ಹಿಂದಿನ ಪೋಸ್ಟನ್ನು ತಿದ್ದಿದ ಮೊದಲ ಪ್ರಯತ್ನ ಕೆಳಗಿದೆ ....
(ತಿದ್ದದ ಪ್ರಯತ್ನವನ್ನೂ ಓದುವಿರಾದರೆ 'ನಾವು ಮನುಜರು' ನೋಡಿ )
ಕಾಮದ ಕತ್ತಲಾಟಕ್ಕೆ
ಚಿಗುರಿದ ಮೊಳಕೆ
ಮಡಿಲಿಲ್ಲ ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ
ಹೇಗೂ 'ನವರಾತ್ರಿ'ಯ ಹೊತ್ತು
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು ಕೇಳಲು ಅವಳಿಗಿಲ್ಲ ಬಾಯಿ
ಹತ್ತುಪಾಲು ವಾಸಿ ಹರಿದು ತಿನ್ನುವ ಕಸಾಯಿ
ಅವಳ ಮಗುವಿನ ಹಾಲು
ಇವಳ ಕಂದನ ಪಾಲು
ಇದು ಜನನದ ಬಲಿ !
ಜೀವ ಬೆಳೆಯಲು ಬೇಕೊಂದು ಮಡಿಲು
ತಾಯಿ ಬೇರ ತಂದರಾಯ್ತು ಮಹಾನಗರಿಗೆ
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು ಜೀವ
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ
ಇದು ಜತನದ ಬಲಿ !
ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು 'ಮೈನಾ' ಗೂಡು
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ
ಇದು ನೆಲೆಯ ಬಲಿ !
ಜೀವಜಾಲವ ಕಾಣಬೇಕು ಬೆಳೆದ ಜೀವ
ಘರ್ಜಿಸುವುದ ಮರೆತ ರಾಜ
ಪಂಜರದಲಿಟ್ಟ ಮೂಕ ಗಿಳಿ
ಆಡುವುದ ಮರೆತ ಮೊಲ
ನೋಡುತ್ತಾ ನಿಂತ ಕಾಲ
ಇದು ಬುಧ್ಧಿಯ ಬಲಿ !
ಬಲಿಗಳಲ್ಲೇ ಬೆಳೆದ ಜೀವ
ಚಕ್ರವರ್ತಿಯದಲ್ಲ ಮನೋಭಾವ
ಹೇಗಾದಿತು ?
ಹೆಜ್ಜೆ ನಮಸ್ಕಾರದಲುದಯಿಸಿದ
ತಂಗದಿರ, ತಾರೆಯರ
ಬಲಿಗಳ ಪಯಣಕ್ಕಿಲ್ಲ ಕೊನೆ
ಬದುಕು (?) ನಡೆಯುವುದೇ ಬಲಿಗಳಲ್ಲಿ
ಅವರು ಕಲಿತ ಸತ್ಯ
ನಾವೇ ಕಲಿಸಿದ ತಥ್ಯ
ಜಗದಗಲ ಕಾಳಿಯ ನಾಲಿಗೆ
ಬಲಿಯಾಗಲಿ 'ನಾನು' ನಾಳೆಗೆ .
(ತಿದ್ದದ ಪ್ರಯತ್ನವನ್ನೂ ಓದುವಿರಾದರೆ 'ನಾವು ಮನುಜರು' ನೋಡಿ )
ಚಿತ್ರ ಕೃಪೆ : ಅಂತರ್ಜಾಲ
ಕಾಮದ ಕತ್ತಲಾಟಕ್ಕೆ
ಚಿಗುರಿದ ಮೊಳಕೆ
ಮಡಿಲಿಲ್ಲ ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ
ಹೇಗೂ 'ನವರಾತ್ರಿ'ಯ ಹೊತ್ತು
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು ಕೇಳಲು ಅವಳಿಗಿಲ್ಲ ಬಾಯಿ
ಹತ್ತುಪಾಲು ವಾಸಿ ಹರಿದು ತಿನ್ನುವ ಕಸಾಯಿ
ಅವಳ ಮಗುವಿನ ಹಾಲು
ಇವಳ ಕಂದನ ಪಾಲು
ಇದು ಜನನದ ಬಲಿ !
ಜೀವ ಬೆಳೆಯಲು ಬೇಕೊಂದು ಮಡಿಲು
ತಾಯಿ ಬೇರ ತಂದರಾಯ್ತು ಮಹಾನಗರಿಗೆ
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು ಜೀವ
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ
ಇದು ಜತನದ ಬಲಿ !
ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು 'ಮೈನಾ' ಗೂಡು
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ
ಇದು ನೆಲೆಯ ಬಲಿ !
ಜೀವಜಾಲವ ಕಾಣಬೇಕು ಬೆಳೆದ ಜೀವ
ಘರ್ಜಿಸುವುದ ಮರೆತ ರಾಜ
ಪಂಜರದಲಿಟ್ಟ ಮೂಕ ಗಿಳಿ
ಆಡುವುದ ಮರೆತ ಮೊಲ
ನೋಡುತ್ತಾ ನಿಂತ ಕಾಲ
ಇದು ಬುಧ್ಧಿಯ ಬಲಿ !
ಬಲಿಗಳಲ್ಲೇ ಬೆಳೆದ ಜೀವ
ಚಕ್ರವರ್ತಿಯದಲ್ಲ ಮನೋಭಾವ
ಹೇಗಾದಿತು ?
ಹೆಜ್ಜೆ ನಮಸ್ಕಾರದಲುದಯಿಸಿದ
ತಂಗದಿರ, ತಾರೆಯರ
ಬಲಿಗಳ ಪಯಣಕ್ಕಿಲ್ಲ ಕೊನೆ
ಬದುಕು (?) ನಡೆಯುವುದೇ ಬಲಿಗಳಲ್ಲಿ
ಅವರು ಕಲಿತ ಸತ್ಯ
ನಾವೇ ಕಲಿಸಿದ ತಥ್ಯ
ಜಗದಗಲ ಕಾಳಿಯ ನಾಲಿಗೆ
ಬಲಿಯಾಗಲಿ 'ನಾನು' ನಾಳೆಗೆ .
