರ ನಿರ್ದಿಷ್ಟ ಷರತ್ತುಗಳು ಇರಬಹುದು, ಉದಾ. ನಷ್ಟಕ್ಕಾಗಿ ವಿಮೆ ಒದಗಿಸುವ ಅಗತ್ಯ, ನಿರ್ಬಂಧಿತ ಬಳಕೆ, ನಿರ್ವಹಣೆಗೆ ಯಾವ ಪಕ್ಷ ಜವಾಬ್ದಾರನಿರುವುದು ಎಂದು; ಮುಕ್ತಾಯದ ಷರತ್ತು (ಒಪ್ಪಂದ ಮುಂಚಿತವಾಗಿ ಕೊನೆಯಾದರೆ ಅಥವಾ ರದ್ದಾದರೆ ಏನು ಆಗುತ್ತದೆಂದು ವಿವರಿಸುತ್ತದೆ, ಗುತ್ತಿಗೆಯನ್ನು ಅಂತ್ಯಗೊಳಿಸಲು ಪಕ್ಷಗಳ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಹೇಳುತ್ತದೆ).

ಎಲ್ಲ ಬಗೆಯ ವೈಯಕ್ತಿಕ ಆಸ್ತಿ (ಉದಾ. ಕಾರುಗಳು, ಪೀಠೋಪಕರಣಗಳು) ಅಥವಾ ಸ್ಥಿರಾಸ್ತಿಯನ್ನು (ಉದಾ. ಜಮೀನು, ಅಪಾರ್ಟ್‍‌ಮೆಂಟ್‍ಗಳು, ಏಕ ಕುಟುಂಬ ಮನೆಗಳು, ಮತ್ತು ವ್ಯಾಪಾರ ಆಸ್ತಿ) ಗುತ್ತಿಗೆ ನೀಡಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Stickney and Weil 2007 p. 791 (Glossary of Financial Accounting: An Intro. to Concepts, Methods, and Use 12e).